ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ನೇಹಮಯ ಶಿಕ್ಷಣ

ಯಲ್ಲಾಪುರದ ಸಮೀಪದಲ್ಲೊಂದು ವಿಶಿಷ್ಟ ವಸತಿ ಶಾಲೆ ಇದೆ. ಇದರ ಘೋಷವಾಕ್ಯ 'ಶಿಕ್ಷಣವೇ ಶಕ್ತಿ, ಸಂಸ್ಕೃತಿಯೇ ಜೀವನ' ಎಂಬುದಾಗಿದೆ...

Rashmi Kasaragodu
Updated On : 19 Mar 2014, 3:59 am

ಯಲ್ಲಾಪುರದ ಸಮೀಪದಲ್ಲೊಂದು ವಿಶಿಷ್ಟ ವಸತಿ ಶಾಲೆ ಇದೆ. ಇದರ ಘೋಷವಾಕ್ಯ 'ಶಿಕ್ಷಣವೇ ಶಕ್ತಿ, ಸಂಸ್ಕೃತಿಯೇ ಜೀವನ' ಎಂಬುದಾಗಿದೆ. 1997-98ರಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಇಂದು ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು 'ಸ್ನೇಹಸಾಗರ ಇಂಗ್ಲಿಷ್ ಮೀಡಿಯಂ ವಸತಿ ಶಾಲೆ'.   
ಇಲ್ಲಿ ಓದಿದ ಮಕ್ಕಳಲ್ಲಿ ಶಿಸ್ತು, ಸಂಯಮ, ಜೀವನ ಪ್ರೀತಿ, ಆತ್ಮವಿಶ್ವಾಸ ಮತ್ತು ಸುಸಂಸ್ಕೃತ ನಡೆನುಡಿಯನ್ನು ಗಮನಿಸಬಹುದು. ಏಕೆಂದರೆ, ಇಲ್ಲಿಯ ಪಠ್ಯಕ್ರಮವೇ ಅಂತಹುದು. ಈ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ, ಗುರುಗಳಿಗೆ, ಮತ್ತು ಇತರೆ ಸಿಬ್ಬಂದಿಗೆ ಒಂದೇ ನಿಯಮ, ಒಂದೇ ಶಿಸ್ತು ಮತ್ತು ಒಂದೇ ಕಾಯಕ, ಎಲ್ಲರಿಗೂ ಎಲ್ಲ ವ್ಯವಸ್ಥೆಗಳೂ ಉಂಟು, ಹಾಗಂತ ಮೊಬೈಲ್ ಇಟ್ಟುಕೊಳ್ಳುವ ಹಾಗಿಲ್ಲ... ಯಾವಾಗ ಬೇಕೋ ಆವಾಗ, ಎಲ್ಲಿ ಬೇಕೆಂದಲ್ಲಿ ಹರಟುವ ಹಾಗಿಲ್ಲ. ಇಂತಹ ವಾತಾವರಣದಲ್ಲಿ ಮಕ್ಕಳು ತಪ್ಪುದಾರಿ ತುಳಿಯುವುದು ಕಡಿಮೆ ಪ್ರಮಾಣದಲ್ಲಿರುತ್ತದೆ.
ಹಾಗೆಯೇ ಇಲ್ಲಿ ರುಚಿ-ಶುಚಿಗೆ ಆದ್ಯತೆ ನೀಡಲಾಗಿದೆ. ಎಲ್ಲವೂ ತಾಜಾವಾಗಿರುತ್ತವೆ. ಶಾಲೆಯ ಡೇರಿ ಇರುವುದರಿಂದ ಅಲ್ಲಿಂದಲೇ ಹಾಲು ಮೊಸರು ಸರಬರಾಜಾಗುತ್ತದೆ. ಸೋಲಾರ್ ಬಳಸಿ ಬಿಸಿ ನೀರಿನ ವ್ಯವಸ್ಥೆ ಮಾಡಲಾದೆ. ನಿರಂತರ ವಿದ್ಯುತ್ ವ್ಯವಸ್ಥೆ, ಲಾಂಡ್ರಿ ಹೀಗೆ ಹತ್ತು ಹಲವು ವ್ಯವಸ್ಥೆಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ.  
ಮುಖ್ಯವಾದ ಮತ್ತೊಂದು ವಿಷಯವೆಂದರೆ, ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆಯನ್ನು ಪ್ರತಿ ತಿಂಗಳು ಮಾಡಿಸಲಾಗುತ್ತದೆ. ಹಾಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ವಿಶೇಷ ಉಪನ್ಯಾಸಗಳು ಇರುತ್ತವೆ.  ಮಾಹಿತಿಗೆ 9449133311
- ಸಿದ್ದಲಿಂಗ ಸಾಹುಕಾರ

ಬರಿ ಪಠ್ಯ ಬೋಧನೆಯೊಂದೇ ಆಗಿದ್ದರೆ ಅದನ್ನು ಯಾವ ಶಾಲೆ ಬೇಕಾದರೂ ಮಾಡುತ್ತದೆ. ಆದರೆ, ಈ ಶಾಲೆಯಲ್ಲಿ ಹಾಗಲ್ಲ... ವಿದ್ಯಾರ್ಥಿಯ ವೈಯಕ್ತಿಕ ಆಸಕ್ತಿ ಕಲೆ, ಸಾಹಿತ್ಯ, ಕ್ರೀಡೆ, ಓದು ಯಾವುದೇ ಆಗಿರಲಿ ಅದನ್ನು ಪೋಷಿಸಲಾಗುತ್ತದೆ.
- ಎಸ್. ಎಲ್. ಭಟ್,
ಸ್ನೇಹ ಸಾಗರ ಶಾಲೆಯ ಸಂಸ್ಥಾಪಕರಲ್ಲೊಬ್ಬರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement