ಮೊಬೈಲ್ ಮಾನವ
ಮೊಬೈಲು ಅನೇಕ ಹವ್ಯಾಸಗಳಿಗೆ ಜನ್ಮ ಕೊಟ್ಟಿದೆ. ಕೆಲವರು ಬಿಡದೆ ಎಸ್ಸೆಮ್ಮೆಸ್ ಮಾಡ್ತಾರೆ; ಮತ್ತೆ ಕೆಲವರು ಸುಖಾಸುಮ್ಮನೆ ಕಾಲ್ ಮಾಡುತ್ತಲೇ ...
ಮೊಬೈಲು ಅನೇಕ ಹವ್ಯಾಸಗಳಿಗೆ ಜನ್ಮ ಕೊಟ್ಟಿದೆ. ಕೆಲವರು ಬಿಡದೆ ಎಸ್ಸೆಮ್ಮೆಸ್ ಮಾಡ್ತಾರೆ; ಮತ್ತೆ ಕೆಲವರು ಸುಖಾಸುಮ್ಮನೆ ಕಾಲ್ ಮಾಡುತ್ತಲೇ ಇರ್ತಾರೆ; ಮಿಸ್ಡ್ ಕಾಲ್ ಅನ್ನೇ ಹವ್ಯಾಸ ಮಾಡಿಕೊಂಡವರೂ ಹಲವರಿದ್ದಾರೆ; ಆದರೆ, ಚಿತ್ರದುರ್ಗದಲ್ಲೊಬ್ಬರಿದ್ದಾರೆ. ಅವರಿಗೆ ಈ ಯಾವ ಚಟಗಳೂ ಇಲ್ಲ. ಮೊಬೈಲ್ ಸಂಗ್ರಹಿಸುವುದೇ ಇವರ ಹಾಬಿ!
ಮಾರುಕಟ್ಟೆಯಲ್ಲಿರುವ ಬಹುತೇಕ ಕಂಪನಿಗಳ ಮೊಬೈಲುಗಳನ್ನು ದೀಪಾನಂದ ಉಪಾಧ್ಯ ಇಟ್ಟುಕೊಂಡಿದ್ದಾರೆ. ಅಂಚೆ ಚೀಟಿ, ನಾಣ್ಯ, ಪ್ರಾಚೀನ ವಸ್ತುಗಳ ಸಂಗ್ರಹವೆಲ್ಲ ಮುಗಿದ ಮೇಲೆ ಪೆನ್ನುಗಳನ್ನು ಸಂಗ್ರಹಿಸತೊಡಗಿದರು. ನಂತರ ತಮ್ಮ ಹವ್ಯಾಸಕ್ಕೆ ಆಧುನಿಕ ಲೇಪ ತಂದುಕೊಡಲು, ಮೊಬೈಲ್ ಸಂಗ್ರಹಕ್ಕಿಳಿದರು. ಈ ಹವ್ಯಾಸಕ್ಕೀಗ 16 ವರ್ಷ. ಚಿತ್ರದುರ್ಗಕ್ಕೆ ಮೊಬೈಲ್ ಕಾಲಿಟ್ಟಾಗಿನಿಂದ ಇವರು ಈ ಸಂಗ್ರಹ ಶುರುಮಾಡಿಕೊಂಡರು. ಲಕ್ಷಾಂತರ ರುಪಾಯಿ ಇದಕ್ಕೇ ವ್ಯಯವಾಗಿದೆ. ನೋಕಿಯಾ 1100 ಸೆಟ್ಟನ್ನು ರು. 3,000 ನೀಡಿ ಖರೀದಿಸಿದ ನೆನಪು ಇವರಿಗಿದೆ. ಇದೀಗ ರು. 22,000 ಮೌಲ್ಯದ ಸ್ಯಾಮ್ಸಂಗ್ ಗ್ರ್ಯಾಂಡ್ ಸೆಟ್ಟೂ ಇವರ ಕೈಸೇರಿದೆ.
ಎಲ್ಲವೂ ಆ್ಯಕ್ಟಿವ್!
ಮೂಲೆಗೆ ಬಿದ್ದ ಮೊಬೈಲುಗಳನ್ನು ಇವರು ಇಟ್ಟುಕೊಂಡಿಲ್ಲ. ಇವರ ಬಳಿಯಿರುವ ಎಲ್ಲ ಸೆಟ್ಟುಗಳೂ ಸದ್ಯ ಕಾರ್ಯನಿರ್ವಹಿಸುತ್ತಿವೆ. ಜಿಎಸ್ಎಂ ಫೋನ್ಗಳಲ್ಲದೆ ಸಿಡಿಎಂಎ ಫೋನ್ಗಳ ಸಂಗ್ರಹವೂ ಇವರಲ್ಲಿದೆ. ಮೊಬೈಲ್ ಮೇಲೆ ಇವರಿಗೆಷ್ಟು ಭಕ್ತಿಯೆಂದರೆ, ಖರೀದಿಸಿದ ಕೂಡಲೇ ಆ ಸೆಟ್ಟಿಗೆ ಭಕ್ತಿಯಿಂದ ಪೂಜೆ ಮಾಡುತ್ತಾರೆ. ನಂತರವೇ ಅದಕ್ಕೆ ಸಿಮ್ ಕಾರ್ಡ್ ಹಾಕುವುದು. 'ಆ ಕಾಲದಲ್ಲಿ ಒಳಬರುವ ಪ್ರತಿ ಕರೆಗೆ ರು. 6 ಮತ್ತು ಹೊರ ಹೋಗುವ ಕರೆಗೆ ರು. 10 ಇತ್ತು. ಒಟ್ಟಾರೆ ಬಿಲ್ ಮಾತ್ರ ರು. 500 ಆಗುತ್ತಿತ್ತು' ಎಂದು ಅವತ್ತಿನ ನೆನಪನ್ನು ಹಾಸಿಡುತ್ತಾರಿವರು. ಅಂದಹಾಗೆ, ದೀಪಾನಂದರ ಬಳಿ ಒಟ್ಟು 35ಕ್ಕೂ ಅಧಿಕ ಮೊಬೈಲುಗಳಿವೆ!
ಕ.ಮ. ರವಿಶಂಕರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.