ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

Vishwanath S
Updated On : 30 Mar 2014, 4:16 am

ಬೆಂಗಳೂರಿನ ಯಲಹಂಕದಲ್ಲಿ ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್‌ನವರು ಕಾಕೋಳು ವೇಣುಗೋಪಾಲನ ವೈಭವದ ತೇರನ್ನು ಏಪ್ರಿಲ್ 2 ರಿಂದ 5 ರವರೆಗೆ ನಡೆಸಲಿದ್ದಾರೆ. ಇದರ ಅಂಗವಾಗಿ ಅಕ್ಷರ, ಆರೋಗ್ಯ, ಅಧ್ಯಾತ್ಮ ಅಭಿಯಾನದ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಹಲವು ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಡಗರ.  
ಏ.2 ರಂದು ಬ್ರಹ್ಮರಥೋತ್ಸವದ ಸಮಾರೋಪದಲ್ಲಿ ಅಶ್ವತ್ಥಕಟ್ಟೆಯ ಮಹಾಸಂಪ್ರೋಕ್ಷಣೆ ಮತ್ತು ನಾಗಬಿಂಬಗಳ ಪುನಃಪ್ರತಿಷ್ಠಾಪನೆ, ಗರುಡ ಧ್ವಜಾರೋಹಣ, ಸಂತಾನಾಪೇಕ್ಷಿಗಳಿಗೆ ಗರುಡ ಬುತ್ತಿ,ತೊಟ್ಟಿಲುಪೂಜೆ ಆಯೋಜಿಸಿದೆ.
ಏ.3ರಂದು ವಿಷ್ಣು ಸಹಸ್ರನಾಮ ಪಾರಾಯಣ, ಗಜೇಂದ್ರ ಮೋಕ್ಷ ಉತ್ಸವ, ಮಹಾ ಕಲ್ಯಾಣೋತ್ಸವಿದೆ.
ಏ.4ರಂದು ಗರುಡೋತ್ಸವ, ಶೇಷವಾಹನದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣನ ಉತ್ಸವಮೂರ್ತಿಯ ಮಂಟಪ್ಪಡಿ (ಗ್ರಾಮ ಪ್ರದಕ್ಷಿಣೆ) ದಿವ್ಯ ಪುಷ್ಪಾಲಂಕೃತ 81ನೇ ಬ್ರಹ್ಮರಥೋತ್ಸವ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಧೂಳಿಕೋತ್ಸವ, ವಿದ್ಯುದ್ದೀಪಾಲಂಕೃತ ತೇರಿನ ಉತ್ಸವವಿದೆ.
ಏ.5ರಂದು ದೇವಾಲಯದ ಆವರಣದಲ್ಲಿ ವಸಂತೋತ್ಸವದೊಡನೆ 4 ದಿನಗಳ ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವ ಸಂಪನ್ನವಾಗಲಿದೆ. ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಸ್ವಾಮಿ ಮತ್ತು ಶ್ರೀ ವ್ಯಾಸರಾಜ ಪ್ರತಿಷ್ಠಿತ ಕಂಬದ ಆಂಜನೇಯ ಸ್ವಾಮಿ. ಇಲ್ಲಿದೆ. ಧ್ವಜಾವಾರೋಹಣ ಕಾಲದಲ್ಲಿ ಗರುಡಬುತ್ತಿಯನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆ ಮಾಡಿದರೆ  ಸಂತಾನಭಾಗ್ಯ ಪಡೆಯುವರೆಂಬ ನಂಬಿಕೆಯಿದೆ. ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement