ಪೆನ್ ಪಾಯಿಂಟ್
(ನಿಮಗೆ ಮಾರ್ಗದರ್ಶಿಯಾಗಬಲ್ಲ ಕೆಲ ಫನ್ನಿ ವಿಚಾರಗಳು ಈ ಪಾಯಿಂಟ್ ಟು ಪಾಯಿಂಟ್ ಕಾಲಂನಲ್ಲಿ)
ನನ್ನ ಗುರ್ತು ಸಿಗ್ತಾ?
ಬಂಧುಗಳ ಮನೆಗೆ ಮದುವೆಗೆ ಹೋಗುವಾಗ ಹುಷಾರಾಗಿರಿ. ಈ ಕೆಳಗಿನ ಪ್ರಶ್ನೆಗಳನ್ನು ನೀವು ಖಂಡಿತ ಎದುರಿಸಬೇಕಾಗುತ್ತೆ.
1. ಯಾರೋ ಆಂಟಿ: ನನ್ನ ಗುರ್ತು ಸಿಗ್ತಾ ಮರೀ?
ನೀವು ಉತ್ತರಿಸಬೇಕಾದ್ದು ಹೀಗೆ: ಓಹೋ, ಹೌದಲ್ಲ.
ಉತ್ತರಿಸಬೇಕಾದ್ದು ಹೀಗಲ್ಲ: ಖಂಡಿತ ಇಲ್ಲ, ಯಾರ್ನೀವು?
2. ಅಂಕಲ್: ಅರೇ, ಇಷ್ಟು ದೊಡ್ಡ ಯಾವಾಗ ಆದಿ?
ಹೀಗೆ ಹೇಳಿ: ಹಹ, ನೀವೂ ಗುರ್ತೇ ಸಿಗಲ್ಲ.
ಹೀಗಲ್ಲ: ಇಲ್ಲ, ಇನ್ನೂ ನಾಯಿ ಮರಿ ಥರಾ ಇದೀನಿ ಅಂದುಕೊಂಡ್ರಾ?
3. ಆಂಟಿ: ಮುಂದಿನ ಸರದಿ ನಿಂದೇ, ನೀನೂ ಸೆಟ್ಲಾಗಿಬಿಡು.
ಹೀಗೆ ಹೇಳಿ: ಹಹ, ಓಕೆ ಆಂಟಿ.
ಹೀಗಲ್ಲ: ಅದ್ನಾನು ನೋಡ್ಕೋತೀನಿ. ನಿಮ್ ಕೆಲ್ಸ ನೋಡ್ಕೊಳಿ.
4. ಆಂಟಿ: ಶರ್ಮಾ ಅವರ ಬ್ರದರ್ನ ಸೊಸೆಯ ಮಗಂಗೆ ತಂದ್ಕೊಂಡಿರೋ ಹುಡುಗಿಯ ಮಾವನ ಮಗಳ ಸಿಸ್ಟರ್ ನಿಂದೇ ಕಾಲೇಜಲ್ಲಿ ಓದ್ತಿರೋದಂತೆ ಗೊತ್ತಾ?
ಹೀಗೆ ಹೇಳಿ: ಇಲ್ಲ, ಯಾರದು?
ಹೀಗಲ್ಲ: ಆ...ಘ್ರ್...ಶಟಪ್!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.