ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರಧಾನಿ ಅಭ್ಯರ್ಥಿಯನ್ನೆ ಗೆಲ್ಲಿಸಿ

Vishwanath S
Updated On : 30 Mar 2014, 4:15 am

ಮರದ ಬೇರು ಸದೃಢವಾಗಿದ್ದರೆ ಮರದ ಕೊಂಬೆಗಳು ಬಲಿಷ್ಠವಾಗಿ ಬೆಳೆದು ಮರದ ಕೆಳಗೆ ಕುಳಿತವರಿಗೆ ತಂಪಾದ ಗಾಳಿ-ನೆರಳು ನೀಡಲು ಸಾಧ್ಯ. ಈ ಸಿದ್ಧಾಂತದ ಪ್ರಕಾರ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರ ಭರತ ಭೂಮಿಯನ್ನು ಶತ್ರು ರಾಷ್ಟ್ರಗಳಿಂದ ರಕ್ಷಿಸಿ ದೇಶವನ್ನು ಬಲಿಷ್ಠವಾಗಿ ನಿರ್ಮಾಣ ಮಾಡಬಲ್ಲ ಮತ್ತು ಎಲ್ಲಾ ಭಾರತೀಯರ ಹಿತವನ್ನು ಕಾಪಾಡಬಲ್ಲ ಪ್ರಧಾನಿ ಅಭ್ಯರ್ಥಿಯನ್ನೇ ಪರಿಗಣಿಸಿ ಮತದಾನ ಮಾಡಿದರೆ ದೇಶವೂ ಅಭಿವೃದ್ಧಿಯಾಗುತ್ತದೆ. ಜೊತೆಗೆ ಪ್ರಧಾನಿ ಅಭ್ಯರ್ಥಿಯ ಪಕ್ಷದ ಸದಸ್ಯರನ್ನೇ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕೂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುತ್ತದೆ.
- ಫ್ಯಾಷನ್ ಡಿಸೈನರ್ ಮಧು, ಹಾಸನ

ಸಮರ್ಥ ನಾಯಕನನ್ನು ಆಯ್ಕೆ ಮಾಡಿ
ಈ ಪ್ರಪಂಚದಲ್ಲಿ ನಮ್ಮ ಭಾರತ ದೇಶದಲ್ಲಿ ಸಮೃದ್ಧ ಯುವ ಜನತೆ ವಿದ್ಯಾವಂತರು ಹಾಗೂ ಸುಸಂಸ್ಕೃತ ನಾಗರೀಕರು ಇರುವುದರಿಂದ ವಿವೇಕದಿಂದ ಮತಚಲಾಯಿಸಬೇಕು. ನಾವು ಜಾತಿ, ಧರ್ಮದ ಹೆಸರಿನಲ್ಲಿ ಮತ್ತು ಹಣದ ಆಮಿಷಕ್ಕೆ ಒಳಗಾಗದೇ ನಮಗೆ ಒಳ್ಳೆಯ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಸ್ಥಳೀಯ ಅಭ್ಯರ್ಥಿಗೆ ಬದಲು ಪ್ರಧಾನಿ ಅಭ್ಯರ್ಥಿಯನ್ನು ನೋಡಿ ಮತ ಚಲಯಿಸಬೇಕು. ಹಾಗೇ ನೋಡುವಾಗ ಅವರು ನಿಷ್ಠಾವಂತರು, ನಿಸ್ವಾರ್ಥರೂ ಆಗಿರುವುದು ಮುಖ್ಯವೆಂಬುದನ್ನು ಮನಗಾಣಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಭ್ರಷ್ಟ ರಾಜಕೀಯವೇ ತುಂಬಿ ಹೋಗುತ್ತದೆ. ಉತ್ತಮ ಆಡಳಿತ ಕೊಡುವ ಶಕ್ತಿಯು ಇರಬೇಕು ಎನ್ನುವುದನ್ನು ಗಮನಿಸಬೇಕು. ಹಾಗಿದ್ದಲ್ಲಿ ಪ್ರಧಾನಿ ಅಭ್ಯರ್ಥಿಯೇ ಹೆಚ್ಚು ಸಮಂಜಸ.
-ಕೆ. ಜಿ. ಸಿದ್ದೇಶ್, ದೊಡ್ಡಬಾತಿ, ದಾವಣಗೆರೆ.

ಪ್ರಧಾನಿ ಅಭ್ಯರ್ಥಿಗೆ ನಮ್ಮ ಮತ
ಸ್ಥಳೀಯ ಅಭ್ಯರ್ಥಿಗಿಂತಾ ಪ್ರಧಾನಿ ಅಭ್ಯರ್ಥಿಗೆ ಮತ ಚಲಾಯಿಸುವುದು ಸೂಕ್ತ. ಏಕೆಂದರೆ ಪ್ರಧಾನಿ ಅಭ್ಯರ್ಥಿಯು ದೇಶದ ಆಗುಹೋಗುಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ, ಹಾಗಾಗಿಯೆ ಅವರನ್ನು  ಪ್ರಧಾನಿ ಅಭ್ಯರ್ಥಿಯೆಂದು ಆಯ್ಕೆ ಮಾಡಿರುತ್ತಾರೆ. ಇಂದು ಭಾರತ ದೇಶವು ಬಹಳ ಸಂಕಷ್ಟ ಪರಿಸ್ಥಿತಿಯಲ್ಲಿದೆ, ಕಾರಣ ನೆರೆ ರಾಷ್ಟ್ರಗಳ ಹಾವಳಿ, ಭ್ರಷ್ಟಾಚಾರ ಹಾಗೂ ಆರ್ಥಿಕ ಹಿಂಜರಿಕೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ನೋಡಿದರೆ ಪ್ರಧಾನಿ ಅಭ್ಯರ್ಥಿಗೆ ಮತ ನೀಡುವುದು ಸೂಕ್ತ. ಅದರಲ್ಲೂ ಪ್ರಧಾನಿ ಅಭ್ಯರ್ಥಿ ಆಯ್ಕೆಯ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕುವುದು ಒಳ್ಳೆಯದು. ಹಾಗಾಗಿ ದೇಶದವನ್ನು ಸುಭದ್ರ ಸ್ಥಿತಿಯಲ್ಲಿಡಲು ಪ್ರಧಾನಿ ಅಭ್ಯರ್ಥಿ ಆಯ್ಕೆಯು ಮುಖ್ಯ ಪಾತ್ರ ವಹಿಸುತ್ತದೆ.
- ಸುರೇಶ್ ಸೋಮಕ್ಕನವರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement