ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೀರ ಮೇಲೆ ರಂಗೋಲಿ

Lingaraj Badiger
Updated On : 14 May 2014, 5:11 am

ಥಟ್ಟನೆ ನೋಡಿದರೆ ಇವು ಕುಂಚ ಬಣ್ಣದಿಂದ ರಚಿಸಿದ ಕಲಾಕೃತಿಗಳೆನ್ನಬಹುದು. ಆದರೆ, ಅದು ನಿಜವಲ್ಲ. ಇವು ನೀರಿನ ಮೇಲೆ ರಚಿತವಾದ ರಂಗೋಲಿ!
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲದ ಸಿದ್ದು ಅಡಿವೆಪ್ಪ ಇಟಗಿ ಈ ಕಲಾಕೃತಿಗಳ ಸೃಷ್ಟಿಕಾರ. ಸಿದ್ದು ಯಾವ ಕಲಾ ಕಾಲೇಜಿನ ಮೆಟ್ಟಲೇರಿದವರಲ್ಲ. ಯಾವ ತರಬೇತಿಯಲ್ಲೂ ಪಾಲ್ಗೊಂಡವರಲ್ಲ. ಆದರೂ ರಂಗೋಲಿ ಪುಡಿಯೊಂದಿಗೆ ಆಕರ್ಷಕ ಚಿತ್ರಗಳನ್ನು ರಚಿಸಿ ನೋಡುಗರನ್ನು ಬೆರಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದುಗೆ ರಂಗೋಲಿಯಲ್ಲಿ ಕಲೆ ಅರಳಿಸುವ ಆಸಕ್ತಿ ಹುಟ್ಟಿಕೊಂಡಿದ್ದು ಜಲಯೋಗ ಗುರುಗಳಾದ ಅರ್ಜುನ ಮೀರಜಕರ್‌ರಿಂದ. ಅರ್ಜುನ ದೂರದರ್ಶನದಲ್ಲಿ ಈಜುಪಟುಗಳ ಈಜಾಟ ಮತ್ತು ಯೋಗಾಸನಗಳ ಚಿತ್ರಣಗಳಿಗೆ ಆಕರ್ಷಿತರಾಗಿ, ಜಲಯೋಗಾಭ್ಯಾಸ ಕಲಿತು ಹೆಸರು ಮಾಡಿದವರು. ಇವರಂತೆಯೇ ಏನಾದರೂ ಹೊಸತನ್ನು ಮಾಡಬೇಕೆಂದು ಯೋಚನೆ ಬಂದಾಗ ಆಯ್ದುಕೊಂಡದ್ದು ಈ ರಂಗೋಲಿ ಕಲೆ.
ಪೇಟೆಯಲ್ಲಿ ಸಿಗುವ ಮಾಮೂಲಿ ರಂಗೋಲಿ ಪುಡಿಯೇ ಇದಕ್ಕೆ ಸಾಕು. ಮೊದಲು ನೀರಿನ ಮೇಲೆ ಸಲ್ಯೂಶನ್ ಹಾಕುತ್ತಾರೆ. ಅದರ ಮೇಲೆ ಇದ್ದಿಲು ಪುಡಿಯನ್ನು ದಟ್ಟವಾಗಿ ಹರಡುತ್ತಾರೆ. ಅನಂತರ ಪ್ರಮಾಣಕ್ಕೆ ತಕ್ಕಂತೆ ಕಲರ್ ಪುಡಿ ಉದುರಿಸಿ ಚಿತ್ರ ಬಿಡಿಸುತ್ತಾರೆ. ಇಂಥ ಚಿತ್ರಗಳನ್ನು ಪ್ರಮುಖ ದಿನಾಚರಣೆಗಳ ಸಂದರ್ಭಗಳಲ್ಲಿ ರಚಿಸುತ್ತಾರೆ. ಕ್ರಿಸ್‌ಮಸ್, ಸುಭಾಶ್ಚಂದ್ರ ಬೋಸ್, ನೆಹರು, ಭಗತಸಿಂಗ್ ಮತ್ತಿರರ ಚಿತ್ರಗಳನ್ನು ರಚಿಸಿದ್ದಾರೆ.
ಸಿದ್ದು ಅನಂತಪುರದ ಸರಕಾರಿ ಶಾಲಾ ಶಿಕ್ಷಕ. ಈ ಕಲೆಯನ್ನು ಶಿಬಿರ ನಡೆಸುವುದರ ಮೂಲಕ ಮಕ್ಕಳಿಗೂ ಕಲಿಸಲು ಆಸಕ್ತರಾಗಿದ್ದಾರೆ. ಈ ಕಲೆಯಿಂದ ಮಕ್ಕಳಲ್ಲಿ ಕುತೂಹಲ, ವಿಸ್ಮಯ, ಜಡವಸ್ತುಗಳು ತೇಲುವ ವೈಜ್ಞಾನಿಕ ಸತ್ಯತೆ ತಿಳಿಯುತ್ತದೆ. ಚಾಕ್‌ಪೀಸ್‌ನಲ್ಲಿ, ಮರದ ಅಂಟಿನಲ್ಲಿ, ಕಬ್ಬಿನ ಸಿಪ್ಪೆಯಲ್ಲಿ ಮತ್ತು ಬಿದಿರುಗಳಲ್ಲಿ ಇವರು ಕಲಾಕೃತಿಗಳನ್ನು ರಚಿಸಿದ್ದಾರೆ.
ಸಿದ್ದುಗೆ ಜಲಯೋಗವೂ ಗೊತ್ತು. ನೀರಿನ ಮೇಲೆ ತೇಲುತ್ತಾ ಪದ್ಮಾಸನ, ಮರ್ಕಟಾಸನ, ಅಂಗುಷ್ಟಾಸನಗಳನ್ನು ಸೊಗಸಾಗಿ ಹಾಕುತ್ತಾರೆ. ಸಿದ್ದುಗೆ ನೀವೂ ಹಲೋ ಹೇಳಿ, ಮೊ. 9538424111
-ಎ.ಎಸ್. ಹೂಲಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement