ಗುರುವಂದನಾ
ಪದ್ಮಭೂಷಣ ಪಂಡಿತ್ ಬಸವರಾಜ ರಾಜಗುರು ಸ್ಮರಣಾರ್ಥ, 'ಗುರುವಂದನಾ' ಕಾರ್ಯಕ್ರಮವನ್ನು ಏರ್ಪಡಿಸಿದೆ...
ಪದ್ಮಭೂಷಣ ಪಂಡಿತ್ ಬಸವರಾಜ ರಾಜಗುರು ಸ್ಮರಣಾರ್ಥ, 'ಗುರುವಂದನಾ' ಕಾರ್ಯಕ್ರಮವನ್ನು ಏರ್ಪಡಿಸಿದೆ. ಗೆಳೆಯರ ಬಳಗ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಮಾರ್ಚ್ 23ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಿ ಲಲಿತಾ ಜೆ. ರಾವ್ ಹಾಗೂ ಪಂ. ಎಂ.ಪಿ. ಹೆಗಡೆ, ಪಡಿಗೇರಿ ಆಗಮಿಸಲಿದ್ದಾರೆ. ಗ್ವಾಲಿಯರ್ ಘರಾಣಾ ಗಾಯಕ, ಪಂ. ಎಂ.ಪಿ. ಹೆಗಡೆ ಪಡಿಗೇರಿ ಅಂದಿನ ಕಾರ್ಯಕ್ರಮದಲ್ಲಿ ತಮ್ಮ ಗಾಯನ ಪ್ರಸ್ತುತಪಡಿಸಲಿದ್ದಾರೆ. ಜತೆಗೆ ರಘುನಂದನ್ ಭಟ್, ಬೆಂಗಳೂರು ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ. ಸಾಥ್ ನೀಡುವವರು ಗುರುಮೂರ್ತಿ ವೈದ್ಯ, ತಬಲಾ-ಗುರುರಾಜ್ ಹೆಗಡೆ, ಹಾರ್ಮೋನಿಯಮ್- ಭರತ್ ಹೆಗಡೆ ಶಿರಸಿ.
ದಿನಾಂಕ: 23, ಮಾರ್ಚ್, 2014.
ಸಮಯ: ಸಂಜೆ 5 ಗಂಟೆ.
ಸ್ಥಳ: ಭಾರತೀಯ ವಿದ್ಯಾಭವನ, 43, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-1
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.