ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಿಲನಕ್ಕೆ ಮಾತ್ರ ನಗ್ನತೆ

ಊರ್ವಶಿ ಎಂಬ ಅತಿಲೋಕ ಸುಂದರಿಯ ಬಗ್ಗೆ ನಿನ್ನೆ ಓದಿದೆವು. ಈಕೆ ಅಕ್ಷತಯೋನಿ ಕನ್ಯೆ ಎಂಬುದು ಎಷ್ಟು ಚೆಲುವಾದ ಕಲ್ಪನೆಯೋ...

Rashmi Kasaragodu
Updated On : 10 Mar 2014, 1:13 am

ಊರ್ವಶಿ ಎಂಬ ಅತಿಲೋಕ ಸುಂದರಿಯ ಬಗ್ಗೆ ನಿನ್ನೆ ಓದಿದೆವು. ಈಕೆ ಅಕ್ಷತಯೋನಿ ಕನ್ಯೆ ಎಂಬುದು ಎಷ್ಟು ಚೆಲುವಾದ ಕಲ್ಪನೆಯೋ, ಮಾನವರ ಜತೆ ಸಂಸಾರ ನಡೆಸಿದವಳು ಎಂಬುದೂ ಇನ್ನೊಂದು ಸೊಗಸಾದ ಕತೆ. ಹೀಗೆ ಈಕೆಯನ್ನು ತನ್ನ ಸಂಸಾರಕ್ಕೆ, ಭೋಗಕ್ಕೆ ಕರೆತಂದವನು ಚಂದ್ರವಂಶದ ದೊರೆ ಪುರೂರವ.
ಒಮ್ಮೆ ಊರ್ವಶಿ ಭೂಲೋಕದಲ್ಲಿ ವಿಹರಿಸುತ್ತಿದ್ದಾಗ ಆಕೆಯನ್ನು ಪುರೂರವ ನೋಡಿದನು. ಆಕೆಯೂ ಆತನಲ್ಲಿ ದೃಷ್ಟಿ ನೆಟ್ಟಳು. ಇಬ್ಬರ ಚಿತ್ತಾಪಹಾರವಾಯಿತು. ಇಬ್ಬರೂ ಪರಸ್ಪರರಲ್ಲಿ ಮನಸ್ಸು ನೆಟ್ಟರು. ಸ್ವರ್ಗದ ಕನ್ಯೆಯನ್ನು ಭೋಗಿಸಬೇಕೆಂಬ ರಾಜನ ಕನಸು, ಮಾನವನ ಜತೆ ವಿಹರಿಸಬೇಕೆಂಬ ಸ್ವರ್ಗಕನ್ಯೆಯ ಇಚ್ಛೆಗಳು ಸಂಲಗ್ನಗೊಂಡವು. ತನ್ನ ಹೆಂಡತಿಯಾಗಿ ಬಾ ಎಂದು ಪುರೂರವ ಕರೆದಾಗ ಊರ್ವಶಿ ಒಪ್ಪಿಕೊಂಡಳು. ಆದರೆ ಎರಡು ಶರತ್ತುಗಳನ್ನು ಹಾಕಿದಳು:
ಶಯನಸಮೀಪೇ ಮಮೋರಣಕದ್ವಯಂ
ಪುತ್ರಭೂತಂ ನಾಪನೇಯಮ್
ಭವಾಂಶ್ಚ ಮಯಾ ನ ನಗ್ನೋ ದ್ರಷ್ಟವ್ಯಃ

ನಾನು ತುಪ್ಪವನ್ನು ಮಾತ್ರ ಆಹಾರವಾಗಿ ಸೇವಿಸುವವಳು. ನನ್ನ ಬಳಿ ಎರಡು ಮೇಕೆಗಳಿವೆ. ಅವು ನನಗೆ ಮಕ್ಕಳ ಸಮಾನ. ಅವು ಯಾವಾಗಲೂ ನನ್ನ ಬಳಿಯೇ ಇರುತ್ತವೆ. ಅವುಗಳನ್ನು ನೀನು ರಕ್ಷಿಸಬೇಕು. ಇನ್ನೊಂದು ಶರತ್ತೆಂದರೆ, ಸಂಭೋಗ ಸಮಯ ಹೊರತುಪಡಿಸಿ ಬೇರೆ ಯಾವ ಸಮಯದಲ್ಲೂ ನನಗೆ ನೀನು ನಗ್ನವಾಗಿ ಕಾಣಿಸಿಕೊಳ್ಳಕೂಡದು!
ಈ ಶರತ್ತಿನಲ್ಲಿ ಇಡೀ ಮಾನವ ಸಂತತಿಗೇ ಒಂದು ಪಾಠ ಇರುವಂತಿದೆ. ಸಂಭೋಗವೆಂಬುದು ಒಂದು ಸಿದ್ಧ ಮನಸ್ಥಿತಿಯಲ್ಲಿ ಮಾತ್ರವೇ ಘಟಿಸುವಂಥದು. ಅದು ಎಲ್ಲೆಂದರಲ್ಲಿ ಹೇಗೋ ಹಾಗೆ ಆಗುವಂಥದಲ್ಲ. ಹಾಗೇ ಗಂಡು ಹೆಣ್ಣಿನ ನಗ್ನತೆಯೂ ಪರಸ್ಪರರಿಗೆ ಇಷ್ಟವಾಗುವ ಏಕಾಂತ ಮತ್ತು ಪರಿಸ್ಥಿತಿಯಲ್ಲಿರಬೇಕು. ಅದೇ ಸಂಭೋಗಪೂರಕ. ಇಲ್ಲವಾದರೆ ಮಾರಕ, ಅಸಹ್ಯ.


- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments