ಮಿತ್ರ ವ್ಯಾಮೋಹ
ಪ್ರಧಾನಿಯಾಗಿದ್ದಾಗ ನೆಹರು ಮಾಡಿದ ಕಿತಾಪತಿ ಒಂದೆರಡಲ್ಲ. 1962ರಲ್ಲಿ ಚೀನಾ ಮೇಲಿನ ಯುದ್ಧದಲ್ಲಿ ಭಾರತ ಸೋಲಲು ನೆಹರು ಕಾರಣ ...
ಪ್ರಧಾನಿಯಾಗಿದ್ದಾಗ ನೆಹರು ಮಾಡಿದ ಕಿತಾಪತಿ ಒಂದೆರಡಲ್ಲ. 1962ರಲ್ಲಿ ಚೀನಾ ಮೇಲಿನ ಯುದ್ಧದಲ್ಲಿ ಭಾರತ ಸೋಲಲು ನೆಹರು ಕಾರಣ ಅಂತ ಮೊನ್ನೆಯಷ್ಟೇ ಆಸ್ಟ್ರೇಲಿಯಾದ ಪತ್ರಕರ್ತ ನೆವಿಲ್ಲೆ ಮ್ಯಾಕ್ಸ್‌ವೆಲ್ ಬಹಿರಂಗ ಪಡಿಸಿದ. ಆದರೆ, ಅದೇ ವರ್ಷ ನೆಹರು ಸ್ವಾರ್ಥದ ಕಾರಣಕ್ಕಾಗಿ ದೇಶ ಸೋತರೆ, ಇನ್ನೊಂದೆಡೆ ನೆಹರು ಸ್ವಾರ್ಥ ಗೆದ್ದಿತ್ತು!
ಅದು ತುಮಕೂರು ಲೋಕಸಭಾ ಕ್ಷೇತ್ರದ ವಿಚಾರವಾಗಿ! ಇಂದಿರಾಗಾಂಧಿ ಎಲೆಕ್ಷನ್ನಿಗೆ ನಿಂತು ಚಿಕ್ಕಮಗಳೂರು ಹೇಗೆ ಸುದ್ದಿಯಾಯಿತೋ, ಅಂಥದ್ದೇ ಮತ'ವೈಭವ'ಕ್ಕೆ ತುಮಕೂರು ಕ್ಷೇತ್ರವೂ ಸಾಕ್ಷಿಯಾಗಿತ್ತು. ನೆಹರು ಈ ಕ್ಷೇತ್ರದಲ್ಲಿ ಸ್ವಾರ್ಥದ ಗಿಡ ನೆಟ್ಟಿದ್ದರು!
ಅವರು ಅಜಿತ ಪ್ರಸಾದ್ ಜೈನ್. ಬಹುಶಃ ಅನೇಕರಿಗೆ ಇವರ ಹೆಸರು ಗೊತ್ತಿಲ್ಲ. ಅವರು ನೆಹರು ಆಪ್ತರು. 1962ರ ಮಾರ್ಚ್‌ನಲ್ಲಿ ಅಜಿತ ಪ್ರಸಾದ್ ಜೈನ್ ಸಲುವಾಗಿ ಮೊದಲ ಉಪಚುನಾವಣೆಗೆ ತುಮಕೂರು ಸಾಕ್ಷಿಯಾಯಿತು. 1962ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನೆಹರು ಪರಮಾಪ್ತ ಅಜಿತ ಪ್ರಸಾದ್ ಜೈನ್ ಉತ್ತರ ಪ್ರದೇಶದಲ್ಲಿ ಸೋತಿದ್ದರು. ಆಗ ಅವರನ್ನು ಗೆಲ್ಲಿಸಲೇಬೇಕೆಂಬ ಉಮೇದು ನೆಹರುಗೆ. ಆ ವೇಳೆ ಕರ್ನಾಟಕದಲ್ಲಿ ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಅಲ್ಲದೆ, ವಿಧಾನಸಭೆ ಮತ್ತು 1962ರ ಫೆಬ್ರವರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಆಗ ಬೇತಮಂಗಲದ ಎಂ.ವಿ. ಕೃಷ್ಣಪ್ಪ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಂಸತ್ತಿನ ಮೆಟ್ಟಿಲೇರಿದ್ದರು. ಅವರೇ ಆಗ ಬಲಿಪಶು. ನೆಹರು ಅವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದರು. ಬಳಿಕ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೈನ್‌ರನ್ನು ಗೆಲ್ಲಿಸಿಯೇಬಿಟ್ಟರು ನೆಹರು. ಜೈನ್ 83151 ಮತಗಳೊಂದಿಗೆ ಶೇ.67.45ರಷ್ಟು ಮತ ಪಡೆದರು. ಬಳಿಕ ನೆಹರು ಕೇಂದ್ರ ಸಂಪುಟದಲ್ಲಿ ವಿವಿಧ ಹುದ್ದೆಗಳನ್ನು ಜೈನ್‌ಗೆ ನೀಡಿದರು. ಎಂಥ ನೆಹರುನಪ್ಪಾ?
-ಉಗಮ ಶ್ರೀನಿವಾಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.