ಕಳ್ಳತನ
ಭಾರತೀಯ ದಂಡಸಂಹಿತೆ ಕಾಯ್ದೆ 378ರ ಪ್ರಕಾರ ಯಾವುದೇ ವ್ಯಕ್ತಿಯ ಸ್ವಾಧೀನದಿಂದ ಆ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ಯಾವುದೇ ಚರ ಸ್ವತ್ತನ್ನು ಅಪ್ರಾಮಾಣಿಕವಾಗಿ ತೆಗೆದುಕೊಳ್ಳಲು ಉದ್ದೇಶಿಸಿ ಹಾಗೆ ತೆಗೆದುಕೊಳ್ಳುವುದಕ್ಕಾಗಿ ಆ ಸ್ವತ್ತನ್ನು ಕದಲಿಸುವ ವ್ಯಕ್ತಿಯು ಕಳವು ಮಾಡಿದ್ದಾನೆ ಎಂದು ಹೇಳಲಾಗುತ್ತದೆ.
ಈ ಅಪರಾಧಕ್ಕೆ 379ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದು.
ಕಳ್ಳತನದ ವಿಧಗಳು:
ಮನೆಗಳ್ಳತನ, ವಾಹನಗಳ್ಳತನ, ಜೇಬುಕಳ್ಳತನ, ಕಿಟಕಿ ಮೂಲಕ ಕಳ್ಳತನ, ಸೇವಕ/ಮನೆಕೆಲಸದವರಿಂದ ಕಳ್ಳತನ, ಮೊಬೈಲ್ ಕಳ್ಳತನ ಇತ್ಯಾದಿ.
ಮನೆಕಳವಿನ ಸಂದರ್ಭಗಳು:
ಮನೆಯಲ್ಲಿ ಯಾರೂ ಇಲ್ಲದೆ ಹೊರಗಡೆಯಿಂದ ಕಾಣುವ ಹಾಗೆ ಮನೆ ಬೀಗ ಹಾಕಿಕೊಂಡು ಹೋಗಿದ್ದಾಗ.
ಮನೆ ಬಾಗಿಲ ಮುಂದೆ ದಿನಪತ್ರಿಕೆಗಳು, ಹಾಲಿನ ಪೊಟ್ಟಣ ಎರಡು 3 ದಿನಗಳಿಂದ ಬಿದ್ದಿದ್ದರೆ ಅಥವಾ ಮನ ಮುಂದೆ ಕಸ ಬಿದ್ದಿದ್ದರೆ.
ಮನೆಯಲ್ಲಿ ಎರಡು ಮೂರು ದಿನ ರಾತ್ರಿ ದೀಪವನ್ನು ಹಾಕದೆ ಕತ್ತಲೆ ಇದ್ದಾಗ ಹಾಗೂ ಸಂಜೆ ವೇಳೆ ಮನೆಯಲ್ಲಿ ದೀಪ ಹಾಕದೇ ಕತ್ತಲೆ ಇದ್ದಾಗ, ಒಂಟಿ ಮನೆಗಳು ಇದ್ದಾಗ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಮನೆಗಳ್ಳತನವನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳು:
= ಮನೆಗಳಿಗೆ ಭದ್ರವಾದ ಡೋರ್ ಲಾಕ್ ಹಾಕುವ ವ್ಯವಸ್ಥೆಯನ್ನು ಮಾಡಿಸಿಕೊಳ್ಳಿ
= ಬೆಲೆಬಾಳುವ ಆಭರಣ/ನಗದು ನಾಣ್ಯಗಳನ್ನು ನಿಮ್ಮ ಕೆಲಸದಾಳುಗಳ ಮುಂದೆ ಅಥವಾ ಅಪರಿಚಿತರ ಮುಂದೆ ಪ್ರದರ್ಶಿಸಬೇಡಿ
= ಮನೆಯಿಂದ ಹೊರಗೆ ಹೋಗುವಾಗ ಹೊರಗಡೆಯಿಂದ ಕಾಣುವ ಹಾಗೂ ಬೀಗ ಹಾಕಬೇಡಿ. ಬದಲಾಗಿ ಯಾರಿಗೂ ಕಾಣದ ಹಾಗೆ ಡೋರ್ಲಾಕ್ಗಳನ್ನು ಉಪಯೋಗಿಸಿ ಟಿ
-ಶಾಂತ ತಮ್ಮಯ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.