ಮನೋಗುಣವೇ ಅಧಿಕ
ನಮ್ಮ ಸಂಸ್ಕೃತಿಯಲ್ಲಿ ಪ್ರಾಣಿಗಳಂತೆ ಯಾರು ಎಲ್ಲೆಂದರಲ್ಲಿ ಕಾಮಕೂಟದಲ್ಲಿ ತೊಡಗುವಂತಿಲ್ಲ. ಅದು ವಿಧ್ಯುಕ್ತುವಾಗಿ ..
ನಮ್ಮ ಸಂಸ್ಕೃತಿಯಲ್ಲಿ ಪ್ರಾಣಿಗಳಂತೆ ಯಾರು ಎಲ್ಲೆಂದರಲ್ಲಿ ಕಾಮಕೂಟದಲ್ಲಿ ತೊಡಗುವಂತಿಲ್ಲ. ಅದು ವಿಧ್ಯುಕ್ತುವಾಗಿ ವಿವಾಹವಾದ ದಂಪತಿಗಳ ನಡುವೆಯೇ ಘಟಿಸಬೇಕು. ಸಂಪನ್ನವಾದ ರತಿಕೂಟ, ಅದರಿಂದ ಮನೋಲ್ಲಾಸ, ತತ್ಪರಿಣಾಮವಾಗಿ ಬೇಕಿದ್ದರೆ ಸಂತತಿಪ್ರಾಪ್ತಿ, ಸುಖೀಸಂಸಾರ- ಇವು ದಾಂಪತ್ಯದ ಮೂಲ ಉದ್ದೇಶಗಳು. ಇಂಥ ವಿವಾಹವನ್ನು ನೆರವೇರಿಸಲು, ಗಂಡು- ಹೆಣ್ಣಿನ ಜಾತಕವನ್ನು ನೋಡಿ ಮೇಳಾಮೇಳಿ ಲೆಕ್ಕ ಹಾಕುವುದು ಮೊದಲಿನಿಂದ ನಡೆದೇ ಇದೆ. ಜಾತಕ ನೋಡುವುದು ಕಡ್ಡಾಯವೆ? ಹಾಗೇನಿಲ್ಲ.
ಯಯೋಶ್ಚಿತ್ತಂ ಸಮಾಸಕ್ತಂ ತಯೋರುದ್ವಾಹಮುತ್ತಮಮ್
ಸರ್ವಾನುಗುಣಭಂಗೇಪಿ ಮನೋನುಗುಣತಾಧಿಕಾ
ಜ್ಯೋತಿಶಾಃಸ್ತ್ರದಲ್ಲಿ ಹೇಳುವ ನೂರಾರು ಗಣ ಕೂಟಗಳನ್ನು ಜಾತಕಗಳಲ್ಲಿ ಹುಡುಕಿ ಹೊಂದಿಸಿ ಬನ್ನಪಡಬೇಕಾಗಿಲ್ಲ. ಯಾವ ತರುಣ ತರುಣಿಯರ ಚಿತ್ತಗಳು ಸಮಾಸಕ್ತವಾಗಿವೆಯೋ ಅವರನ್ನು ಮದುವೆ ಮಾಡುವುದೇ ಉತ್ತಮವಾದುದು. ಎಲ್ಲ ಗುಣಗಳಿಗಿಂತಲೂ ಮನೋಗುಣವೇ ಅಧಿಕತಮವಾದುದು.
ಅಂದರೇನು? ವಿವಾಹ ನಿಶ್ಚಯಿಸುವಾಗ ಇಬ್ಬರ ಎತ್ತರ,ಬಣ್ಣ, ದಪ್ಪ, ರಾಶಿ, ನಕ್ಷತ್ರ ನೋಡುವುದಕ್ಕಿಂತಲೂ ಅವರಿಬ್ಬರೂ ಸಮಾನಾಸಕ್ತಿಯುಳ್ಳವರಾಗಿದ್ದಾರೆಯೇ ಎಂದು ನೋಡುವುದೇ ಶ್ರೇಯಸ್ಕರವಾದದ್ದು. ಇಬ್ಬರ ಮನಸ್ಸುಗಳು ಹೊಂದಿದರೆ, ಒಬ್ಬರ ಚಿತ್ತವನ್ನು ಇನ್ನೊಬ್ಬರು ಅಪ್ಪಿಕೊಂಡರೆ ಮಾತ್ರ ಅಲ್ಲಿ ದಾಂಪತ್ಯವೂ ಕಾಮವೂ ಸೊಗಯಿಸುತ್ತದೆ.
ಎಳ್ಳಷ್ಟೂ ಇಷ್ಟವಿಲ್ಲದ ವರನನ್ನು ತಂದು ಹುಡುಗಿಗೆ ಕಟ್ಟಿದರೆ ಏನಾಗುತ್ತದೆ? ಭಾವಿ ಗಂಡನ ಕೊಲೆಯಾಗುತ್ತದೆ. ಭಾವಿ ವಧು ಜೈಲಿಗೆ ಹೋಗುತ್ತಾಳೆ.
-ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.