ಬೈಟುಕಾಫಿ

ನವಸಾಗರ

ಪಾತ್ರೆಗಳನ್ನು ಕಲಾಯಿ ಮಾಡುವಾಗ ನವಸಾಗರವನ್ನು ಉಪಯೋಗಿಸುತ್ತಾರೆ. ಇದಕ್ಕೆ ಕಾರಣ ಹೆಚ್ಚಿನವರಿಗೆ ಗೊತ್ತೇ ಇಲ್ಲ....

ಪಾತ್ರೆಗಳನ್ನು ಕಲಾಯಿ ಮಾಡುವಾಗ ನವಸಾಗರವನ್ನು ಉಪಯೋಗಿಸುತ್ತಾರೆ. ಇದಕ್ಕೆ ಕಾರಣ ಹೆಚ್ಚಿನವರಿಗೆ ಗೊತ್ತೇ ಇಲ್ಲ.
ನವಸಾಗರದ ರಾಸಾಯನಿಕ ಹೆಸರು ಅಮೋನಿಯಂ ಕ್ಲೋರೈಡ್. ಕಲಾಯಿ ಮಾಡುವುದೆಂದರೆ ಪಾತ್ರೆಯ ಒಳಮೈಯನ್ನು ತವರದಿಂದ ಲೇಪಿಸುವುದು. ಪಾತ್ರೆಗೆ ತವರವು ಭದ್ರವಾಗಿ ಲೇಪನವಾಗ ಬೇಕಾದರೆ; ಪಾತ್ರೆಯ ಒಳ ಮೈ ಶುಭ್ರವಾಗಿರಬೇಕು ಮತ್ತು ಕಿಲುಬುರಹಿತವಾಗಿರಬೇಕು. ಪಾತ್ರೆಗೆ ನವಸಾಗರವನ್ನು ಹಚ್ಚಿ ಕಾಯಿಸಿದಾಗ ಅದು ವಿಭಜನೆ ಹೊಂದಿ ಅಮೋನಿಯ ಮತ್ತು ಹೈಡ್ರೋಜನ್ ಕ್ಲೋರೈಡ್ ಉತ್ಪನ್ನವಾಗುತ್ತವೆ. ಗಾಳಿಗಿಂತ ಹಗುರವಾದ ಅಮೋನಿಯ ಹೊರಹೋಗುವುದು. ಆಮ್ಲೀಯವಾದ ಹೈಡ್ರೋಜನ್ ಕ್ಲೋರೈಡ್ ಪಾತ್ರೆಯನ್ನು ಸ್ವಚ್ಛ ಮಾಡಿ ಪಾತ್ರೆಯ ಕಿಲುಬನ್ನು ಹೊರಹಾಕುತ್ತದೆ. ಇದೂ ಅಲ್ಲದೆ, ಕರಗಿದ ತವರವು ಪಾತ್ರೆಯ ಒಳಭಾಗದಲ್ಲಿ ಸಮನಾಗಿ ಹರಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಕಲಾಯಿ ಮಾಡುವಾಗ ನವಸಾಗರವನ್ನು ಉಪಯೋಗಿಸುತ್ತಾರೆ.

-ಎಚ್. ಕೃಷ್ಣಮೂರ್ತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

Op Sindoor: ವಿಶ್ವಭೂಪಟದಿಂದ ಪಾಕ್ ನಿರ್ನಾಮಕ್ಕೆ ಕೆಲವೇ ನಿಮಿಷಗಳ ಅಂತರದಲ್ಲಿದ್ದೆವು, ಆದ್ರೆ ಅವರು ತಡೆದರು...: ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ

IPL 2026: ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್; ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

IPL 2026: ಯಾರ್ ಮೇಲಾದ್ರೂ 5 ಸಾವಿರ ಹೂಡಿಕೆ ಮಾಡಿ ನೋಡಿ: LSG ಮಾಲೀಕರ ಕುರಿತು Mohammed Shami ಹೇಳಿಕೆ ವೈರಲ್!

ದೇಶದಲ್ಲೇ ಮೊದಲ ಬಾರಿಗೆ ಡ್ರಗ್ಸ್, ಸಾಮಾಜಿಕ–ಆರ್ಥಿಕ ಜನಗಣತಿ ಆರಂಭಿಸಿದ ಪಂಜಾಬ್: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

SCROLL FOR NEXT