ನ್ಯಾನೋಕಥೆಗಳು
ಆ ಹೋಟೆಲ್ಲಿನ ಗೋಡೆಯ ಮೇಲೆ 'ನಿಮ್ಮ ಸಾಮಾನುಗಳು ಕಳೆದರೆ ಅದಕ್ಕೆ ನೀವೇ ಜವಾಬ್ದಾರರು' ಎಂದು ಬರೆಯಲಾಗಿತ್ತು....
ಆ ಹೋಟೆಲ್ಲಿನ ಗೋಡೆಯ ಮೇಲೆ 'ನಿಮ್ಮ ಸಾಮಾನುಗಳು ಕಳೆದರೆ ಅದಕ್ಕೆ ನೀವೇ ಜವಾಬ್ದಾರರು' ಎಂದು ಬರೆಯಲಾಗಿತ್ತು. ಆದರೆ ಆಕೆಯ ಮನಸನ್ನು ಎದುರಿಗೆ ಕುಳಿತು ಕೊಂಡಿದ್ದ ಹುಡುಗ ಕದ್ದಿದ್ದ. ಯಾರಿಗೂ ಗೊತ್ತಾಗದಂತೆ.ಆಕೆಗೂ.
=
ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ಆ ಅಂಧ ಮುದುಕಿಯ ತಟ್ಟೆಗೆ ಒಂದು ರೂಪಾಯಿ ಹಾಕದ ಆತ 'ಎಲ್ಲರಿಗೂ ಒಳ್ಳೆಯದು ಮಾಡು ದೇವ್ರೇ' ಎಂದು ಹುಂಡಿಗೆ ಸಾವಿರ ಸಾವಿರ ಸುರಿದಿದ್ದ.
=
ಎರಡು ವರ್ಷಗಳಿಂದ ಪ್ರೀತಿಸಿದ ಹುಡುಗನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಆಕೆ, ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಲು ಆ ಹುಡುಗನ ಹತ್ತಿರ ಹೋದರೆ ಆತ ಇನ್ನಾವುದೋ ಹುಡುಗಿಯ ಜತೆ ಕೈ ಕೈ ಹಿಡಿದು ತಿರುಗಾಡುತ್ತಿದ್ದ.
=
'ಶಾಂತತೆ ಕಾಪಾಡಿ' ಎಂದು ಬೋರ್ಡ್ ಹಾಕಿದ ಲೈಬ್ರರಿಯಲ್ಲಿ ಎದುರು-ಬದರು ಕುಳಿತ ಆ ಹುಡುಗ-ಹುಡುಗಿಯ ಕಣ್ಣುಗಳು ಪರಸ್ಪರ ಪ್ರೀತಿಯಿಂದ ಗಲಾಟೆ ಇಲ್ಲದೇ ಜಗಳವಾಡುತ್ತಿದ್ದವು.
- ಬಿ. ಸೋಮಶೇಖರ್,
ಸುರಪುರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.