ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆರ್ಥಿಕ ಅಪರಾಧಗಳು

ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು...

Rashmi Kasaragodu
Updated On : 18 Jun 2014, 2:18 am

ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
    ಯಾವುದೇ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವ ಮೊದಲು ಕಂಪನಿಯ ವಿವರವನ್ನು ತಿಳಿದುಕೊಳ್ಳುವುದು ನಂತರ ಹೂಡಿಕೆ ಮಾಡುವುದು. ಇದರಿಂದ ಅದು ನಕಲಿ ಅಥವಾ ಅಸಲಿ ಕಂಪನಿ ಎಂಬುದು ತಿಳಿಯುತ್ತದೆ.
    ಆರ್‌ಬಿಐನಿಂದ ಮಾನ್ಯತೆ ಪಡೆದ ಕಂಪನಿಗಳಲ್ಲಿ ಮಾತ್ರ ಹಣ ಹೂಡಿಕೆ ಮಾಡುವುದರಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ.
    ಆಕರ್ಷಕ ಬಡ್ಡಿದರ ಹಾಗೂ ಲಾಭಾಂಶಕ್ಕೆ ಮಾರುಹೋಗದಿರುವುದು ಒಳಿತು.
    ನೋಂದಣಿಯಾಗದ ಬಡ್ಡಿ ಅಥವಾ ಚೀಟಿ ವ್ಯವಹಾರ ಮಾಡುವವರ ಬಳಿ ನಿಮ್ಮ ಹಣ ಹೂಡದಿರುವುದು ಉತ್ತಮ.
    ಆನ್‌ಲೈನ್ ಮೂಲಕ ಇ-ಮೇಲ್ ಮತ್ತು ಮೊಬೈಲ್ ಎಸ್‌ಎಂಎಸ್‌ಗಳಿಗೆ ಮಾರುಹೋಗಿ ಹಣವನ್ನು ಹೂಡಿಕೆ ಮಾಡದಿರುವುದು ಕ್ಷೇಮ.
    ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುವವರ ಬಗ್ಗೆ ಎಚ್ಚರದಿಂದ ಇರುವುದು ಒಳಿತು.
    ಇಂಟರ್‌ನೆಟ್ ಮೂಲಕ ಹಣಕಾಸು ವ್ಯವಹಾರ ಮಾಡುವವರು, ಆಗಿಂದಾಗ್ಗೆ ವ್ಯವಹಾರದ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
    ನಕಲಿ ಕಂಪನಿಗಳ ಬಗ್ಗೆ ಕೂಡಲೇ ಪೊಲೀಸ್ ಠಾಣೆಗೆ  ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವುದು. ಇದರಿಂದ ಮುಂದಾಗುವ ವಂಚನೆ ಪ್ರಕರಣ ತಪ್ಪಿಸಬಹುದು.
    ಇಂತಹ ಆರ್ಥಿಕ ಅಪರಾಧಗಳನ್ನು ಮಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಬೇರೆಯವರು ತೊಂದರೆಗೊಳಗಾಗುವುದನ್ನು ತಪ್ಪಿಸಬಹುದು.ಟಿ


- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement