ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮುಂಜಾಗ್ರತಾ ಕ್ರಮಗಳು

Lingaraj Badiger
Updated On : 11 Mar 2014, 4:03 am

ಮನೆಗಳಿಗೆ ಸಿಸಿಟಿವಿ ಮತ್ತು ಬರ್ಗ್‌ಲರ್ ಅಲಾರಂ ಅಳವಡಿಸಿಕೊಳ್ಳಿ.
ಒಂಟಿ ಮನೆಗಳ ಸುತ್ತಲೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ. ಸಾಧ್ಯವಾದರೆ ವಾಚ್‌ಮ್ಯಾನ್‌ಗಳನ್ನು ನೇಮಿಸಿಕೊಳ್ಳಿ.
ಹೆಚ್ಚು ಹಣ ಮತ್ತು ಆಭರಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಆಭರಣ ಹಾಗೂ ಹಣ ಇಡಲೆಂದೇ ಬ್ಯಾಂಕ್‌ನಲ್ಲಿ ಲಾಕರ್ ವ್ಯವಸ್ಥೆ ಇರುತ್ತದೆ. ಆ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಿ. ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು.
ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಮತ್ತು ತುರ್ತು ಸಂದರ್ಭದಲ್ಲಿ ಅವರ ಸಹಾಯವನ್ನು ಪಡೆಯಿರಿ.
ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮಯ ಪ್ರಜ್ಞೆಯಿಂದ ವರ್ತಿಸಿ.

ದರೋಡೆ ನಂತರ ಅನುಸರಿಸುವ ಕ್ರಮಗಳು
ದರೋಡೆಯಾದ ತಕ್ಷಣ ಸಹಾಯಕ್ಕಾಗಿ ಅಕ್ಕಪಕ್ಕದವರನ್ನು ಕೂಗಿಕೊಳ್ಳಿ ಮತ್ತು ನೆರೆಹೊರೆಯವರ ಸಹಾಯದಿಂದ ದರೋಡೆಕೋರರನ್ನು ಹಿಡಿಯುವ ಪ್ರಯತ್ನಿಸಿ.
ದರೋಡೆಯಾದ ಬಗ್ಗೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಿ. ಇಲ್ಲವಾದಲ್ಲಿ ದೂರವಾಣಿ ಸಂಖ್ಯೆ 100ಕ್ಕೆ (ಉಚಿತ) ಕರೆ ಮಾಡಿ. ದರೆಡೆ ನಡೆದ ಸ್ಥಳದಲಲಿನ ವಸ್ತುಗಳನ್ನು ಮತ್ತು ದರೋಡೆಕೋರರು ಬಿಟ್ಟುಹೋದ ಸಲಕರಣೆಗಳನ್ನು ಮುಟ್ಟಬೇಡಿ. ಮತ್ತು ಆ ಸ್ಥಳದಲ್ಲಿ ದೊರೆಯಬಹುದಾದ ಸುಳಿವುಗಳನ್ನು ರಕ್ಷಿಸಿ.
ದರೋಡೆಕೋರರ ಚಹರೆ, ಮಾತನಾಡಿದ ಭಾಷೆ, ಧರಿಸಿದ ಬಟ್ಟೆಗಳು, ಉಪಯೋಗಿಸಿದ ವಾಹನದ ಬಗ್ಗೆ ಪೊಲೀಸರಿಗೆ ತಿಳಿಸಿ.
ಗಾಯಗೊಂಡ ಸಂದರ್ಭದಲ್ಲಿ ಕೂಡಲೇ ವೈದ್ಯಕೀಯ ಸೌಲಭ್ಯ ಪಡೆಯಿರಿ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement