ನೇರವಾಗಿರಿ
ಯಾವುದೇ ವಿಷಯ ಹೇಳಬೇಕೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದರಿಂದ ಕೇಳುವವರದ್ದೂ ಸಮಯ ...
ಯಾವುದೇ ವಿಷಯ ಹೇಳಬೇಕೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದರಿಂದ ಕೇಳುವವರದ್ದೂ ಸಮಯ ವೇಸ್ಟು, ಹೇಳುವವರದ್ದೂ ಎನರ್ಜಿ ವೇಸ್ಟು. ಸುಮ್ಮನೆ ವಿಷಯವೇನೋ ಅರುಹಬಾರದೇ?
ಇವತ್ತಾಗಿರೋ ಒಂದು ಘಟನೆ ಹೇಳೋಕೆ ನಿನ್ನೆ ಬೆಳಿಗ್ಗೆ ನೀವು ತಿಂಡಿ ತಿಂದಿದ್ದರಿಂದ ಶುರು ಮಾಡುವುದಕ್ಕೆ ಅರ್ಥವಿದೆಯೇ?
ಎಲ್ಲೋ ಭಾಷಣ ಮಾಡಬೇಕಿದೆ, ಹೆಚ್ಚು ಸಮಯ ಮಾತನಾಡುವುದರಿಂದ ನೀವು ಉತ್ತಮ ವಾಗ್ಮಿ ಎನಿಸಿಕೊಳ್ಳುವುದಿಲ್ಲ. ಏನು ಮಾತನಾಡುತ್ತೀರಿ, ಹೇಗೆ ಹೇಳುತ್ತೀರಿ ಎಂಬುದಷ್ಟೇ ನಿಮ್ಮನ್ನು ಉತ್ತಮ ತೀರ್ಪಿಗೊಳಪಡಿಸುವುದು.
ಅವಳಿಗೆ ಪ್ರಪೋಸ್ ಮಾಡಬೇಕು.ನೂರಾರು ಬಾರಿ ಇನ್‌ಡೈರೆಕ್ಟ್ ಆಗಿ ಹೇಳಿ ಅವಳು ತಿಳಿಯದವಳಂತೆ ಇರುವುದು ನಾಟಕವೋ ನಿಜವೋ ಎಂದು ತಲೆ ಕೆಡಿಸಿಕೊಳ್ಳುವ ಬದಲು, ಏನಾದರಾಗಲಿ ಎಂದು ಒಂದೇ ಮಾತಿನಲ್ಲಿ ಹೇಳಬೇಕಿರುವುದನ್ನು ಹೇಳಿನೋಡಿ. ಅಲ್ಲೇ ಡ್ರಾ ಅಲ್ಲೇ ಬಹುಮಾನ!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.