ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮನೆಗಳ್ಳತನವನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳು

Lingaraj Badiger
Updated On : 20 May 2014, 4:25 am

ಮನೆಯಿಂದ ಎರಡು ಮೂರು ದಿನ ಹೊರಗೆ ಹೋಗುವ ಸಂದರ್ಭ ಬಂದಾಗ ಅಕ್ಕಪಕ್ಕದ ಮನೆಯವರಿಗೆ ತಿಳಿಸಿ ಹೋಗಿ. ಪೊಲೀಸ್ ಠಾಣೆಗೂ ಈ ಬಗ್ಗೆ ಮಾಹಿತಿ ನೀಡಿ. ನಿಮ್ಮ ಸಂಪರ್ಕ ಸಂಖ್ಯೆಯನ್ನೂ ನೀಡಿ.
    ದಿನಪತ್ರಿಕೆ ಮತ್ತು ಹಾಲು ಸರಬರಾಜು ಮಾಡುವವರಿಗೆ ಈ ಬಗ್ಗೆ ಮಾಹಿತಿ ನೀಡಿ, ಅವುಗಳನ್ನು ನಿಮ್ಮ ಮನೆಗೆ ಸರಬರಾಜು ಮಾಡುವುದನ್ನು ನಿಲ್ಲಿಸುವಂತೆ ತಿಳಿಸಿ.
    ಮನೆಯಿಂದ ಹೊರಗೆ ಹೋಗುವಾಗ ರಾತ್ರಿ ವೇಳೆಯಲ್ಲಿ ಒಂದು ವಿದ್ಯುತ್ ದೀಪವನ್ನು ಹತ್ತಿಸಿ ಹೋಗಿ.
    ಹೆಚ್ಚು ದಿನಗಳು ಹೊರಗೆ ಉಳಿಯಬೇಕಾಗಿ ಬಂದಲ್ಲಿ ನಿಮ್ಮ ಸಂಬಂಧಿಕರಿಗೆ ಮನೆಯ ಉಸ್ತುವಾರಿಯನ್ನು ವಹಿಸಿ ಹೋಗಿ.
    ಪ್ರತಿ ಮನೆಗೊಂದು ನಾಯಿಯನ್ನು ಸಾಕಿ. ನೀವು ಮನೆಯಿಂದ ಹೊರಗೆ ಹೋಗುವಾಗ ನಾಯಿಯನ್ನು ಕಟ್ಟಿಹಾಕದೆ ಹಾಗೆಯೇ ಮನೆಯೊಳಗೆ ಬಿಡಿ. ಹಾಗೆ ಮಾಡಿದಲ್ಲಿ ಅಪರಿಚಿತರು, ಕಳ್ಳರು ಬಂದಲ್ಲಿ ಯಾವುದೇ ಅನಾಹುತ ಸಂಭವಿಸುವುದಿಲ್ಲ.
    ನೆರೆಮನೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳಿ ಮತ್ತು ನೀವು ಹೊರಗೆ ಹೋಗುವಾಗ ನಿಮ್ಮ ಮನೆಯ ಬಗ್ಗೆ ನಿಗಾ ವಹಿಸುವಂತೆ ಅವರಿಗೆ ಹೇಳಿ ಅವರ ಸಹಕಾರ ಪಡೆದುಕೊಳ್ಳಿ.
    ಒಂದು ವೇಳೆ ಪೇಪರ್, ಹಾಲು ಬಂದಲ್ಲಿ ಅವುಗಳನ್ನು ಎತ್ತಿಟ್ಟುಕೊಳ್ಳುವಂತೆ ಸೂಚಿಸಿ. ಮನೆಗೆ ಯಾರಾದರೂ ಸ್ನೇಹಿತರು, ಸಂಬಂಧಿಕರು, ಅಪರಿಚಿತರು ಬಂದಲ್ಲಿ ಅವರ ಬಗ್ಗೆ ಗಮನಹರಿಸುವಂತೆಯೂ ತಿಳಿಸಿ.
    ಸಾಧ್ಯವಾದರೆ ಮನೆಗೆ ಅಥವಾ ಮನೆಯ ಗೇಟಿನ ಬಳಿ/ ಒಳಗೆ ಬರುವವರು ಕಾಣುವಂತೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement