ರಾಜ ಪದವಿ
'ನಿರುದ್ಯೋಗಂ ರಾಜಕೀಯ ಲಕ್ಷಣಂ' ಎಂಬ ವಕ್ರೋಕ್ತಿಯಂತೆ , ಬೇರೆ ಯಾವ ಕೆಲಸಕ್ಕೂ ಬಾರದವರು, ಯಾವ ಕೆಲಸವೂ ಸಿಗದಿರುವವರು...
'ನಿರುದ್ಯೋಗಂ ರಾಜಕೀಯ ಲಕ್ಷಣಂ' ಎಂಬ ವಕ್ರೋಕ್ತಿಯಂತೆ , ಬೇರೆ ಯಾವ ಕೆಲಸಕ್ಕೂ ಬಾರದವರು, ಯಾವ ಕೆಲಸವೂ ಸಿಗದಿರುವವರು, ಮುಂದೆಯೂ ಯಾವ ಕೆಲಸವನ್ನೂ ಮಾಡದಿರಲು ರಾಜಕೀಯವನ್ನು ಆರಿಸಿಕೊಳ್ಳಬಹುದು ಎಂಬೊಂದು ನಂಬಿಕೆ ಭಾರತದ ನಿಷ್ಪ್ರಯೋಜಕ ರಾಜಕಾರಣಿಗಳನ್ನು ಕಂಡ ಪ್ರಜೆಯಗಳಲ್ಲಿ ಸಹಜವಾಗಿಯೇ ಬೇರೂರಿದೆ. ಆದರೆ ಅದು ಪೂರ್ತಿ ನಿಜವಲ್ಲ. ಇಲ್ಲಿ ವೃತ್ತಿಪರತೆ ತೋರಿದ ರಾಜಕಾರಣಿಗಳಿದ್ದಾರೆ. ರಾಜಕೀಯ ಶಾಸ್ತ್ರ ಅಭ್ಯಸಿಸಿ ಬಂದವರಿದ್ದಾರೆ. ಅತ್ಯುನ್ನತ ವಿದ್ಯಾಭ್ಯಾಸ ಮಾಡಿ, ಅತಿ ದೊಡ್ಡ ಉದ್ಯೋಗದಲ್ಲಿದ್ದು ಆನಂತರ ಸಮಾಜಸೇವೆಗೋಸ್ಕರ ರಾಜಕೀಯಕ್ಕೆ ಧುಮುಕಿದವರಿದ್ದಾರೆ. ಹಾಗಂತ ಭಾರಿ. ಓದು ಓದದಿದ್ದರೆ ರಾಜಕೀಯ ಮಾಡಲು, ದೇಶ ಆಳಲು ನಾಲಾಯಕ್ ಅಂತೇನಲ್ಲ. ದೇಶದ ಹಿತ ಕಾಯುವ ಇಚ್ಛಾಶಕ್ತಿಯಿದ್ದರೆ, ಕನಿಷ್ಠ ವಿದ್ಯಾಭ್ಯಾಸ ಮಾಡಿದವರೂ ತಮ್ಮ ಬುದ್ಧಿಬಲದಿಂದ ಸಾಧನೆ ಮೆರೆಯಬಹುದು. ತಮ್ಮ ಸುತ್ತಲಿನ ಸುಶಿಕ್ಷಿತರ ಸಲಹೆ, ಸೂಚನೆಗಳನ್ನು ಸ್ವೀಕರಿಸಿ, ಅಧ್ಯಯನ ಮಾಡಿ ದೇಶಕ್ಕೆ ಲಾಭವಾಗುವ ನಿರ್ಣಯಗಳನ್ನು ಕೈಗೊಳ್ಳಬಹುದು. ರಾಜಕಾರಣಿ ತಾನೇ ಸ್ವತಃ ವಿದ್ಯಾವಂತನಾಗಿದ್ದರಂತೂ ಬಿಡಿ, ಅದರ ಸದ್ಬಳಕೆ ರಾಷ್ಟ್ರವನ್ನು ಇನ್ನಷ್ಟು ಸಮೃದ್ಧಿಯತ್ತ ಕೊಂಡೊಯ್ಯಬಹುದು. ಇತರೆ ರಾಷ್ಟ್ರದ ರಾಜಕಾರಣಿಗಳ ವಿದ್ಯಾರ್ಹತೆಯ ಬಗ್ಗೆ ಓದಿದಾಗೆಲ್ಲ ನಮ್ಮ ರಾಜಕಾರಣಿಗಳ ಬಗ್ಗೆ ಕೀಳರಿಮೆ ಪಟ್ಟುಕೊಳ್ಳುವಂಥ ಪರಿಸ್ಥಿತಿಯಿರುವಾಗ, ನಮ್ಮಲ್ಲಿಯೂ ಉನ್ನತ ವ್ಯಾಸಂಗ ಮಾಡಿರುವ ರಾಜಕಾರಣಿಗಳಿದ್ದಾರೆ ಎಂದು ಖುಷಿಪಡಲು ಅಂಥ ಒಂದಷ್ಟು ನಾಯಕರ ಬಗ್ಗೆ ಇಲ್ಲಿ ವಿವರಗಳಿವೆ.
ಜೈರಾಮ್ ರಮೇಶ್
ರಾಜ್ಯ- ಆಂಧ್ರಪ್ರದೇಶ
ಪಕ್ಷ- ಕಾಂಗ್ರೆಸ್
ಬಿ.ಟೆಕ್(ಕೆಮಿಕಲ್ ಇಂಜಿನಿಯರಿಂಗ್)- ಐಐಟಿ ಬಾಂಬೆ
ಪಬ್ಲಿಕ್ ಪಾಲಿಸಿ ಆ್ಯಂಡ್ ಪಬ್ಲಿಕ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂ.ಎಸ್-ಕಾರ್ನೆಜ್ ಯುನಿವರ್ಸಿಟಿ
ಡಾ ಜಯಪ್ರಕಾಶ್ ನಾರಾಯಣ್
ಪಕ್ಷ -ಲೋಕಸತ್ತಾ
ರಾಜ್ಯ- ಆಂಧ್ರಪ್ರದೇಶ
ಗುಂಟೂರು ಮೆಡಿಕಲ್ ಕಾಲೇಜ್-ಮೆಡಿಕಲ್ ಡಿಗ್ರಿ
ಐಎಎಸ್ ಪರೀಕ್ಷೆಯಲ್ಲಿ ಎರಡನೇ ಸ್ಥಾನ
ನಿತೀಶ್ ಮಿಶ್ರಾ
ರಾಜ್ಯ- ಬಿಹಾರ
ಪಕ್ಷ -ಜನತಾದಳ
ಗ್ಲೋಬಲ್ ಪೊಲಿಟಿಕಲ್ ಎಕಾನಮಿಯಲ್ಲಿ ಸ್ನಾತಕೋತ್ತರ ಪದವಿ (ಯುನೈಟೆಡ್ ಕಿಂಗ್‌ಡಂ)
MBA (Netherland Institute of Management), ದೆಹಲಿ ವಿವಿಯಿಂದ ಬಿಎ (ಇತಿಹಾಸ) 2008ರಲ್ಲಿ ಎಂಟಿವಿ ಯೂತ್ ಐಕಾನ್.
ಶಶಿ ತರೂರ್
ರಾಜ್ಯ- ಕೇರಳ
ಪಕ್ಷ- ಕಾಂಗ್ರೆಸ್
ಬಿ.ಎ (ಏ್ಟಟಿಡ), ಎಂ.ಎ, ಪಿಹೆಚ್‌ಡಿ, ಡಿ.ಲಿಟ್(Honorary), Dr. Honoris Causa
ಸಚಿನ್ ಪೈಲಟ್
ರಾಜ್ಯ- ರಾಜಸ್ತಾನ
ಪಕ್ಷ- ಕಾಂಗ್ರೆಸ್
ಬಿಎ-ಸೇಂಟ್ ಸ್ಟಿಫನ್‌ಸನ್ ಕಾಲೇಜ್
ಎಂಬಿಎ- ವಾರ್ಟನ್ ಬ್ಯುಸಿನೆಸ್ ಸ್ಕೂಲ್, University of Pennsylvania, Philadelphia, USA
ಡಾ. ಸಿ.ಪಿ ಠಾಕೂರ್
ರಾಜ್ಯ -ಬಿಹಾರ
ಪಕ್ಷ - ಬಿಜೆಪಿ
ಎಂಬಿಬಿಎಸ್, ಎಂಡಿ, ಎಂ ಆರ್.ಸಿ.ಪಿ, ಎಫ್, ಆರ್‌ಸಿಪಿ
ಡಾ. ಶ್ರೀಕಾಂತ್ ಜಿಚ್ಕರ್
ರಾಜ್ಯ - ಮಹಾರಾಷ್ಟ್ರ
ಪಕ್ಷ - ಕಾಂಗ್ರೆಸ್
ಎಂಬಿಬಿಎಸ್, ಎಂಡಿ, ಡಿಬಿಎಂ, ಎಂಬಿಎ, ಡಿ.ಲಿಟ್ (ಸಂಸ್ಕೃತ), ಎಲ್‌ಎಲ್‌ಎಂ. (ಇಂಟರ್ ನ್ಯಾಷನಲ್ ಲಾ) ಜರ್ನಲಿಸಂ ಪದವಿ, ಎಂ.ಎ. (ಪಬ್ಲಿಕ್ ಅಡ್ಮಿನಿಸ್ಟ್ರೇಷನ್), ಎಂ.ಎ. (ಸೋಷಿಯಾಲಜಿ), ಎಂ ಎ.
(ಎಕಾನಮಿಕ್ಸ್), ಎಂ.ಎ (ಸಂಸ್ಕೃತ), ಎಂ.ಎ. (ಇಂಗ್ಲಿಷ್ ಸಾಹಿತ್ಯ.), ಎಂ.ಎ. (ಫಿಲಾಸಫಿ), ಎಂ.ಎ. (ಪೊಲಿಟಿಕಲ್ ಸೈನ್ಸ್), ಎಂ.ಎ. (Ancient Indian History, Culture & Archeology),
ಮಾಜಿ ಐಎಎಸ್, ಐಪಿಎಸ್
ಪೃಥ್ವೀರಾಜ್ ಚೌಹಾಣ್
ರಾಜ್ಯ- ಮಹಾರಾಷ್ಟ್ರ
ಪಕ್ಷ - ಕಾಂಗ್ರೆಸ್
ರಾಜಸ್ತಾನದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಇ.ಐ.ಖಿ.ಖ ಪಿಲಾನಿ)ನಿಂದ ಬಿ.ಇ (ಏ್ಟಟಿಡ)
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ಎಂಎಸ್.
ಎಸ್ಸೆಂ ಕೃಷ್ಣ
ರಾಜ್ಯ- ಕರ್ನಾಟಕ
ಪಕ್ಷ- ಕಾಂಗ್ರೆಸ್
ಎಲ್‌ಎಲ್‌ಬಿ- ಸದರನ್ ಮೆಥಾಡಿಸ್ಟ್ ಯೂನಿವರ್ಸಿಟಿ, ಡಲ್ಲಾಸ್, ಟಿಎಕ್ಸ್ ಆ್ಯಂಡ್ ದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಲಾ ಸ್ಕೂಲ್.
ಡಾ. ಅರುಣ್ ಶೌರಿ
ರಾಜ್ಯ- ಜಮ್ಮು ಕಾಶ್ಮೀರ
ಪಕ್ಷ- ಬಿಜೆಪಿ
ಎಂಕಾಂ,ಪಿಹೆಚ್‌ಡಿ ಇನ್ ಎಕನಾಮಿಕ್ಸ್
ಡಾ. ಮುರಳಿ ಮನೋಹರ್ ಜೋಷಿ
ರಾಜ್ಯ- ಉತ್ತರಪ್ರದೇಶ
ಪಕ್ಷ-ಬಿಜೆಪಿ
ಅಲಹಾಬಾದ್ ವಿ.ವಿ ಯಿಂದ ಎಂಎಸ್ಸಿ(ಭೌತಶಾಸ್ತ್ರ), ಡಿ.ಫಿಲ್
ಸಂಸ್ಕೃತದಲ್ಲಿ ಪಿಹೆಚ್‌ಡಿ ಥೀಸಿಸ್ ಬರೆದ ಏಕೈಕ ವ್ಯಕ್ತಿ
ಡಾ. ಸುಬ್ರಮಣ್ಯನ್ ಸ್ವಾಮಿ
ರಾಜ್ಯ-ತಮಿಳುನಾಡು
ಪಕ್ಷ-ಬಿಜೆಪಿ
ಬ್ಯಾಚಲರ್ಸ್ ಇನ್ ಮ್ಯಾಥಮ್ಯಾಟಿಕ್ಸ್ -ಹಿಂದೂ ಕಾಲೇಜ್
ಮಾಸ್ಟರ್ಸ್ ಇನ್ ಸ್ಟ್ಯಾಟಿಸ್ಟಿಕ್ಸ್ -ಐಎಸ್‌ಐ ಕೊಲ್ಕತ್ತಾ, ಪಿಹೆಚ್‌ಡಿ ಇನ್ ಎಕನಾಮಿಕ್ಸ್- ಹಾರ್ವಡ್ ಯೂನಿವರ್ಸಿಟಿ
