ಟೊಮೇಟೊ ಸ್ಪೈಸಿ ದಾಲ್
ಬೇಕಾಗುವ ಪದಾರ್ಥಗಳು: ಈರುಳ್ಳಿ 1 (ಕತ್ತರಿಸಿದ್ದು), ಕ್ಯಾರೇಟ್ 1 (ಕತ್ತರಿಸಿದ್ದು), ಹಸಿಮೆಣಸು 4, ಮಧ್ಯಮ ಗಾತ್ರದ ಟೊಮೇಟೊ 4, ದಾಲ್ ಅರ್ಧ ಕಪ್(ನೆನೆಸಿದ್ದು), ಬೆಳ್ಳುಳ್ಳಿ 3, ಶುಂಠಿ 1 ಇಂಚಿನಷ್ಟು, ತೆಂಗಿನ ತುರಿ ಅರ್ಧ ಕಪ್, ಸಾಸಿವೆ ಅರ್ಧ ಸ್ಪೂನ್, ಅರಶಿನ ಪುಡಿ ಅರ್ಧ ಸ್ಪೂನ್, ಜೀರಿಗೆ ಅರ್ಧ ಸ್ಪೂನ್, ಇಂಗು ಅರ್ಧ ಸ್ಪೂನ್, ಲಿಂಬೆ ಹಣ್ಣು 1, ಕರಿಬೇವಿನೆಲೆ, ಬಾದಾಮಿ 3.
ಮಾಡುವ ವಿಧಾನ: ಪ್ಯಾನ್ನಲ್ಲಿ ಅರ್ಧ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಜೀರಿಗೆ, ಹಸಿಮೆಣಸು, ಕಪ್ಪು ಉದ್ದಿನಬೇಳೆಯನ್ನು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಟೊಮೇಟೊ ಉಪ್ಪು, ಇಂಗು ಮತ್ತು ಅರಶಿನ ಪುಡಿ ಸೇರಿಸಿ ಪ್ಯಾನ್ಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ದಾಲ್ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. 2 ಕಪ್ ನೀರು ಸೇರಿಸಿ ಬೇಳೆ ಬೇಯುವವರೆಗೆ ಮುಚ್ಚಳ ಮುಚ್ಚಿ. ಗ್ರೇವಿ ದಪ್ಪನಾಗಿ ಕಂಡುಬಂದಲ್ಲಿ ಸ್ವಲ್ಪ ನೀರು ಸೇರಿಸಿ ತೆಳುವಾಗಿಸಿ. ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿಬೇಯಿಸಿದ ಬೇಳೆಗೆ ಸೇರಿಸಿ 2-3 ನಿಮಿಷಗಳ ಕಾಲ ಕುದಿಸಿ ಮತ್ತು ಹುರಿದ ಬಾದಾಮಿಯಿಂದ ಅಲಂಕರಿಸಿ.
ಟೊಮೇಟೊ ಸ್ಪೈಸಿ ದಾಲ್ ಸಿದ್ಧ. ಅನ್ನ ಅಥವಾ ಚಪಾತಿಯೊಂದಿಗೆ ಸೇವಿಸಬಹುದು.