ಗ್ರೇಟರ್ ಫ್ಲೆಮಿಂಗೊ
ಫ್ಲೆಮಿಂಗೊ ಜಾತಿಯಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ. ಆಫ್ರಿಕ, ದಕ್ಷಿಣ ಏಷ್ಯಾ, ಭಾರತ ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶ ಮತ್ತು ದಕ್ಷಿಣ ಯೂರೋಪ್ ದೇಶಗಳಲ್ಲಿ ವಾಸಿಸುತ್ತವೆ.
ಇವುಗಳಿಗೆ ಅಮೆರಿಕನ್ ಫ್ಲೆಮಿಂಗೊ ಮತ್ತು ಚಿಲಿಯನ್ ಫ್ಲೆಮಿಂಗೊ ನಿಕಟ ಸಂಬಂಧಿಗಳು. ಇವುಗಳು ಮಣ್ಣಿನ ದಿಬ್ಬದ ಮೇಲೆ ಅಸ್ಪಷ್ಟ ಬಿಳಿ ಬಣ್ಣದ ಒಂದು ಮೊಟ್ಟೆಯಿರುಸುತ್ತವೆ.
ಹೆಚ್ಚಿನ ಫ್ಲೆಮಿಂಗೊಗಳು ಗುಲಾಬಿ ಆವೃತ ಬಿಳಿಯ ಬಣ್ಣ ಹೊಂದಿರುತ್ತವೆ. ರೆಕ್ಕೆಯ ಮೇಲ್ಭಾಗದ ಪುಕ್ಕ ಕೆಂಪು ಬಣ್ಣದಿಂದ ಮತ್ತು ಕೆಳಭಾಗದ ಪುಕ್ಕ ಕಪ್ಪು ಬಣ್ಣದಿಂದ ಕೂಡಿರುತ್ತವೆ.
ಕಾಲುಗಳು ಸಂಪೂರ್ಣ ಗುಲಾಬಿ ಬಣ್ಣದಿಂದ ಆವೃತವಾಗಿರುತ್ತದೆ. ಭಾರತದಲ್ಲಿ ಇವುಗಳನ್ನು ರಾಜಹಂಸ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಾರ್ಷಿಕ 20-27 ಮೊಟ್ಟೆಗಳನ್ನಿಡುತ್ತವೆ.