ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜಿಆರ್‌ಎಸ್ ಸ್ವರ್ಗ

Mainashree
Updated On : 18 May 2014, 12:50 pm

ಮೈಸೂರಿಗೆ ಪ್ರವಾಸ ಹೋಗುವವರು ಕೇವಲ ಅರಮನೆ, ಪ್ರಾಣಿ ಸಂಗ್ರಹಾಲಯ, ಕೆಆರ್‌ಎಸ್ ನೋಡಿಕೊಂಡು ವಾಪಸಾದರೆ ಪ್ರವಾಸ ಅಪೂರ್ಣವೇ. ನೀವು ನೋಡಿ ಆನಂದಿಸಬೇಕಾದ ಇನ್ನೊಂದು ತಾಣ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್.
ನೀರು ನೀಡುವ ಮನರಂಜನೆ, ಮುದ, ಸಂತೃಪ್ತಿ ಹೇಳತೀರದ್ದು. ನೀರಿನ ಅದ್ಭುತ ಮಾಯಾಲೋಕ ತೆರೆದಿಟ್ಟು ಮೈಮನಗಳಿಗೆ ತಂಪು ಎರೆಯುವ ವಿಶಿಷ್ಟ ಲೋಕವೇ ಜಿಆರ್‌ಎಸ್. ಇಲ್ಲಿರುವ ವಾಟರ್ ರೈಡ್‌ಗಳು ಒಂದೆರಡಲ್ಲ. ಶರವೇಗದಲ್ಲಿ ನಿಮ್ಮನ್ನು ನೀರಿನ ಜಾರುಬಂಡೆಯಲ್ಲಿ ಜಾರಿಸುವ ವಾಟರ್ ಸ್ಲೈಡ್‌ಗಳು, ಕೃತಕ ತೆರೆ ಉಕ್ಕಿಸಿ ನಕ್ಕು ನಲಿಸುವ ಪುಟ್ಟ ಕಡಲು, ನೀರಿನ ಸುರಂಗದೊಳಕ್ಕೆ ನಿಮ್ಮನ್ನು ಮಿಂಚಿನ ವೇಗದಲ್ಲಿ ನುಗ್ಗಿಸಿ ಜಲಪ್ರಳಯ ಸೃಷ್ಟಿಸುವ ವಾಟರ್ ಟ್ರೇನ್, ಹೆಜ್ಜೆ ಹಾಕುತ್ತಾ ಸ್ನೇಹಿತರೊಂದಿಗೆ ಮೋಜು ಮಾಡಲು ಕಾರಂಜಿ ನೃತ್ಯ, ಬಿರು ಬೇಸಿಗೆಯಲ್ಲೂ 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳ ವೈಭವ, ತಣ್ಣನೆಯ ಕೊಳದಲ್ಲಿ ಇದ್ದಕ್ಕಿದ್ದಂತೆ ಭುಸುಗುಡುತ್ತ ಗುಡ್ಡದೆತ್ತರ ಮೇಲೇಳುವ ಡ್ರ್ಯಾಗನ್ ದರ್ಶನ, ಭಯ ಉಕ್ಕಿಸುವ ಡ್ಯಾಶಿಂಗ್ ಕಾರ್ ರೇಸ್... ಹೀಗೆ ಪುಟ್ಟ ಕಂದಮ್ಮಗಳಿಂದ ಹಿಡಿದು ಎಲ್ಲ ವಯೋವಾನದವರಿಗೂ ಭರ್ಜರಿ ವಿಹಾರ ಮಾಡಿಸುವ ತಾಣವಿದು.  
ಏಕತಾನತೆ ಕಾಡದಂತೆ ಪ್ರತಿವರ್ಷವೂ ಹೊಸ ಜಾಲಿ ರೈಡ್‌ನ ಆಕರ್ಷಣೆ ಒದಗಿಸುವುದು ಇಲ್ಲಿನ ವೈಶಿಷ್ಟ್ಯ. ಹೀಗಾಗಿ ಮತ್ತೆ ಮತ್ತೆ ಭೇಟಿ ಕೊಟ್ಟರೂ ಆಕರ್ಷಣೆ ನಿತ್ಯನೂತನ ಎಂಬುದು ಜಿಆರ್‌ಎಸ್‌ನ ರೂವಾರಿ ಯೋಗೇಶ್ ಡಾಂಗೆ ಅಭಿಪ್ರಾಯ.
ಉದಾಹರಣೆಗೆ ಇತ್ತೀಚೆಗೆ ತಂದ ಆಕ್ವಾ ಟಾರ್ನೆಡೋ ಎಂಬ ಹೊಸ ರೈಡ್. ಇದು ಕಗ್ಗತ್ತಲ ಸುರಂಗದ ದೋಣಿ ವಿಹಾರ. ಅದೇ ರೀತಿ ಹೊಸ ಭ್ರಮಾಲೋಕ ತೆರೆದಿಡುವ ವರ್ಚುವಲ್ ರೈಡ್. ಅಮೆಜಾನ್ ಕೊಳ್ಳದಲ್ಲಿ ಜಲಯಾನ ನಡೆಸುವ ಅನುಭೂತಿ ನೀಡುವ ರ್ಯಾಪಿಡ್ ರಿವರ್, ಹವಾಯಿಯನ್ ಪ್ಯಾರಡೈಸ್ ಇತ್ಯಾದಿಗಳಿವೆ.
ಹೀಗೆ ಜಿಆರ್‌ಎಸ್, ಪಾರಂಪರಿಕ ಅರಮನೆ ನಗರಿಗೆ ಆಧುನಿಕತೆಯ ಸ್ಪರ್ಶ ನೀಡಿದೆ. ಈ ಬೇಸಿಗೆ ರಜೆಯನ್ನು ಕಳೆಯಲು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಹೆಚ್ಚಿನ ಮಾಹಿತಿಗೆ: 9448557029, 0821 2582781.

=  ರಾಜು ಅಡಕಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement