ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆವರಿದ ಕೈಗಳು

'ರಘುವಂಶ'ವು ಕಾಳಿದಾಸನ ಹೆಸರನ್ನು ಅಳಿಸದಂತೆ ಸಾರಸ್ವತ ಲೋಕದಲ್ಲಿ ಕೆತ್ತಿಟ್ಟ ಕೃತಿಗಳಲ್ಲಿ ಇನ್ನೊಂದು. ಅದರಲ್ಲಿ ಬರುವ ...

Rashmi Kasaragodu
Updated On : 3 Mar 2014, 2:10 am

'ರಘುವಂಶ'ವು ಕಾಳಿದಾಸನ ಹೆಸರನ್ನು ಅಳಿಸದಂತೆ ಸಾರಸ್ವತ ಲೋಕದಲ್ಲಿ ಕೆತ್ತಿಟ್ಟ ಕೃತಿಗಳಲ್ಲಿ ಇನ್ನೊಂದು. ಅದರಲ್ಲಿ ಬರುವ ಸೂರ್ಯವಂಶದ ರಾಜ- ರಾಜಕುಮಾರ- ರಾಣಿಯರ ಸಾಂಸಾರಿಕ- ಸಾಮಾಜಿಕ ಚಿತ್ರಣವು ಮನೋಜ್ಞವಾದುದು. ಇಂದುಮತಿಯ ಸ್ವಯಂವರಕ್ಕೆ ಸೂರ್ಯವಂಶದ ಸುಕುಮಾರನಾದ ಅಜನು ಬಿಜಯಂಗೈದು, ಅಲ್ಲಿ ಆಕೆಯಿಂದ ಮಾಲೆ ಹಾಕಿಸಿಕೊಳ್ಳುತ್ತಾನೆ. ವಿವಾಹ ಮಹೋತ್ಸವದಲ್ಲಿ ಅವರಿಬ್ಬರೂ ಹೋಮ ಧೂಮಗಳಲ್ಲಿ ಮಿಂದೇಳುವ ವಿಧಿಬದ್ಧ ಚಿತ್ರಣಗಳಲ್ಲಿದೆ ಕಾಳಿದಾಸನ ಕಲ್ಪನೆಯ ಸೊಗಸು.

ಅಸ್ವೀದ್ವರಃ ಕಂಟಕಿತಪ್ರಕೋಷ್ಠಃ ಸ್ವಿನ್ನಾಂಗುಲಿಃ ಸಂವವೃತೇ ಕುಮಾರೀ
ತಸ್ಮಿನ್ ದ್ವಯೇ ತತ್‌ಕ್ಷಣಮಾತ್ಮವೃತ್ತಿಃ
ಸಮಂ ವಿಭಕ್ತೇವ ಮನೋಭವೇನ
ತಯೋರಪಾಂಗಪ್ರತಿಸಾರಿತಾನಿ ಕ್ರಿಯಾಸಮಾಪತ್ತಿನಿವರ್ತಿತಾನಿ
ಹ್ರೀಯಂತ್ರಣಾಮಾನಶಿರೇ ಮನೋಜ್ಞಾಂ ಅನ್ಯೋನ್ಯಲೋಲಾನಿ ವಿಲೋಚನಾನಿ


ರಾಜಕುಮಾರ ಅಜನು ವಧು ಇಂದುಮತಿಯ ಕೈಯನ್ನು ಹಿಡಿದುಕೊಂಡಿದ್ದ. ಆತನ ಮುಂಗೈ ರೋಮಾಂಚಿತಗೊಂಡಿತ್ತು. ವಧುವಿನ ಕೈಬೆರಳುಗಳು ಬೆವರಿ ಒದ್ದೆಯಾಗಿದ್ದವು. ಹೇಗೆಂದರೆ, ಮನ್ಮಥನು ಇಬ್ಬರಲ್ಲೂ ತನ್ನ ಘಾತದ ಪರಿಣಾಮವನ್ನು ಸಮನಾಗಿ ಹಂಚಿದ್ದನೋ ಎಂಬಂತೆ. ಅಕಸ್ಮಾತ್ತಾಗಿ ಅವರಿಬ್ಬರ ಕುಡಿಗಣ್ಣ ನೋಟಗಳು ಸಂಧಿಸುತ್ತಿದ್ದವು, ಅಷ್ಟೇ ವೇಗದಲ್ಲಿ ಮರಳುತ್ತಿದ್ದವು. ಅವುಗಳಲ್ಲಿ ಒಂದು ಬಗೆಯ ಮನೋಜ್ಞವಾದ ದಾಹವು ಪಸರಿಸಿಕೊಂಡಿತ್ತು.
ಈ ಸನ್ನಿವೇಶವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವೇ ಇಲ್ಲ. ವಿವಾಹಿತರಾದವರೆಲ್ಲ ಈ ಘಳಿಗೆಯನ್ನು ಅನುಭವಿಸಿದವರೇ ಅಲ್ಲವೆ! ಈ ವರ್ಣನೆ ರಾಜನ ಮದುವೆಯದೆಂದು ಹೇಳದೆ ಗೊತ್ತಾಗುವಂತಿಲ್ಲ. ಸಾಮಾನ್ಯರೂ ಇದನ್ನು ತಮ್ಮದೆಂದೇ ತಿಳಿದು ಖುಷಿಪಡಬಹುದು.

-ಹರಿಹರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments