ವರ್ಣನೆಗೆ ನಿಲುಕದ ವ್ಯಕ್ತಿತ್ವ
'ಯೋಗವಾರ್ಗದಲ್ಲಿ ಸಿದ್ಧಿಯನ್ನು ತಲುಪಿ ಪರಮಹಂಸಾವಸ್ಥೆಗೇರಿದ ಮಹಾತ್ಮರು ಮಕ್ಕಳಂತೆ ಇರುತ್ತಾರೆ' ಎಂಬುದು ಶಾಸ್ತ್ರವಾಕ್ಯ. ...
'ಯೋಗವಾರ್ಗದಲ್ಲಿ ಸಿದ್ಧಿಯನ್ನು ತಲುಪಿ ಪರಮಹಂಸಾವಸ್ಥೆಗೇರಿದ ಮಹಾತ್ಮರು ಮಕ್ಕಳಂತೆ ಇರುತ್ತಾರೆ' ಎಂಬುದು ಶಾಸ್ತ್ರವಾಕ್ಯ. ವಿವೇಕಾನಂದರನ್ನು ನೋಡಿದರೆ ಅವರ ಶಿಶುಸಹಜ ವ್ಯಕ್ತಿತ್ವ ಮನಮಾತುಗಳನ್ನು ಮೂಕಗೊಳಿಸದಿರದು.
ಅಮೆರಿಕದಲ್ಲಿ ಸ್ವಾಮೀಜಿಯ ಉಪನ್ಯಾಸವನ್ನು ಕೇಳುತ್ತಿದ್ದ ಮೆಕ್ಲಾಡ್ಳು ಕ್ರಿಸ್ತನ ಅದ್ಭುತ ಲೀಲೆಯಲ್ಲಿ ತನ್ಮಯರಾಗಿ ವರ್ಣಿಸುತ್ತಿರುವ ಸ್ವಾಮರೀಜಿಯ ದಿವ್ಯಪ್ರಭೆಯಿಂದ ಎಷ್ಟು ಪ್ರಭಾವಿತಳಾಗಿದ್ದಳೆಂದರೆ ಅವರೊಂದಿಗೆ ಮನೆಗೆ ಹಿಂದಿರುಗುವಾಗಲೂ ಅವರ ಭಾವಕ್ಕೆ ಭಂಗ ತರಬಾರದೆಂದು ಮೌನವಾಗಿ ಅವರ ಹಿಂದೆ ನಡೆದುಬರುತ್ತಿದ್ದಳು. ಸ್ವಾಮೀಜಿ ಇದ್ದಕ್ಕಿದ್ದಂತೆ ನಿಂತು, 'ಮೆಣಸಿನ ಸಾರು ಘಮಲು ಬರಲು 'ಬೇ' ಎಲೆಯನ್ನು ಕಡೆಯಲ್ಲಿ ಹಾಕುತ್ತಾರೆ, ಮೊದಲೇ ಅಲ್ಲ' ಎಂದರು! ಸ್ವಲ್ಪ ಹಿಂದೆ ಕ್ರಿಸ್ತನ ಅದ್ಭುತ ಲೀಲೆಗಳಲ್ಲಿ ತನ್ಮಯರಾಗಿದ್ದ ಅವರು ಈ ಕ್ಷಣ ಪ್ರಾಪಂಚಿಕ ವಿಷಯವಾದ ಮೆಣಸಿನ ಸಾರಿನ ಬಗ್ಗೆ ಹೇಳುತ್ತಿರುವುದನ್ನು ಕೇಳಿ ಆಕೆ ಮೂಕವಿಸ್ಮಿತಳಾದಳು! ಸಹಸ್ರ ಸಂಖ್ಯೆಯ ಶ್ರೋತೃಗಳ ನಡುವೆ ಗಹನ ವಿಷಯ ಕುರಿತು ಮಾತನಾಡುವ ಸ್ವಾಮೀಜಿ ಮರುಕ್ಷಣದಲ್ಲೇ ತಾವು ಇಳಿದುಕೊಂಡಿದ್ದ ಮನೆಗೆ ಬಂದು ಶಾಲೆ ಬಿಟ್ಟೊಡನೆ ಓಡಿಬರುವ ಹುಡುಗನಂತೆ ಅಡುಗೆಮನೆಯೊಳಗೆ ನುಗ್ಗಿ 'ಈಗ ಸ್ವಲ್ಪ ಏನಾದರೂ ತಿಂಡಿ ಮಾಡೋಣ!' ಎನ್ನುವ ಶಿಶುಸಹಜ ಸರಳ ವ್ಯಕ್ತಿತ್ವ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು. ದೃಗ್ಗೋಚರವಾಗುವ ಸ್ವಾಮೀಜಿಯ ವ್ಯಕ್ತಿತ್ವಕ್ಕಿಂತ ಹೃದ್ಗೋಚರವಾಗುವ ವ್ಯಕ್ತಿತ್ವ ಚಿರಸ್ಥಾಯಿಯಾಗುತ್ತಿತ್ತು. ಇಂತಹ ಅನೇಕ ಅನುಭವಗಳನ್ನು ಪಾಶ್ಚಾತ್ಯ ಶಿಷ್ಯರ ಬರಹಗಳಲ್ಲಿ ಓದಿದಾಗ ಸ್ವಾಮೀಜಿ ವ್ಯಕ್ತಿತ್ವ ವರ್ಣನೆಗೆ ನಿಲುಕದ ಹಿಮಾಲಯಸದೃಶ ದರ್ಶನದಂತೆ! ಎನಿಸದಿರದು.ಟಿ
-ಆನಂದ ಎಸ್.ಎನ್.
anandsn193@gmail.com