ತರಲೆ ವಿಷನ್
ಟಿ.ವಿ ಜಾಹೀರಾತುಗಳ ಮತ್ತು ಧಾರಾವಾಹಿಗಳ ಬಗ್ಗೆ ಒಂದಷ್ಟು ತರಲೆ ಮಾತುಗಳು...
ಟಿ.ವಿ ಜಾಹೀರಾತುಗಳ ಮತ್ತು ಧಾರಾವಾಹಿಗಳ ಬಗ್ಗೆ ಒಂದಷ್ಟು ತರಲೆ ಮಾತುಗಳು:
1. ಫೇರ್ನೆಸ್ ಕ್ರೀಮೊಂದನ್ನು ಉಪಯೋಗಿಸಿದವರೆಲ್ಲಾ ಶೀತಪ್ರದೇಶದ ಜನರಂತೆ ಬೆಳ್ಳಗಾಗುತ್ತಾರೆ.
2. ಮನೆಯಲ್ಲಿ ಉಪ್ಪು ಖಾಲಿಯಾಗಿದೆಯೇ ಅಡುಗೆಗೆ ರುಚಿಗೆ ತಕ್ಕಷ್ಟು ಟೂಥ್ ಪೇಸ್ಟ್ ಹಾಕಿರಿ, ಏಕೆಂದರೆ ಈ ಟೂಥ್ ಪೇಸ್ಟ್ನಲ್ಲಿ ಉಪ್ಪು ಇದೆ.
3. ಟಾಯ್ಲೆಟ್ ಕ್ಲೀನರ್ ಜಾಹೀರಾತುಗಳು ಊಟದ ಸಮಯದಲ್ಲೇ ಬರುತ್ತವೆ.
4. ಟಾಯ್ಲೆಟ್ನಲ್ಲಿರುವ ಕ್ರಿಮಿಕೀಟಗಳನ್ನು ಸುದೈವವಶಾತ್ ನೀಲಿ ಬಣ್ಣದಲ್ಲಿ ತೋರಿಸುತ್ತಾರೆ, ಅರಿಶಿನ ಬಣ್ಣದಲ್ಲಿ ತೋರಿಸಿದರೆ ಹೊಟ್ಟೆಯಲ್ಲಿರುವ ಆಹಾರವನ್ನು ಕಕ್ಕೋದು ಖಂಡಿತ.
5. ಧಾರಾವಾಹಿಗಳಲ್ಲಿ ನಿದ್ರೆಯಿಂದ ಏಳುವಾಗಲೂ ಜನ ಮೇಕಪ್ನಲ್ಲಿಯೇ ಇರುತ್ತಾರೆ.
6. ಧಾರಾವಾಹಿಯ ಪಾತ್ರಧಾರಿಗಳ ಮುಖವನ್ನು ಹತ್ತು ಸಾರಿ ತೋರಿಸಿ, ಜೋರಾಗಿ ಅಬ್ಬರಿಸುವ ಸದ್ದಿನ ಸಂಗೀತ ಅಳವಡಿಸಿ ಒಂದು ಕಂತು ಮುಗಿಸಬಹುದು.
7. ಹಿಂದಿ ಧಾರಾವಾಹಿಗಳಲ್ಲಿ ದಿನವೂ ಝಗಮಗಿಸುವ ಬಟ್ಟೆಯನ್ನೇ ಧರಿಸುತ್ತಾರೆ ಹಾಗೂ ಆಫೀಸಿಗೆ ಹೋಗುವವರೆಲ್ಲಾ ಸೂಟನ್ನೇ ಧರಿಸಿರುತ್ತಾರೆ.
8. ಧಾರಾವಾಹಿಯ ಪ್ರಕಾರ ಒಂದು ಕಂಪ್ಯೂಟರ್ ಇದ್ದರೆ ಅದು ಆಫೀಸ್! ಅಷ್ಟೇ ಅಲ್ಲ.. ಕಂಪ್ಯೂಟರ್ ಸಿಸ್ಟಮ್ಗೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲದೆಯೇ ಜನರು ಅದರಲ್ಲಿ ಕೆಲಸ ಮಾಡುತ್ತಾರೆ.
9. ಸೋಪೊಂದನ್ನು ಬಳಸಿದರೆ ಒಂದು ಮಗುವಿನ ತಾಯಿಯೂ ಹೀರೋಯಿನ್ನಿನಂತೆ ಕಾಣಿಸುತ್ತಾಳೆ. ಆದರೆ ಇದನ್ನು ನೋಡಿದ ಮುದುಕಿಯರು ಅದೇ ಸೋಪನ್ನು ಬಳಸಿದರೆ ಅವರು ಮುದುಕಿಯಂತೆಯೇ ಕಾಣಿಸುತ್ತಾರೆ.
10. ಆಫ್ರಿಕಾದ ಕರಿಯರಿಗೆ ಭಾರತದ ಫೇರ್ನೆಸ್ ಕ್ರೀಂ ಬಗ್ಗೆ ತಿಳಿದುಬಿಟ್ಟರೆ ಆರು ವಾರಗಳ ನಂತರ ಅವರನ್ನು ಗುರುತಿಸಲಾಗುವುದೇ ಇಲ್ಲ, ಏಕೆಂದರೆ ಅವರು ಬ್ರಿಟಿಷರಾಗಿರುತ್ತಾರೆ.
- ದೀಪಕ್ ಡೋಂಗ್ರೆ. ಜಿ. ಮೆಣಸೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.