ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Mainashree
Updated On : 5 Mar 2014, 12:34 pm

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರದಲ್ಲಿ ಕಲಾವಿದ ಕೋಟೆ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿನ ಹೆಚ್. ಎಂ. ಗಂಗಾಧರಯ್ಯ ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ 8 ರಂದು ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗುತ್ತದೆ. ಹಿರಿಯ ಕಲಾವಿದರಾದ ಕೆ. ಟಿ. ಶಿವಪ್ರಸಾದ್ ಅವರು ಇದನ್ನು ಉದ್ಘಾಟಿಸಲಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯ ಅಧ್ಯಕ್ಷತೆ ವಹಿಸುವರು. ಗ್ರಾಮೀಣ ವಿಷಯದ ಚಿತ್ರಗಳಾಗಿರುವುರಿಂದ ವರ್ಣಮಯವಾಗಿವೆ. ಜಾನಪದ ಕಲೆಗಳಾದ ತೊಗಲುಬೊಂಬೆ, ಹಚ್ಚೆ, ರಂಗೋಲಿಗಳನ್ನು ಹಾಗೂ ಜಾನಪದ ರೇಖೆಗಳನ್ನು ಮೂಲವಸ್ತುವನ್ನಾಗಿಸಿ ಅಕ್ರಲಿಕ್ ಬಳಸಿ ಚಿತ್ರಿಸಿರುವ ಈ ಚಿತ್ರಗಳು ನೋಡುಗರನ್ನು ರಂಜಿಸಲಿವೆ. ಈ ಪ್ರದರ್ಶನ ಮಾರ್ಚ್ 10 ರವರೆಗೆ ತೆರೆದಿರುತ್ತದೆ.ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement