ಮಿ.ಐಝೊ ಹೇಳುತ್ತಾರೆ...
ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್. ಯಡಿಯೂರಪ್ಪನವರು ತಮ್ಮ ಹೆಸರನ್ನು 'ಯಡ್ಯೂರಪ್ಪ' ಎಂದು ಬದಲಿಸಿಕೊಂಡಿದ್ದು, ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜಯಲಲಿತಾ ಕೆಲವು ವರ್ಷಗಳ ಹಿಂದೆ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಿಸಿಕೊಂಡಿದ್ದು ನೆನಪಿದೆಯೆ? ಅದೆಲ್ಲ ಸಂಖ್ಯಾಶಾಸ್ತ್ರದ ಮಹಿಮೆ. ಈಗಂತೂ ಜ್ಯೋತಿಷದಷ್ಟೇ ಸಂಖ್ಯಾಶಾಸ್ತ್ರವೂ ಪ್ರಸಿದ್ಧವಾಗುತ್ತಿದೆ. ನಿಮ್ಮ ಮನದಲ್ಲೂ ಎಂದಾದರೂ ಆ ಕುರಿತು ತಿಳಿಯುವ, ಕಡೇಪಕ್ಷ ನಿಮ್ಮ ಹೆಸರಿನಲ್ಲಿ ಅಡಗಿರುವ ರಹಸ್ಯವನ್ನಾದರೂ ಬಿಡಿಸುವ ಯೋಚನೆ ಹೊಳೆದಿರಬಹುದು. ನ್ಯೂಮರಾಲಜಿಯ ಗುಟ್ಟು ರಟ್ಟು ಮಾಡುವ ವಿಧಾನ ಗೊತ್ತಿಲ್ಲದೆ ಬೇಸರಿಸಿಕೊಂಡಿರಲೂಬಹುದು. ಸಂಖ್ಯಾಶಾಸ್ತ್ರ ಈಗ ಕನ್ನಡಿಯೊಳಗಿನ ಗಂಟಲ್ಲ. ಎಲ್ಲರೂ ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲಿ ಎಂದೇ ಆಸ್ಟ್ರೇಲಿಯಾದ ವೃತ್ತಿಪರ ಸಂಖ್ಯಾಶಾಸ್ತ್ರಜ್ಞ ಐಝೋ ಈಗ ಪುಸ್ತಕವೊಂದನ್ನು ರಚಿಸಿದ್ದಾರೆ.
2011ರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ವೇಳೆ ಭಾರತದ ಎಲ್ಲ ಪಂದ್ಯಗಳ ಫಲಿತಾಂಶವನ್ನೂ ನಿಖರವಾಗಿ ಅಂದಾಜಿಸಿದ್ದರು ಐಝೊ. ನಂತರ ನಡೆಸಿದ ಸಮೀಕ್ಷೆಯಲ್ಲಿ ಸಾಕಷ್ಟು ಮಂದಿ ಸಂಖ್ಯಾಶಾಸ್ತ್ರ ಕಲಿಯುವ ಬಯಕೆ ವ್ಯಕ್ತಪಡಿಸಿದ್ದರಿಂದ ಆನ್‌ಲೈನ್‌ನಲ್ಲಿಯೇ ಐಝೋ ಸ್ಕೂಲ್ ಅನ್ನೂ ಆರಂಭಿಸಿದ್ದರು. ಅವರ ವೆಬ್‌ಸೈಟ್ ಢಿಢಿಢಿ.್ಝಣ್ಟಜ್ಝಛಠ್ಡಿಜ.್ಛ್ಟಟ ಭಾರತದಲ್ಲಿ ಬಹಳ ಜನಪ್ರಿಯ. ಐಝೋ ಪಬ್ಲಿಕೇಷನ್ಸ್ ಪ್ರಕಟಿಸಿರುವ 'ಮಿ.ಐಝೊ ಸೇಯ್ಸ್' ಕೃತಿ ಈಗ ಭಾರತ, ಕರ್ನಾಟಕದಲ್ಲೂ ಲಭ್ಯ. ಬೆಂಗಳೂರು ದಿ ಲೀಲಾ ಗ್ಯಾಲೆರಿಯಾದಲ್ಲಿರುವ ಆಕ್ಸ್‌ಫರ್ಡ್ ಬುಕ್‌ಸ್ಟೋರ್ ಸೇರಿದಂತೆ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಕೃತಿ ಸಿಗುತ್ತಿದೆ. ಬೆಲೆ: ರು.330.
'ಯುವಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕೃತಿ ರಚಿಸಿದ್ದೇನೆ. ಸಂಖ್ಯೆಗಳ ಮೂಲಕ ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತು ಕೊಳ್ಳಲು ಸಾಧ್ಯವಿದೆ. ಯುವಜನತೆ ವಿದ್ಯಾಭ್ಯಾಸ ಅಥವಾ ವೃತ್ತಿ ವಿಚಾರದಲ್ಲಿ ಯಶಸ್ಸು ಗಳಿಸಲು ಈ ಕೃತಿ ಖಂಡಿತವಾಗಲೂ ನೆರವಾಗಲಿದೆ' ಎನ್ನುವುದು ಐಝೊ ವಿಶ್ವಾಸದ ನುಡಿ.
ತಮ್ಮ ವೈಬ್‌ಸೈಟ್‌ನಲ್ಲೇ ಅವರು 'ಐಝೊ ಶಾಪಿ'ಯನ್ನು ಸಹ ಆರಂಭಿಸಿದ್ದಾರೆ. ಅದರ ಮೂಲಕ ನಿಗದಿತ ಶುಲ್ಕ ವಾಪತಿಸಿ ಬ್ಯುಸಿನೆಸ್, ಹೂಡಿಕೆ, ಸಂಬಂಧ ಇತ್ಯಾದಿ ವಿಚಾರಗಳ ಬಗ್ಗೆ ಅರಿತುಕೊಳ್ಳಬಹುದು.