ಬ್ಯಾಂಕ್ ದರೋಡೆಯಾಗುವ ಸಂದರ್ಭಗಳು
ಹೆಚ್ಚು ಜನಸಂಖ್ಯೆ ಇಲ್ಲದ ಪ್ರದೇಶಗಳಲ್ಲಿ ಬ್ಯಾಂಕ್ಗಳು ಇದ್ದಲ್ಲಿ ಅಲ್ಲಿ ದರೋಡೆ ಸಾಧ್ಯತೆ ಹೆಚ್ಚು.
- ಬ್ಯಾಂಕ್ಗಳಲ್ಲಿ ಹೆಚ್ಚು ಜನ ಗ್ರಾಹಕರು ಇಲ್ಲದ ಸಮಯದಲ್ಲಿ ಹಾಗೂ ಬಹುಪಾಲು ಬೆಳಗ್ಗೆ ಬ್ಯಾಂಕ್ ತೆರೆಯುವ ಮತ್ತು ಸಂಜೆ ಮುಚ್ಚುವ ಸಂದರ್ಭಗಳಲ್ಲಿ ದುಷ್ಕರ್ಮಿಗಳು ದಾಳಿ ಮಾಡಬಹುದು.
- ಹೆಚ್ಚು ಹಣ ಬ್ಯಾಂಕಿನ ಶಾಖೆಯಲ್ಲಿ ಇರುವ ಬಗ್ಗೆ ಹೊರಗಿನವರಿಗೆ ಮಾಹಿತಿ ತಿಳಿದಾಗ ಅಥವಾ ಸ್ವತಃ ಬ್ಯಾಂಕ್ ಸಿಬ್ಬಂದಿ ಇತರರೊಂದಿಗೆ ಶಾಮೀಲಾದಾಗ ಇಂತಹ ಘಟನೆಗಳು ನಡೆಯುತ್ತವೆ.
- ಬ್ಯಾಂಕ್ಗಳಿಗೆ ಶಸ್ತ್ರಸಜ್ಜಿತ ಕಾವಲುಗಾರರು ಇಲ್ಲದೇ ಇದ್ದಾಗ ದಾಳಿ ಸಾಧ್ಯತೆ ಹೆಚ್ಚು.
- ಬ್ಯಾಂಕ್ಗಳಿಂದ ಬೇರೆ ಬ್ಯಾಂಕ್ಗಳಿಗೆ ಹೆಚ್ಚು ಹಣವನ್ನು ಬಾಡಿಗೆ ವಾಹನದಲ್ಲಿ ಸಾಗಿಸುವಾಗ ಹಾಗೂ ಸೂಕ್ತ ಭದ್ರತೆ ಇಲ್ಲದಿದ್ದಾಗ ರಸ್ತೆಯಲ್ಲಿ ಅಡ್ಡಗಟ್ಟಿ ಹಣ ಲೂಟಿ ಮಾಡುವ ಪ್ರಸಂಗಗಳು ಸಾಮಾನ್ಯವಾಗಿರುತ್ತವೆ.
ದರೋಡೆ ತಡೆಯಲು ಅನುಸರಿಸಬೇಕಾದ ಕ್ರಮ:
- ಬ್ಯಾಂಕ್ಗಳಿಗೆ ಶಸ್ತ್ರಸಜ್ಜಿತ ಹಾಗೂ ನುರಿತ ಗಾರ್ಡ್ಗಳನ್ನು ನೇಮಿಸುವುದು.
- ಬ್ಯಾಂಕ್ಗಳಿಗೆ ಸೈರನ್ಗಳನ್ನು ಅಳವಡಿಸುವುದು ಹಾಗೂ ಅವುಗಳಿಗೆ ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಳ್ಳಿ.
- ಬ್ಯಾಂಕ್ಗಳಿಗೆ ಸಿಸಿಟಿವಿಯನ್ನು ಅಳವಡಿಸಿ. ಬ್ಯಾಂಕ್ ವ್ಯವಹರಿಸುವ ಅವಧಿಯಲ್ಲಿ ಒಬ್ಬ ಸಿಬ್ಬಂದಿ ಸಿಸಿಟಿವಿಗಳನ್ನು ಸದಾ ಗಮನಿಸುವ ಹಾಗೆ ವ್ಯವಸ್ಥೆ ಮಾಡಿ. ಬ್ಯಾಂಕ್ನಲ್ಲಿ ಯಾರಾದರೂ ಸಂಶಯಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ಎಚ್ಚರವಹಿಸಿ ಹಾಗೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
- ಶಾಂತ ತಮ್ಮಯ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.