ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶಿಷ್ಯನೊಬ್ಬ ಕಡೆದ ಶಬ್ದಶಿಲ್ಪ!

Vishwanath S
Updated On : 2 Mar 2014, 3:24 am

ವಿವೇಕಾನಂದರನ್ನು ಇಂದು ಜೀವಂತವಾಗಿ ಕಾಣದ ನಮಗೆ ಅವರ ಜೀವನಚರಿತ್ರೆಯನ್ನು ಮನಗಾಣಿಸುವ ಅನೇಕ ಪುಸ್ತಕಗಳು ಸಿಗುತ್ತವೆ. ಅಂಥವುಗಳನ್ನೆಲ್ಲ ಓದಿದರೂ ನಮಗೆ ಅವರ ನಿಜಜೀವನ ಹೇಗಿತ್ತು? ಅವರ ವ್ಯಕ್ತಿತ್ವದ ಸ್ವರೂಪವೇನು? ಎಂಬ ಪ್ರಶ್ನೆಗಳು ಕಾಡುವುದು ಸಹಜ. ಆದರೆ ಸ್ವಾಮೀಜಿ ನೈಜವ್ಯಕ್ತಿತ್ವವನ್ನು ಕಣ್ತುಂಬಿಸುವ ಅಪರೂಪದ ಬರಹಗಳು ಕಾಣಸಿಗುತ್ತವೆ. ಅಂತಹ ವ್ಯಕ್ತಿತ್ವವನ್ನು ಕಡೆದಿರುವ ಶಬ್ದಶಿಲ್ಪವನ್ನು ಇಲ್ಲಿ ಕಾಣಬಹುದು.
ಸ್ವಾಮೀಜಿಯ ನ್ಯೂಯಾರ್ಕ್‌ನ ಶಿಷ್ಯನೊಬ್ಬ 'ಮೊದಲ ಬಾರಿಗೆ ಅವರನ್ನು ನೋಡುತ್ತಿದ್ದೆನಾದ್ದರಿಂದ ನನಗೆ ಅವರ ನಡೆನುಡಿಗಳೆಲ್ಲ ತೀರಾ ಸಾಮಾನ್ಯವಾಗಿ ಕಂಡುಬಂದವು. ಅವರನ್ನು ಎಷ್ಟೋ ಜನ ಕರೆದಿದ್ದಂತೆ 'ವೇದಾಂತ ಸೊಸೈಟಿಯ ಸಿಂಹ' ಎಂದು ಕರೆಯುವಷ್ಟು ವಿಶೇಷವೇನೂ ನನಗೆ ತೋರಲಿಲ್ಲ. ದೊಡ್ಡ ಮನುಷ್ಯರಾದವರು ಯಾವಾಗಲೂ ಇತರರಿಂದ ಸ್ವಲ್ಪ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಅವರೇನೂ ನಮ್ಮಿಂದ ದೂರವಿರಲಿಲ್ಲ. ನೆಲದ ಮೇಲೆಯೇ ಕುಳಿತರು, ಸಲ್ಲಾಪ ನಡೆಸಿದರು, ನಕ್ಕರು, ತಮಾಷೆ ಮಾಡಿದರು. ಯಾವುದರಲ್ಲೂ ಔಪಚಾರಿಕತೆಯಿಲ್ಲ. ಆದರೆ ಒಂದು ವಿಷಯ ಮಾತ್ರ ನಿಜ. ಅವರು ವೇದಿಕೆಯ ಮೇಲೆ ಇತರರೊಂದಿಗೆ ನಿಂತಿದ್ದಾಗ ಮಾತ್ರ ಮಿಂಚಿನಂತೆ ನನ್ನ ಮನಸ್ಸಿಗೆ ಹೊಳೆಯಿತು, ಆಹ್! ಅದೇನು ಭವ್ಯತೆ! ಧೀರತೆ! ಅವರಿಗೆ ಹೋಲಿಸಿ ನೋಡಿದರೆ ಅವರ ಅಕ್ಕಪಕ್ಕದಲ್ಲಿರುವವರೆಲ್ಲ ತೀರಾ ಯಃಕಶ್ಚಿತ್ತರಂತೆ ಕಂಡುಬರುತ್ತಿದ್ದಾರಲ್ಲ ಎನಿಸಿತು' ಎಂದು ತನ್ನ ಬರಹದಲ್ಲಿ ದಾಖಲಿಸಿದ್ದ.
ಸ್ವಾಮೀಜಿಯನ್ನು ಇತರರಿಂದ ಪ್ರತ್ಯೇಕಿಸಿದ ಆ ಅಂಶವೆಂದರೆ, ಅವರ ಮುಖದಲ್ಲಿ ಎದ್ದು ಕಾಣುವ ಭಾವಪ್ರಕಾಶ! ಇದೇ ಅವರಲ್ಲಿ ಇತರರಿಗಿಂತ ಹೆಚ್ಚಾಗಿ ಕಂಡುಬರುತ್ತಿದ್ದ ವಿಶೇಷತೆ!


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement