ಸಣ್‌ಕತೆಗಳು
ಆತ ಪ್ರಖ್ಯಾತ ಬ್ಯಾಟ್ಸ್‌ಮನ್. ಘಟಾನುಘಟಿ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ್ದ ಆತ ಮನೆಯಲ್ಲಿ ತನ್ನ ಹೆಂಡತಿಯನ್ನು ಎದುರಿಸಲಾಗದೆ ವಿಚ್ಛೇದನಕ್ಕೆ ಮೊರೆ ಹೋದ.
=
ಆತ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ. ದಾರಿಯಲ್ಲಿ ಬೆಕ್ಕೊಂದು ಅಡ್ಡ ಹೋಯಿತು. ಅಪಶಕುನವೆಂದು ಅಲ್ಲಿಯೇ ಸ್ವಲ್ಪ ಹೊತ್ತು ನಿಂತ. ಬೆಳಿಗ್ಗೆಯೇ ಈತನ ಮುಖಾರವಿಂದ ದರ್ಶನ ಮಾಡಿ ಆ ಕಡೆ ಹೋದ ಬೆಕ್ಕಿಗೆ ಬೈಕೊಂದು ಗುದ್ದಿ ಅದು ಸ್ಥಳದಲ್ಲಿಯೇ ಸಾವನ್ನಪ್ಪಿತು. ಟಿ
ಬನ್ನಿಮಂಟಪ
ನಾಟಕ ಬಹುಮುಖಿ
ರಂಗಶಂಕರದಲ್ಲಿ ಸಂಚಯ ತಂಡ, ಬೆಂಗಳೂರು ಅವರಿಂದ 'ಬಹುಮುಖಿ' ನಾಟಕವಿದೆ. ವಿವೇಕ್ ಶಾನಬಾಗ್ ರಚಿಸಿರುವ ಎಸ್. ಸುರೇಂದ್ರನಾಥ್ ನಿರ್ದೇಶಿಸಿರುವ ಈ ನಾಟಕವು ಜೂನ್ 18ರ ಸಂಜೆ 7-30ಕ್ಕೆ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98453 82525. ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.