ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಹುಮತ ಸರ್ಕಾರ ಬಲುಹಿತ

ಒಂದು ಪಕ್ಷ ತನ್ನ ತತ್ವ ಸಿದ್ಧಾಂತ ಬದ್ಧತೆಗನುಸಾರವಾಗಿ ದೇಶವಾಸಿಗಳ ಹಿತಕ್ಕಾಗಿ ಧೃಡನಿರ್ಧಾರಗಳನ್ನು...

Rashmi Kasaragodu
Updated On : 5 May 2014, 3:13 am

ಒಂದು ಪಕ್ಷ ತನ್ನ ತತ್ವ ಸಿದ್ಧಾಂತ ಬದ್ಧತೆಗನುಸಾರವಾಗಿ ದೇಶವಾಸಿಗಳ ಹಿತಕ್ಕಾಗಿ ಧೃಡನಿರ್ಧಾರಗಳನ್ನು ಕೈಗೊಂಡು ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಲು ಆ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದ್ದರೆ ಮಾತ್ರ ಸಾಧ್ಯ. ಸಮ್ಮಿಶ್ರ ಸರ್ಕಾರವಾದರೆ ಆ ಸರ್ಕಾರದ ಪ್ರಮುಖ ಪಕ್ಷವು ತನ್ನ ಅಂಗ ಪಕ್ಷಗಳ ಬೇಡಿಕೆಗಳನ್ನು ಈಡೇರಿಸುತ್ತ, ಅವರನ್ನು ಸಂತೈಸುತ್ತ ಐದು ವರ್ಷಗಳ ಕಾಲ ಸರ್ಕಾರವನ್ನು ಮುನ್ನಡೆಸುವುದೇ ದೊಡ್ಡ ಸಾಧನೆಯಾಗಿ ಬಿಡುತ್ತದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳನ್ನು ತಿರಸ್ಕರಿಸಿ ರಾಷ್ಟ್ರೀಯ ಪಕ್ಷಗಳನ್ನು ಪುರಸ್ಕರಿಸಿದರೆ ಬಹುಮತದ ಸರ್ಕಾರವನ್ನು ನಿರೀಕ್ಷಿಸಬಹುದು.
= ಆರ್. ಸಿ. ಪರಶುರಾಮ್, ಶಿಕಾರಿಪುರ

ಸಮ್ಮಿಶ್ರ ಸರ್ಕಾರ ಸೂಕ್ತ
ಭಾರತವು ಒಂದು ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಅವರ ನಿರ್ಧಾರದ ಮೇಲೆ ಒಂದು ಸರ್ಕಾರ ರಚನೆಯಾಗುತ್ತದೆ. ಅದು ಪೂರ್ಣ ಬಹುಮತದ ಸರ್ಕಾರವೇ ಆಗಿರಬಹುದು ಅಥವಾ ಸಮ್ಮಿಶ್ರ ಸರ್ಕಾರವೇ ಆಗಿರಬಹುದು. ಆದರೆ ಪ್ರಜೆಗಳು ಬಯಸುವಂಥದ್ದು ಅಭಿವೃದ್ಧಿಯನ್ನು ಮಾತ್ರ. ಇಲ್ಲಿ ಅಭಿವೃದ್ಧಿಯೇ ಮುಖ್ಯ ಗುರಿ. ಪೂರ್ಣ ಬಹುಮತ ಹೊಂದಿದ ಸರ್ಕಾರ ನಿರಂಕುಶ ಆಧಿಕಾರವನ್ನು ತನಗೆ ಅರಿವಿಲ್ಲದೇ ಅಥವಾ ಅರಿವಿದ್ದೂ ಮಾಡುತ್ತಿರುವ ನಾಟಕವನ್ನು ನೋಡುತ್ತಿದ್ದೇವೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಉತ್ತಮವಾದ ದಕ್ಷವಾದ ಆಡಳಿತವನ್ನು ನೀಡಬಹುದು. ರಾಜಕೀಯ ಭವಿಷ್ಯಕ್ಕಾಗಿ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಲೇಬೇಕಾಗುತ್ತದೆ.
= ರಾಜು. ಬಿ.ಎಸ್, ತುಮಕೂರು

ಸಮ್ಮಿಶ್ರ ಸರ್ಕಾರ ಬೇಡವೇ ಬೇಡ
ಚುನಾವಣಾ ಸಂದರ್ಭದಲ್ಲಿ ಹಲವಾರು ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ನಿಂದನೆಗಳಲ್ಲಿ ತೊಡಗಿ ತಾವು ಗೆಲ್ಲಲು ಹರಸಾಹಸ ಮಾಡುತ್ತಾರೆ. ಚುನಾವಣಾ ಫಲಿತಾಂಶ ಹೊರ ಬಂದು ನಿಚ್ಚಳವಾದ ಬಹುಮತ ಸಿಗದೇ ಇದ್ದಾಗ ಹಿಂದಿನದೆಲ್ಲವನ್ನು ಮರೆತು ವೈರಿಗಳಂತೆ ಕಚ್ಚಾಡುತ್ತಿದ್ದ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುತ್ತಾರೆ. ಇಂತಹ ಸರ್ಕಾರಕ್ಕೆ ಯಾವುದೇ ತತ್ವ ಸಿದ್ಧಾಂತಗಳಿರುವುದಿಲ್ಲ. ಇಂತಹ ಸಮ್ಮಿಶ್ರ ಸರ್ಕಾರಗಳ ದೊಂಬರಾಟದಿಂದಾಗಿ ದೇಶ ಅಧೋಗತಿಯತ್ತ ಸಾಗುತ್ತದೆ. ಇದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಪೂರ್ಣ ಬಹುಮತದ ಸರ್ಕಾರದಿಂದ ಮಾತ್ರ ಸುಭದ್ರ ಸರ್ಕಾರ ನೀಡಲು ಸಾಧ್ಯ.
= ವೀರೇಶ್. ಕೆ. ಟಿ. ಮಾಡ್ಲಾಕನಹಳ್ಳಿ


'ಜಗುಲಿ'ಯಲ್ಲಿ ಈ ಸಲದ ವಿಷಯ 'ಮುಂದಿನ ಪ್ರಧಾನಿ ಹೇಗಿರಬೇಕು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್:  anekaby2@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement