ಮಸಾಲಾ ದಾಲ್
ಯಾವಾಗಲೂ ಒಂದೇ ರೀತಿಯ ದಾಲ್ ಸವಿಯುವುದೆಂದರೆ ಬೇಜಾರು. ಅದೇ ದಾಲ್ಗೆ ಸ್ವಲ್ಪ ಮಸಾಲೆ, ಸುಗಂಧವನ್ನು ಸೇರಿಸಿದರೆ ರುಚಿ ಹೆಚ್ಚುವುದು.
ಬೇಕಾಗುವ ಪದಾರ್ಥಗಳು: ಹೆಸರುಬೇಳೆ 1 ಕಪ್, ಕಡಲೆಬೇಳೆ 1 ಕಪ್(1 ಗಂಟೆ ನೀರಿನಲ್ಲಿ ನೆನೆಸಿರುವುದು), ಮಸೂರ್ ದಾಲ್ 1/2 ಕಪ್, ಈರುಳ್ಳಿ 1(ದೊಡ್ಡ ಗಾತ್ರದ್ದು), ಟೊಮೆಟೊ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಸಣ್ಣ ಚೂರು ಇಂಗು, ಅರಿಸಿನ ಪುಡಿ 1 ಚಮಚ, ಮೆಣಸಿನ ಪುಡಿ 1 ಚಮಚ, ಜೀರಿಗೆ ಪುಡಿ 1 ಚಮಚ, ಕೊತ್ತಂಬರಿ ಬೀಜ 1 ಚಮಚ, ಒಣಮೆಣಸು 1, ಎಣ್ಣೆ 2 ಚಮಚ, ನೀರು 3 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ನೀರು ಹಾಕಿ ಎಲ್ಲ ಬೇಳೆಯನ್ನೂ ಪ್ರಶ್ಶರ್ ಕುಕ್ಕರ್ನಲ್ಲಿ ಬೇಯಿಸಿಟ್ಟುಕೊಳ್ಳಿ. ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ ಜಜ್ಜಿದ ಕೊತ್ತಂಬರಿ ಬೀಜ, ಇಂಗು, ಒಣಮೆಣಸಿನಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ. ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ 3-4 ನಿಮಿಷ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಪುನಃ ಹುರಿಯಿರಿ. ನೀರಿನಂಶ ಹೋಗುವವರೆಗೆ ಹುರಿದು, ಚಿಕ್ಕದಾಗಿ ಕತ್ತರಿಸಿಟ್ಟುಕೊಂಡ ಟೊಮೆಟೊ, ಅರಿಸಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಸೇರಿಸಿ 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ. ಈಗ ಬೇಯಿಸಿದ ಬೇಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಉಪ್ಪು ಸೇರಿಸಿ. ಈಗ ರುಚಿಕರ ಮಸಾಲಾ ದಾಲ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.