ಚಿನ್ನ-ಬೆಳ್ಳಿ ಅಂಗಡಿಯವರಿಗೆ ಒಂದಷ್ಟು ಮಾಹಿತಿ
- ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ತಾವು ಇಟ್ಟುಕೊಳ್ಳಲು ಕದಿಯುವುದಿಲ್ಲ. ಅದನ್ನು ಅಡವಿಟ್ಟು ಅಥವಾ ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಅದಕ್ಕೆ ಸುಲಭ ಮಾರ್ಗ ಗಿರವಿ ಅಂಗಡಿಗಳು. ಕದ್ದ ಆಭರಣವನ್ನು ಗಿರವಿ ಅಂಗಡಿಗಳ ಮಾಲೀಕರು ಸುಲಭವಾಗಿ ಕೊಳ್ಳುತ್ತಾರೆ. ಆದ್ದರಿಂದ ಗಿರವಿ ಅಂಗಡಿಯವರು ಅಥವಾ ಚಿನ್ನಾಭರಣ ಅಂಗಡಿಯವರು ಅಂತಹ ಕಳವು ಮಾಡಿ ತಂದ ಆಭರಣಗಳನ್ನು ಖರೀದಿಸಬಾರದು.
- ಹೆಚ್ಚು ಬೆಲೆಬಾಳುವ ಮಾಲನ್ನು ಕಡಿಮೆ ಹಣಕ್ಕೆ ಗಿರವಿ ಇಡುವ ಅಥವಾ ಮಾಲನ್ನು ಮಾರಲು ಬರುವ ವ್ಯಕ್ತಿ ಬಗ್ಗೆ ನಿಗಾವಹಿಸಿ.
- ಕಳವು ಮಾಡಿದ ಆಭರಣಗಳನ್ನು ಕಳ್ಳರು ತಂದಾಗ ಆ ಕಳವು ಮಾಲನ್ನು ಸ್ವೀಕರಿಸುವುದು ಬೇಡ. ಬದಲಿಗೆ ಅಂತಹವರು ನಿಮ್ಮ ಅಂಗಡಿಗಳಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿ. ಸಾಧ್ಯವಾದಲ್ಲಿ ಆರೋಪಿಯನ್ನು ಪೊಲೀಸರಿಗೆ ಹಿಡಿದುಕಡಲು ಹಾಗೂ ಆಭರಣವನ್ನು ಮಾಲೀಕರಿಗೆ ಹಿಂತಿರುಗಿಸಲು ಪೊಲೀಸರಿಗೆ ಸಹಕರಿಸಿ.
- ಆತನ ನಡವಳಿಕೆ, ವ್ಯವಹಾರದ ರೀತಿ-ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಆರೋಪಿಗಳು ಪರಾರಿಯಾಗದಂತೆ ಅಕ್ಕಪಕ್ಕದ ಅಂಗಡಿಯವರಿಗೆ ಮಾಹಿತಿ ನೀಡಿ ಪೊಲೀಸರು ಬರುವವರೆಗೂ ಅವರು ಅಲ್ಲಿಂದ ಪರಾರಿಯಾಗದಂತೆ ಎಚ್ಚರವಹಿಸಿ.
- ಪದೇ ಪದೆ ನಿಮ್ಮ ಅಂಗಡಿಗೆ ಆಭರಣ ಗಿರವಿಡಲು ಬರುವ ವ್ಯಕ್ತಿಗಳ ಮೇಲೆ ಹಾಗೂ ಅವರು ತರುವ ವಸ್ತುಗಳ ಮೇಲೆ ನಿಗಾವಹಿಸಿ. ಒಂದು ವೇಳೆ ಅನುಮಾನ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ.
- ನಿಮ್ಮ ಹತ್ತಿರದ ಅಥವಾ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಅಥವಾ ಪೊಲೀಸ್ ಕಂಟ್ರೋಲ್ ರೂಂನ ಸಂಖ್ಯೆ ನಿಮ್ಮ ಬಳಿ ಇರಲಿ. ಹಾಗಿದ್ದಲ್ಲಿ ಪೊಲೀಸರಿಗೆ ಸುಲಭವಾಗಿ ಮಾಹಿತಿ ನೀಡಬಹುದು.
- ಶಾಂತ ತಮ್ಮಯ್ಯ