ಅರವಿಂದ್ ಕೇಜ್ರಿವಾಲ್
ರಾಜ್ಯ:ದೆಹಲಿ
ಪಕ್ಷ: ಆಮ್ ಆದ್ಮಿ ಪಾರ್ಟಿ
ಬಿ.ಟೆಕ್ (ಮೆಕ್ಯಾನಿಕಲ್ ಇಂಜಿನಿಯರಿಂಗ್ ) -ಐಐಟಿ ಖರಗ್‌ಪುರ್
ಪ್ರೇಮ್‌ದಾಸ್ ರೈ
ರಾಜ್ಯ- ಸಿಕ್ಕಿಂ
ಪಕ್ಷ -ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್
ಬಿ.ಟೆಕ್(ಕೆಮಿಕಲ್ ಇಂಜಿನಿಯರಿಂಗ್) -ಐಐಟಿ ಕಾನ್ಪುರ
ಪಿಜಿಡಿಎಂ ಮತ್ತು ಊ್ಝಡಜಝ್ಟಿಢಿಜ್ಠ ಫೆಲೋಶಿಪ್ ವಿಜೇತ
ಡಾ. ಮನಮೋಹನ್‌ಸಿಂಗ್
ರಾಜ್ಯ- ಅಸ್ಸಾಂ
ಪಕ್ಷ-ಕಾಂಗ್ರೆಸ್
ಬಿಎ (ಏ್ಟಟಿಡ), ಎಕನಾಮಿಕ್ಸ್. ಎಂಎ ಎಕನಾಮಿಕ್ಸ್, ಪಂಜಾಬ್ ಯೂನಿವರ್ಸಿಟಿ, ಚಂಡೀಗಢ ಯೂನಿವರ್ಸಿಟಿ ಟಾಪರ್ Economics Tripos (First Class Honours)-ಕೇಂಬ್ರಿಜ್ ಯೂನಿವರ್ಸಿಟಿ ಡಿ.ಫಿಲ್ -(ಆಕ್ಸ್‌ಫರ್ಡ್ ಯೂನಿವರ್ಸಿಟಿ)
ಅಜಿತ್ ಸಿಂಗ್
ರಾಜ್ಯ- ಉತ್ತರ ಪ್ರದೇಶ
ಪಕ್ಷ- ರಾಷ್ಟ್ರೀಯ ಲೋಕದಳ
ಬಿಎಸ್ಸಿ- ಲಕ್ನೋ ಯುನಿವರ್ಸಿಟಿ
ಬಿ.ಟೆಕ್ - ಐಐಟಿ ಖರಗ್‌ಪುರ್
ಎಂಎಸ್- ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕಾಗೋ
ಪಿ. ಚಿದಂಬರಂ
ರಾಜ್ಯ-ತಮಿಳುನಾಡು
ಪಕ್ಷ- ಕಾಂಗ್ರೆಸ್
ಬಿಎಸ್ಸಿ-ಸ್ಟ್ಯಾಟಿಸ್ಟಿಕ್ಸ್
ಎಲ್‌ಎಲ್‌ಬಿ
ಎಂಬಿಎ- ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್
ಕಪಿಲ್ ಸಿಬಲ್
ರಾಜ್ಯ- ದೆಹಲಿ
ಪಕ್ಷ-ಕಾಂಗ್ರೆಸ್
ಎಲ್‌ಎಲ್‌ಬಿ, ಎಂಎ- ದೆಹಲಿ ಯೂನಿವರ್ಸಿಟಿ
ಎಲ್‌ಎಲ್‌ಎಂ- ಹಾರ್ವಡ್ ಲಾ ಕಾಲೇಜು
-ಕೆ. ರಜನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.