ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಂದ್ರಚೂಡ ಶಿವಶಂಕರ!

ಕೆಲವರು ದೇವತೆಗಳ ಜತೆಗೂ ಸರಸವಾಡಬಲ್ಲರು. ಶಿವನ ಉಗ್ರರೂಪ ಕೂಡ ಇಂಥವರಿಗೆ ಗೇಲಿಯ ವಸ್ತುವಾಗಿಬಿಡುತ್ತದೆ...

Rashmi Kasaragodu
Updated On : 5 May 2014, 3:13 am

ಕೆಲವರು ದೇವತೆಗಳ ಜತೆಗೂ ಸರಸವಾಡಬಲ್ಲರು. ಶಿವನ ಉಗ್ರರೂಪ ಕೂಡ ಇಂಥವರಿಗೆ ಗೇಲಿಯ ವಸ್ತುವಾಗಿಬಿಡುತ್ತದೆ. ಶಿವನ ಲಿಂಗಸ್ವರೂಪವೇ ಆತನ ಸತತ ಶೃಂಗಾರಸ್ವಭಾವವನ್ನು ಬಯಲು ಮಾಡುವುದೆಂಬುದೇನೋ ನಿಜವೇ. ಇನ್ನು ಪುರುಷರು ಹೋದಲ್ಲೆಲ್ಲಾ ಅತ್ಮಲಿಂಗಪೂಜೆ ಮಾಡಿಕೊಳ್ಳುವುದಕ್ಕೇನೂ ಅಡ್ಡಿಯಿಲ್ಲ. ಆದರೆ ತರುಣಿಯರಲ್ಲೂ ಶಿವನನ್ನು ಕಾಣುವುದುಂಟೆ? ಸಾಧ್ಯವೆ? ಕವಿಗಳಿಗೆ ಸಾಧ್ಯ!

ಉಗ್ರರೂಪಂ ಕುಚದ್ವಂದ್ವಂ ಹಾರಗಂಗಾಧರಂ ತವ
ಚಂದ್ರಚೂಡಂ ಕರಿಷ್ಯಾಮಿ ಕುರು ತಾವದ್ದಿಗಂಬರಮ್

ಶೃಂಗಾರಮಗ್ನ ಕವಿಯೊಬ್ಬ ತನ್ನ ಪ್ರೇಯಸಿಗೆ ನಿವೇದಿಸಿಕೊಳ್ಳುತ್ತಿದ್ದಾನೆ: ಶಿವನು ಉಗ್ರರೂಪ, ಗಂಗಾಧರ, ಚಂದ್ರಚೂಡ, ದಿಗಂಬರ. ಉನ್ನತವಾಗಿರುವ ನಿನ್ನ ಕುಚಸಂಪತ್ತು ಕೂಡ ಶಿವನಿಗೆ ಸಮಾನ! ಅದು ಹೇಗೆ ಅನ್ನುತ್ತೀಯಾ? ಆವರಿಸಿರುವ ಸೆರಗನ್ನು ಒಮ್ಮೆ ತೆಗೆದುಬಿಡು. ಆಗ ಅವು ದಿಗಂಬರವಾಗಿಬಿಡುತ್ತವೆ. ಎದೆ ತಂಪಾಗಿರಲೆಂದು ಕುಂಕುಮಚಂದನಾದಿಗಳನ್ನು ಲೇಪಿಸಿಕೊಂಡಿರುವುದರಿಂದ ಅವು ರಕ್ತವರ್ಣದವಾಗಿ ಉಗ್ರರೂಪ ಪಡೆದಿವೆ. ಅವುಗಳ ಮೇಲೆ ಹಾರವಿದೆ. ಗಂಗೆಯನ್ನು ಒಡಲಲ್ಲಿ ಹೊತ್ತುಕೊಂಡಂತೆ ತುಂಬಿಕೊಂಡು ಗಂಗಾಧರ ಎನಿಸಿವೆ. ನೀನು ಅನುಮತಿ ಕೊಟ್ಟರೆ, ಮೆಲ್ಲನೆ ನನ್ನ ಉಗುರುಗಳನ್ನು ಅವುಗಳ ಮೇಲೆ ಊರಿ ಅರ್ಧಚಂದ್ರಾಕಾರವನ್ನು ಅಲ್ಲಿ ಮೂಡಿಸಿ, ಅವುಗಳನ್ನು ಚಂದ್ರಚೂಡನನ್ನಾಗಿಸಿಬಿಡುತ್ತೇನೆ!
ಎಂಥ ಅರಸಿಕ ಪ್ರೇಯಸಿಯಾದರೂ ಈ ವರ್ಣನೆಗೆ ಬಿದ್ದುಹೋಗಲೇಬೇಕು!ಟಿ

-ಹರಿಹರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement