ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕರ್ಣಕುಂಡಲಗಳ ಭಾಗ್ಯ

ಒಬ್ಬ ರಾಜನ ಆಸ್ಥಾನದಲ್ಲಿ ಒಬ್ಬ ಚತುರ ಕವಿಯಿದ್ದ. ಅವನು ರಸಿಕನೂ ಅಹುದು. ಅವನಿಗೂ ಆಸ್ಥಾನ ನರ್ತಕಿಗೂ...

Rashmi Kasaragodu
Updated On : 25 Jun 2014, 3:35 am

ಒಬ್ಬ ರಾಜನ ಆಸ್ಥಾನದಲ್ಲಿ ಒಬ್ಬ ಚತುರ ಕವಿಯಿದ್ದ. ಅವನು ರಸಿಕನೂ ಅಹುದು. ಅವನಿಗೂ ಆಸ್ಥಾನ ನರ್ತಕಿಗೂ ಅದ್ಹೇಗೋ ಗೆಣೆತನ. ಆಕೆಯೊಡನೆ ಏಕಾಂತದ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ನಾನಾ ಆಟವಾಡಿದ್ದಾನೆ. ತದನಂತರ ಒಂದು ದಿನ, ಆಸ್ಥಾನದಲ್ಲಿ ಆಕೆಯ ನರ್ತನದ ಕಾರ್ಯಕ್ರಮವಿದೆ. ಆಕೆಯನ್ನು ನೋಡಿ ಕವಿಗೆ ಯಾವ್ಯಾವುದೋ ನೆನಪುಗಳು ಉಕ್ಕುತ್ತಿವೆ. ಆದರೆ ರಾಜನರ್ತಕಿ ರಾಜನಿಗೇ ಮೀಸಲು ತಾನೆ? ಇಬ್ಬರ ಸಂಗದ ಕತೆ ರಾಜನಿಗೆ ಗೊತ್ತಾದರೆ ಇಬ್ಬರದೂ ತಲೆ ಹೋಗುವುದು ಗ್ಯಾರಂಟಿ. ಆದರೆ ತನ್ನ ಮನದಾಳ ನರ್ತಕಿಗೆ ಗೊತ್ತಾಗಬೇಕು. ಹಾಗೆ ಒಂದು ಕವಿತೆ ಕಟ್ಟುತ್ತಾನೆ.

ಅಲಂಕರ್ತುಂ ಕರ್ಣೌ ಭೃಶಮನುಭವಂತ್ಯಾ ನವರುಜಂ
ಸಸೀತ್ಕಾರಂ ತಿರ್ಯಗ್ವಲಿತವದನಾಯಾ ಮೃಗದೃಶಃ
ಕರಾಬ್ಜವ್ಯಾಪಾರಾನತಿಸುಕೃತಸಾರಾನ್ರಸಯತೋ
ಜನುಃ ಸರ್ವಶ್ಲಾಘ್ಯಂ ಜಯತಿ ಲಲಿತೋತ್ತಂಸ ಭವತಃ

ಆಹಾ ಮುದ್ದು ಕರ್ಣಕುಂಡಲಗಳೇ! ನೀವು ಯಾವತ್ತೋ ಮಾಡಿದ ಪುಣ್ಯಫಲವನ್ನು ಈಗ ಅನುಭವಿಸುತ್ತಿರಬೇಕು. ಈಕೆ ಆಗಾಗ ನಿಮ್ಮ ಮೇಲೆ ತನ್ನ ಕಮಲದ ಎಸಳುಗಳಂಥ ಕೋಮಲವಾದ ಕೈಗಳನ್ನು ಆಡಿಸುವಾಗ ನೀವು ಸ್ವರ್ಗಸುಖ ಅನುಭವಿಸುತ್ತಿರುವಿರಿ. ಹಿಂದೆಂದೋ ನೀವು ಆಕೆಯ ಕೋಮಲವಾದ ಕಿವಿಗಳನ್ನು ಚುಚ್ಚಿ ಅವುಗಳನ್ನು ಅಲಂಕರಿಸುವಾಗ ಆಕೆ ಹಿತವಾದ ನೋವನ್ನು ಅನುಭವಿಸುತ್ತಾ ಆಹಾ, ಅಯ್ಯೋ ಎಂದೆಲ್ಲ ಸೀತ್ಕರಿಸಿರಬೇಕು!
ಕವಿ ಇಲ್ಲಿ ಕರ್ಣಕುಂಡಲಗಳ ಬಗ್ಗೆ ಹೇಳುತ್ತಾ ಬೇರೇನನ್ನೋ ಸೂಚಿಸುತ್ತಿದ್ದಾನೆ. ಅದೇನು ಎಂಬುದನ್ನು ಓದುಗರ ಊಹೆಗೇ ಬಿಡುತ್ತೇನೆ. ಒಂದು ಮಾತು: ಒಳ್ಳೆಯ ಕಾವ್ಯಗಳೆಲ್ಲಾ ಇಂಥ 'ಅನ್ಯೋಕ್ತಿ'ಗಳೇ. ಹಾಗೆಂದರೆ, ಒಂದನ್ನು ಹೇಳಿ ಇನ್ನೊಂದು ಅರ್ಥವನ್ನು ಹೊಳೆಯಿಸುವುದು.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement