ಹೆಣ್ಣಲ್ಲವೇ! ನಾಟಕ
ಕ್ರಿಯೇಟಿವ್ ಥಿಯೇಟರ್ ಅರ್ಪಿಸುವ ನಾಟಕ 'ಹೆಣ್ಣಲ್ಲವೇ!' ಮೇ 15, ಗುರುವಾರದಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಸೌಮ್ಯ ವರ್ಮ ನಿರ್ದೇಶನದ ಈ ನಾಟಕವನ್ನು ಖ್ಯಾತ ರಂಗಭೂಮಿ ಹಾಗೂ ದೂರದರ್ಶನ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ ರಚಿಸಿ ಅಭಿನಯಿಸಿದ್ದಾರೆ.
'ಹೆಣ್ಣಲ್ಲವೇ!' ಒಂದು ವಿಶಿಷ್ಟ ಏಕವ್ಯಕ್ತಿ ರಂಗಪ್ರಯೋಗ. ಪುರಾಣ, ಸಾಹಿತ್ಯ ಹಾಗೂ ನಿಜಜೀವನದಿಂದ ಆಯ್ದುಕೊಂಡ ಹಲವು ಸ್ತ್ರೀ ಪಾತ್ರಗಳ ಮೂಲಕ ಪಿತೃಪ್ರಧಾನ ವ್ಯವಸ್ಥೆಯಡಿಯಲ್ಲಿ ತಲೆತಲಾಂತರದಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ, ಶೋಷಣೆಯ ವಿವಿಧ ಮುಖಗಳನ್ನು ತೆರೆದಿಡುತ್ತದೆ. ಜತೆಗೆ ಹೆಣ್ಣು ಈ ಸೋಷಣೆಯ ವಿರುದ್ಧ ನಡೆಸುತ್ತಾ ಬಂದಿರುವ ಹೋರಾಟದ ಪರಿಚಯವನ್ನೂ ಮಾಡಿಕೊಡುತ್ತದೆ. ಈ ನಾಟಕ ಈಗಾಗಲೇ 190ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ದೇಶವಿದೇಶಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.