ನ್ಯಾನೊಕತೆಗಳು
ಇಬ್ಬರು ಹುಡುಗರು ಸಿನಿಮಾ ನೋಡುವಾಗ ಕೀಟಲೆ ಮಾಡಲು ಖಾಲಿ ಇದ್ದ ಮುಂದಿನ ಸೀಟುಗಳ ಮೇಲೆ ಪೆಪ್ಸಿಯ ಖಾಲಿ ಗ್ಲಾಸ್ಗಳು, ತಿಂಡಿಯ ಕವರ್ಗಳನ್ನು ಹಾಕಿದರು. ಸಿನಿಮಾ ಮುಗಿದ ಮೇಲೆ ಹೊರಬಂದು, ಬೈಕ್ ಏರಿ ಕುಳಿತರು, ನೋಡಿದರೆ ಯಾರೋ ಕಿಡಿಗೇಡಿಗಳು ಬೈಕ್ನ ಸೀಟಿಗೆ ಬಬಲ್ಗಮ್ ಅಂಟಿಸಿ ಹೋಗಿದ್ದರು.
-
ಒಬ್ಬ ಯುವಕ ಬೈಕ್ ಪಂಚರ್ ಆಯ್ತೆಂದು ಬೇಸರ ಪಟ್ಟುಕೊಂಡು, ಬೈದುಕೊಂಡು, ಗೊಣಗುತ್ತಾ ಬೈಕ್ ತಳ್ಳುತ್ತಾ ಮುನ್ನಡೆದ. ಎದುರಿಗೆ ಒಬ್ಬ ಮುದುಕ ಮೂಟೆಗಳನ್ನು ಹೊತ್ತ ಬಂಡಿಯನ್ನು ಎಳೆಯುತ್ತಾ ಬರುತ್ತಿದ್ದುದು ನೋಡಿ ಬೇಸರ ಮಾಯವಾಗಿ, ಪಂಚರ್ ಹಾಕಿಸಿ ಮನೆಗೆ ಹೋದ.
-
ಎಲ್ಲವೂ ನಶ್ವರ, ಹಣ, ಆಸ್ತಿ, ಪದವಿ, ಅಧಿಕಾರ ಇವೆಲ್ಲವೂ ಮುಖ್ಯವಲ್ಲ, ಮಾನವೀಯತೆಯೇ ಮೊದಲು, ಮಿಕ್ಕವೆಲ್ಲವೂ ನಂತರ, ಹೀಗೆಲ್ಲಾ ಮಾತಾಡಿ ಗುರೂಜಿ ಅಲ್ಲಿಂದ ತೆರಳಿದರು. ಆ ಪ್ರವಚನಕ್ಕಾಗಿ ಬಂದಿದ್ದ ವೀಕ್ಷಕರು ಕೊಟ್ಟಿದ್ದ ಪ್ರವೇಶ ಶುಲ್ಕ ಕೇವಲ 1500 ರೂ!!!
-ಎಸ್. ಸುಧಾಕರ್
ಮುರುಗೇಶ್ಪಾಳ್ಯ, ಬೆಂಗಳೂರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.