ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬ್ರಿಟಿಷ್ ಬಾವಿ!

ಬೆಂಗಳೂರಲ್ಲ, ಈ ದೇಶಾದ್ಯಂತ ಎಲ್ಲೇ ಸುತ್ತಾಡಿ... ಅಲ್ಲಿನ ನೂರಾರು ರೋಡುಗಳು, ಪಾರ್ಕುಗಳು, ಕಟ್ಟಡಗಳು ಬ್ರಿಟಿಷ್ ಅಧಿಕಾರಿಗಳ...

Rashmi Kasaragodu
Updated On : 18 Mar 2014, 2:32 am

ಬೆಂಗಳೂರಲ್ಲ, ಈ ದೇಶಾದ್ಯಂತ ಎಲ್ಲೇ ಸುತ್ತಾಡಿ... ಅಲ್ಲಿನ ನೂರಾರು ರೋಡುಗಳು, ಪಾರ್ಕುಗಳು, ಕಟ್ಟಡಗಳು ಬ್ರಿಟಿಷ್ ಅಧಿಕಾರಿಗಳ ಹೆಸರನ್ನೇ ಹೊಂದಿವೆ. ಕನ್ನಿಂಗ್‌ಹ್ಯಾಂ ರೋಡು, ಸ್ಯಾಂಕಿ ಕೆರೆ, ಕಬ್ಬನ್ ಪಾರ್ಕು, ಹಡ್ಸನ್ ಸರ್ಕಲ್ಲು... ಹೀಗೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಣ್ಣಿಗೇರಿಯಲ್ಲಿ ಅಂಥದ್ದೊಂದು ಬ್ರಿಟಿಷರ ನೆರಳಿದೆ. ಆದರದು ರೋಡಲ್ಲ. ಬಾವಿ! ಅದಕ್ಕಿರುವ ಹೆಸರೇ ಬ್ರಿಟಿಷ್ ಬಾವಿ. ಬ್ರಿಟಿಷರಿಗೆ ನೀರು ಕುಡಿಸಿ, ಈಗ ಊರಿನವರಿಗೆಲ್ಲ ನೀರು ಕುಡಿಸುತ್ತಿದೆ. ಹಿಂದೆ ಯಲ್ಲಾಪುರ ಬ್ರಿಟಿಷರ ಮುಖ್ಯ ಆಡಳಿತ ಕೇಂದ್ರವಾಗಿತ್ತು. ಕುಡಿವ ನೀರಿಗೆ ಅಂತ ಬ್ರಿಟಿಷರು ಬಾವಿಯನ್ನು ನಿರ್ಮಿಸಿದರೋ ಅಥವಾ ಕಣ್ಣಿಗೇರಿ ಜನ ನಿರ್ಮಿಸಿದ ಬಾವಿಯ ನೀರನ್ನೇ ಬ್ರಿಟಿಷರು ಬಳಸಿದರೋ ಗೊತ್ತಿಲ್ಲ. ಯಲ್ಲಾಪುರದಿಂದ 10 ಕಿ.ಮೀ. ದೂರದ ಈ ಬಾವಿ, ಇಂದಿಗೂ ಆಕರ್ಷಣೆಯ ಕೇಂದ್ರ. ಸುತ್ತಲೂ ಇಟ್ಟಿಗೆಗಳಿಂದ ಚೆಂದದ ಗೋಡೆ ನಿರ್ಮಿಸಲಾಗಿದೆ. ಬಾವಿಯ ನೀರು ಎಳನೀರಷ್ಟು ಟೇಸ್ಟು. ಬೇಸಿಗೆಯಲ್ಲೂ ಬತ್ತುವುದಿಲ್ಲ. ಅಕ್ಷಯ ಬಾವಿ.

-ಚಿತ್ರ, ಲೇಖನ: ಸುರೇಶ ಜಾಲಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement