ಎರಡೂ ಕ್ಷೇತ್ರಕ್ಕೆ ಯಾದಗಿರಿಯೇ ನಿರ್ಣಾಯಕ
ಕ್ಷೇತ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು: 4 (ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಹಾಪುರ...
ಕ್ಷೇತ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು: 4
(ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಹಾಪುರ, ಯಾದಗಿರಿ, ಸುರಪುರ ಮತ್ತು ಗುಲ್ಬರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್)
ಮತದಾರರು
ರಾಯಚೂರು ಭಾಗ- 6,20,184
ಗುಲ್ಬರ್ಗ ಭಾಗ- 2,09,449
ಜಿದ್ದಾಜಿದ್ದಿ
ಯಾದಗಿರಿ ಮತ್ತು ಸುರಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಶಹಾಪುರದಲ್ಲಿ ಕೆಜೆಪಿ ಶಾಸಕ ಗುರುಪಾಟೀಲರಿದ್ದಾರೆ. ಸದ್ಯಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚಸೂರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇರುವ ನಾಲ್ಕು ಕ್ಷೇತ್ರಗಳು, ಎರಡು ಲೋಕಸಭೆ ಕ್ಷೇತ್ರಗಳಿಗೆ ಹಂಚಿ ಹೋಗಿರುವುದರಿಂದ ಯಾದಗಿರಿ ಜಿಲ್ಲೆಯಲ್ಲಿ ಚುನಾವಣೆ ಭರಾಟೆ ಅಷ್ಟಾಗಿ ಕಂಡುಬರುತ್ತಿಲ್ಲ. ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹೆಚ್ಚಾಗಿ ರಾಯಚೂರು ಹಾಗೂ ಗುಲ್ಬರ್ಗ ಜಿಲ್ಲೆಗಳಿಗೆ ಪ್ರಾಶಸ್ತ್ಯ ನೀಡುವುದರಿಂದ ಜಿಲ್ಲೆಯಲ್ಲಿ ಪ್ರಚಾರ ಭರಾಟೆ ಕಡಿಮೆ. ಎರಡೂ ಲೋಕಸಭೆ ಕ್ಷೇತ್ರಗಳಿಗೂ ನಿರ್ಣಾಯಕ ಫಲಿತಾಂಶ ನೀಡುವ ತಾಕತ್ತು ಯಾದಗಿರಿ ಹೊಂದಿರುವುದನ್ನು ಅಲ್ಲಗಳೆಯುವಂತಿಲ್ಲ.
- ಮಂಜುನಾಥ ಸ್ವಾಮಿ