ಬೈಟುಕಾಫಿ

ಒಟ್ಟಿಗೇ ಎರಡು ಕಾಮನಬಿಲ್ಲು ಕಾಣಲು ಸಾಧ್ಯವೇ?

ಕೆಲವೊಮ್ಮೆ ಒಟ್ಟಿಗೇ ಎರಡು ಕಾಮನಬಿಲ್ಲುಗಳು ಮೂಡುತ್ತವೆ! ಇದು ಆಶ್ಚರ್ಯವೆನಿಸಿದರೂ ದಿಟ. ಕಾಮನಬಿಲ್ಲು ಮೂಡುವುದು ...

ಕೆಲವೊಮ್ಮೆ ಒಟ್ಟಿಗೇ ಎರಡು ಕಾಮನಬಿಲ್ಲುಗಳು ಮೂಡುತ್ತವೆ! ಇದು ಆಶ್ಚರ್ಯವೆನಿಸಿದರೂ ದಿಟ. ಕಾಮನಬಿಲ್ಲು ಮೂಡುವುದು ಸೂರ್ಯನಿಗೆ ಅಭಿಮುಖವಾಗಿ. ಮಳೆಯ ನೀರಿನ ಹನಿಗಳು ಪಟ್ಟಕದಂತೆ ವರ್ತಿಸುವುದರಿಂದ ಬಿಳಿಯ ಬೆಳಕಿನ ಕಿರಣ 'ಪೃಥಕರಣ' ಹೊಂದಿ ಬಣ್ಣದ ಕಾಮನಬಿಲ್ಲು ಮೂಡುತ್ತದೆ. ಇದು ನಮಗೆ ಗೊತ್ತಿರುವ ವಿಷಯವೇ.
ಆದರೆ ಕೆಲವೊಮ್ಮೆ ಎರಡು ಕಾಮನಬಿಲ್ಲುಗಳನ್ನು ನೋಡಬಹುದು. ಒಂದರ ಮೇಲೆ ಒಂದು ಕಾಮನಬಿಲ್ಲು ಮೂಡಿರುವುದನ್ನು ಕಾಣುತ್ತೇವೆ. ಮೇಲಿನ ಕಾಮನಬಿಲ್ಲು ಕೆಳಗಿನದಕ್ಕಿಂತ ಸ್ವಲ್ಪ ಮಸುಕಾಗಿರುತ್ತದೆ. ಇದನ್ನು 'ಗೌಣ' ಕಾಮನಬಿಲ್ಲು ಎಂದೂ ಕರೆಯುತ್ತಾರೆ. ಬೆಳಕಿನ ಕಿರಣವು ಕೆಲವೊಮ್ಮೆ ನೀರಿನ ಹನಿಯಲ್ಲಿ ಎರಡು ಸಲ ಆಂತರಿಕ ಪ್ರತಿಫಲನ ಹೊಂದುತ್ತದೆ. ಇಲ್ಲಿ ಪ್ರತಿಫಲನ ಹೊಂದಿದ ಕೆಂಪು ಕಿರಣವು ನೀರಿನ ಹನಿಯಿಂದ 52 ಡಿಗ್ರಿ ಕೋನದಲ್ಲಿ ನಮ್ಮ ಕಣ್ಣನ್ನು ಸೇರುತ್ತದೆ. ಆದರೆ ನೇರಳೆ ಬಣ್ಣದ ಕಿರಣವು 54 ಡಿಗ್ರಿ ಕೋನದಲ್ಲಿ ಹೊರಬರುತ್ತದೆ. ಈ ಕಾರಣದಿಂದ ಗೌಣ ಕಾಮನಬಿಲ್ಲು ಮೂಡುತ್ತದೆ. ಗೌಣ ಕಾಮನಬಿಲ್ಲಿನ ಮೇಲ್ಪಟ್ಟಿಯು ನೇರಳೆಬಣ್ಣದ್ದಾಗಿರುತ್ತದೆ. ಕೆಳಗಿನ ಪಟ್ಟಿಯು ಕೆಂಪಾಗಿರುತ್ತದೆ. ಬೆಳಕು ಎರಡು ಸಲ ಪ್ರತಿಫಲನ ಹೊಂದುವುದರಿಂದ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಗೌಣ ಕಾಮನಬಿಲ್ಲು ಮಸುಕಾಗಿ ಕಾಣುತ್ತದೆ.

- ಎಚ್. ಕೃಷ್ಣಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!