ಅಧರ ಆರಾಧನೆ
ಅನುಷ್ಕಾ ಶರ್ಮ ತೆರೆ ಮೇಲೆ ಬಂದರೆ ಸಾಕು ಪ್ರೇಕ್ಷಕರ ಕಣ್ಣುಗಳು ಆಕೆಯ ಅಧರಗಳನ್ನೇ ದಿಟ್ಟಿಸುತ್ತವೆ. ಅರೆರೆ, ಪ್ರೇಕ್ಷಕರೇನು 'ಲಿಪ್ಸ್....
ಅನುಷ್ಕಾ ಶರ್ಮ ತೆರೆ ಮೇಲೆ ಬಂದರೆ ಸಾಕು ಪ್ರೇಕ್ಷಕರ ಕಣ್ಣುಗಳು ಆಕೆಯ ಅಧರಗಳನ್ನೇ ದಿಟ್ಟಿಸುತ್ತವೆ. ಅರೆರೆ, ಪ್ರೇಕ್ಷಕರೇನು 'ಲಿಪ್ಸ್ ರೀಡಿಂಗ್' ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರೆ ಅದು ನಿಮ್ಮ ಮುಗ್ಧತೆಗೆ ಸಾಕ್ಷಿ. ಅಧರಗಳು ಅದುರುವಾಗ ಉಂಟಾಗುವ ಸ್ವಾದವನ್ನು ನಯನಗಳಲ್ಲೇ ಹೀರುತ್ತಿದ್ದಾರೆ ಎಂಬುದಂತೂ ಸತ್ಯ. ಇದು ತುಟಿಗಳ ವಿಷಯ. ಅನುಷ್ಕಾಳ ತುಂಬಿದ ತುಟಿಗಳು ಆಕರ್ಷಣೆಯ ಕೇಂದ್ರ ಬಿಂದು. ಹಣ್ಣಾದ ತೊಂಡೆ ಹಣ್ಣಿನಂತೆ ಎಂಬುದೇ ಸರಿಯಾದ ಹೋಲಿಕೆ.
ದಪ್ಪ ತುಟಿಗಳ ಮೇಲಿನ ತುಡಿತ ಯುವಕರಲ್ಲಿ ಹೆಚ್ಚಾಗುತ್ತಿದೆಯೇ? ನಗರದ ಹುಡುಗಿಯರಲ್ಲಂತೂ ಆ ಕುರಿತ ಕುತೂಹಲ ಹಾಗೂ ಬಯಕೆ ತೀವ್ರಗೊಂಡಿದೆ. ಅನೇಕರು ಸೌಂದರ್ಯ ತಜ್ಞರತ್ತ ಮುಖ ಮಾಡಿದ್ದಾರೆ. ಹೆಚ್ಚಿನವರು ದಪ್ಪ ತುಟಿ ಹೊಂದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕು ಎಂದು ಬಯಸಿದ್ದಾರೆ. ಇದಕ್ಕಾಗಿ ಸಾಕಷ್ಟು ದುಡ್ಡು ಸುರಿಯಲೂ ಸಿದ್ಧರಾಗಿದ್ದಾರೆ. ಆದರೆ, ಆಕರ್ಷಕ ತುಟಿಗಳನ್ನು ಹೊಂದಲು ಬೇಕಾಗುವ ಟ್ರೀಟ್ಮೆಂಟು ತೀರಾ ಸರಳ, ಸುಲಭ ಮತ್ತು ಅತ್ಯಲ್ಪಸಮಯ ಬೇಡುವಂಥದು. ಬೇಕಾದಾಗ ದಪ್ಪ ಮಾಡಿಸಿಕೊಂಡು ಬೇಡವೆಂದಾಗ ಮೊದಲಿದ್ದ ಅಧರಗಳಿಗೇ ಮರಳಲು ಸಾಧ್ಯ. ಅದು ಜುವೆಡರ್ಮ್ ವಿಧಾನದಿಂದ!
ಏನಿದು ಜುವೆಡರ್ಮ್ ವಿಧಾನ?
ಇದು ಚರ್ಮ ಭರ್ತಿ ಮಾಡುವ ವಿಧಾನ. ಇದರಿಂದ ಬೇಕಾದ ಸ್ಥಳದಲ್ಲಿ ಹೆಚ್ಚು ಗಾತ್ರ ಪಡೆಯಬಹುದು. ಕೇವಲ 20 ನಿಮಿಷದಲ್ಲಿ ಬಯಸಿದ ಅಧರ ರೆಡಿ.
ಜುವೇಡರ್ಮ್ ವಿಧಾನವು ಹೈಯಾಲುರಾನಿಕ್ ಆಸಿಡ್ ಆಧರಿತ ಭರ್ತಿ ಸಾಧನ. ಹೈಯಾಲುರಾನಿಕ್ ಆಸಿಡ್ ಚರ್ಮದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ದ್ರವ್ಯ. ಇದು ಯೌವನ, ತುಂಬಿದ ಹಾಗೂ ನಯವಾದ ಚರ್ಮ ಉಳಿಸಿಕೊಳ್ಳಲು ನೆರವು ನೀಡುತ್ತದೆ. ಹೌಡ್ರೋಫಿಲಿಕ್ ದ್ರವ್ಯ ನೀರಿನ ಹೀರುವಿಕೆಗೆ ಉತ್ತೇಜನ ನೀಡಿ ಚರ್ಮದ ಉತ್ತಮ ಹೈಡ್ರೇಶನ್ಗೆ ನೆರವಾಗುತ್ತದೆ. ಹೈಯಾಲುರಾನಿಕ್ ಆಸಿಡ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಪರಿಪೂರ್ಣವಾದ ತುಟಿಯ ಹಿಗ್ಗುವಿಕೆ ಸಾಧ್ಯವಾಗುತ್ತದೆ. ಜುವೇಡರ್ಮ್ ತುಟಿ ವರ್ಧನೆ ವಿಧಾನ ತಾತ್ಕಾಲಿಕ. ಇದರ ಪರಿಣಾಮ ಒಂದು ವರ್ಷ. ಪುನಃ ತೆಳುವಾದ ಮೂಲ ತುಟಿಗಳಿಗೇ ಮರಳಬೇಕೆಂದರೆ ಧಾರಾಳವಾಗಿ ಮರಳಬಹುದು. ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ತುಟಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಕೆಲವೇ ತಿಂಗಳಲ್ಲಿ ಮೂಲ ತುಟಿಗಳಿಗೆ ಮರಳಬಹುದು.
ಬಿ ಟೌನ್ನಲ್ಲಿ ಕಾಸ್ಮೆಟಿಕ್ ವಿಧಾನ ಹೊಸದಲ್ಲ. ಅನೇಕ ಯುವತಿಯರು ತಮಗೆ ಬೇಕಾದಂತಹ ಫಲಿತಾಂಶ ಪಡೆಯಲು ಅವಶ್ಯವಾದ ತುಟಿ ವರ್ಧನೆಯ ಸಾಧ್ಯತೆ ಹಾಗೂ ಸುರಕ್ಷಿತ ಪದ್ಧತಿಗಳ ಕುರಿತು ಅರಿತುಕೊಳ್ಳಲು ಮುಗಿಬಿದ್ದಿದ್ದಾರೆ.
- ಡಾ. ಚೈತ್ರ ವಿ. ಆನಂದ್.
ಕಾಸ್ಮೆಟಿಕ್ ಡೆರ್ಮಟಾಲಜಿಸ್ಟ್
-ಮಂಜುನಾಥ್ ಎಲ್. ಕೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.