ವ್ಯೂಹ ನಾಟಕ
ಶಶಿ ಕಲಾವಿದರು(ರಿ), ಬೆಂಗಳೂರು ಇವರು ಅರ್ಪಿಸುತ್ತಿರುವ ಹೊಸ ಪತ್ತೆದಾರಿ ನಾಟಕ 'ವ್ಯೂಹ' ಮೇ 21, 2014ರಂದು ಸಂಜೆ 7 ಗಂಟೆಗೆ ಗವಿಪುರಂ ಬಡಾವಣೆಯಲ್ಲಿರುವ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾವಿದ ಶ್ರೀನಾಥ್ ವಸಿಷ್ಠ ಅವರ ರಚನೆ ಹಾಗೂ ನಿರ್ದೇಶನವಿದೆ.
ಹಣದ ಆಮಿಶಕ್ಕೆ ಸಿಲುಕಿ ಹೆತ್ತವರನ್ನು ಕಡೆಗಣಿಸಿ, ಪರಿಚಯವಿಲ್ಲದವರಿಗೆ ಮನೆಯಲ್ಲಿ ಆಶ್ರಯ ಕೊಟ್ಟು, ಅವರ ತಾಳಕ್ಕೆ ಕುಣಿಯುವ ಒಬ್ಬ ಯುವಕನ ಸುತ್ತ ಹೆಣೆದಿರುವ ಕಥೆ ಇದು. ಎರಡು ಕೊಲೆಗಳ ಸುತ್ತ ನಾಟಕ ಸಾಗುತ್ತದೆ. ಯಾರು ಕೊಲೆ ಮಾಡಿದರು? ಹೇಗೆ ಪತ್ತೆಯಾಯಿತು? ಎನ್ನುವ ಕೂತೂಹಲ ಮೂಡಿಸುವ ಕಥಾಹಂದರವನ್ನು ವ್ಯೂಹ ಹೊಂದಿದೆ. ಅನಂತಕೃಷ್ಣ, ಪದ್ಮಲತಾ, ಅಭಯ್ ಹರ್ಷ, ರಾಮಕೃಷ್ಣಯ್ಯ ನೊಣವಿನಕೆರೆ, ಸಂಪತ್ಕುಮಾರ್, ಕೆ.ಜೆ. ರಜನಿ ಕುಮಾರ್, ನಾಗರಾಜ್ ಬಿ.ಎಚ್. ಮುರಳಿಧರ ಪಾತ್ರವರ್ಗದಲ್ಲಿದ್ದಾರೆ.
ದಿನಾಂಕ: 21-05-2014, ಸ್ಥಳ: ಕೆ.ಎಚ್. ಕಲಾಸೌಧ, ಗವಿಪುರಂ ಬಡಾವಣೆ, ಬೆಂಗಳೂರು. ಸಮಯ: ಸಂಜೆ 7 ಗಂಟೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.