ಮಾಹಿತಿ ಸ್ಟೇಷನ್
ಬ್ಯಾಂಕ್ ದರೋಡೆ ನಂತರ
ಅನುಸರಿಸಬೇಕಾದ ಕ್ರಮಗಳು
- ದರೋಡೆ ವೇಳೆ ಗಲಾಟೆ ನಡೆದು ಯಾರಾದರೂ ಗಾಯಗೊಂಡಿದ್ದಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ.
- ದರೋಡೆಯಾದ ಸ್ಥಳದಲ್ಲಿ ಯಾವುದೇ ವಸ್ತುಗಳನ್ನು ಮುಟ್ಟಬೇಡಿ. ಇದರಿಂದ ಸಾಕ್ಷಿ ನಾಶವಾಗುತ್ತದೆ. ಹಾಗಾಗಿ ಆ ಸುಳಿವು ಹಾಗೂ ಸಾಕ್ಷಿಗಳನ್ನು ಕಾಪಾಡಿ.
-ಹೆದರದೆ ದರೋಡೆ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿ.
-ದರೋಡೆಯ ವೇಳೆ ಬ್ಯಾಂಕ್ನಲ್ಲಿದ್ದ ಎಲ್ಲ ಗ್ರಾಹಕರ ವಿವರಗಳನ್ನು ಪೊಲೀಸರಿಗೆ ಒದಗಿಸಿ ತನಿಖೆಗೆ ಸಹಾಯ ಮಾಡಿ.
ಚಿನ್ನ-ಬೆಳ್ಳಿ ಅಂಗಡಿಯಲ್ಲಿ ದರೋಡೆ/ಕಳ್ಳತನ ನಡೆಯುವ ಸಂದರ್ಭಗಳು
- ಅಂಗಡಿಯಲ್ಲಿ ಹೆಚ್ಚು ಗಿರಾಕಿಗಳು ಇಲ್ಲದ ವೇಳೆ ಬಂದೂಕು, ಚಾಕು, ಚೂರಿಯಂತಹ ಮಾರಕ ವಸ್ತುಗಳನ್ನು ತೋರಿಸಿ ದರೋಡೆ ಮಾಡಲಾಗುತ್ತದೆ.
- ಅಂಗಡಿಗಳನ್ನು ಬೆಳಗಿನ ವೇಳೆ ತೆಗೆಯುವಾಗ ಮತ್ತು ರಾತ್ರಿ ಅಂಗಡಿ ಮುಚ್ಚುವಾಗ ಅಪಾಯಕಾರಿ ಆಯುಧಗಳನ್ನು ತೋರಿಸಿ ದರೋಡೆ ಮಾಡುವುದು ಸಾಮಾನ್ಯ. ಹಾಗಾಗಿ ಈ ಬಗ್ಗೆ ಎಚ್ಚರದಿಂದಿರಬೇಕು.
-ರಾತ್ರಿ ವೇಳೆ ಬೀಗ ಒಡೆದು, ಶಟರ್ ತೆಗೆದು, ಕಳವು ಮಾಡುವುದು ಮತ್ತು ಕನ್ನ ಕೊರೆದು ಕಳವು ಮಾಡುವುದು ಹೆಚ್ಚಿರುತ್ತದೆ.
-ಅಂಗಡಿಗಳಲ್ಲಿ ಮಾರಾಟ ಮಾಡಲು ನೇಮಿಸಿರುವ ಸಹಾಯಕರು ಕಳವು ಮಾಡುವುದು ಸಹ ಹೆಚ್ಚಿರುತ್ತದೆ.
- ಗಿರಾಕಿಗಳು ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ಕಳ್ಳತನ ಮಾಡುವುದು. ಈ ವೇಳೆ ಗುಂಪುಗುಂಪಾಗಿ ಗಿರಾಕಿಗಳು ಬರುತ್ತಾರೆ. ಹಾಗಾಗಿ ಗಿರಾಕಿಗಳು ಅಂಗಡಿಗೆ ಹೆಚ್ಚು ಬಂದಾಗ ಅವರ ಮೇಲೆ ಕಣ್ಣಿಡುವ ಅಗತ್ಯವಿದೆ.ಟಿ
(ಮುಂದುವರಿಯುವುದು)
- ಶಾಂತ ತಮ್ಮಯ್ಯ