ಅವಳಿಗೆ ಏನಿಷ್ಟವಿಲ್ಲ?
ಗಂಡಸರು ಮತ್ತು ಹೆಂಗಸರು ಇಬ್ಬರೂ ಬೇರೆ ಬೇರೆ ಬಗೆಯ ಪ್ರಾಣಿಗಳು. ಇಬ್ಬರ ನಡತೆ, ಹವ್ಯಾಸ, ಗುಣಗಳೂ ಬೇರೆ. ಹೆಂಡತಿ ನಿಜಕ್ಕೂ ಗಂಡನನ್ನು ಇಷ್ಟಪಡುವುದಿಲ್ಲವಾದರೂ, ಕೆಲವು ಸ್ತ್ರೀಯರು ಅದಕ್ಕೆ ಕಾರಣವನ್ನೂ ಹೊಂದಿರುತ್ತಾರೆ. ಗಂಡಿನ ಯಾವ ಗುಣ ಹೆಣ್ಣಿಗೆ ಇಷ್ಟವಾಗುವುದಿಲ್ಲ?
ಟಾಯ್ಲೆಟ್ನ್ನು ಕೊಳಕಾಗಿಡುವುದು. ಅವು ತನಗೆ ತಾನೇ ಸ್ವಚ್ಛವಾಗುತ್ತವೇನು?
ಮಂಚದ ಮೇಲೆ ಒದ್ದೆ ಟವಲ್ ಹಾಕುವುದು. ತಂತಿಗಳಿರುವುದೇತಕ್ಕೆ?
ಉದ್ವೇಗದಿಂದ ಕಿರುಚಾಡುವುದು. ಗಂಟಲು ಹರಿದುಕೊಳ್ಳದೆ ಅಭಿಪ್ರಾಯ ಹೇಳಬಾರದೆ?
ಕಿರುಕುಳ ಕೊಡುವ ದಾಡಿ, ಮೀಸೆ, ಮೈರೋಮ. ನೀವು ಕಾಡಿನಲ್ಲಿಲ್ಲ ಬಾಸ್!
ಉಂಡ ಬಟ್ಟಲು, ಕಾಫಿ ಕಪ್ಪು ಹಾಗೇ ಬಿಡುವುದು. ಅದೇನು ನಿಮ್ಮ ಪತ್ನಿಗೆ ಉರುಳುಸೇವೆ ಮಾಡೋಕಾ?
ಪತ್ನಿಯ ಫೋನ್ ಕರೆ ಎತ್ತದೇ ಇರುವುದು. ಸುಮ್ಸುಮ್ನೆ ಫೋನ್ ಮಾಡೋಕೆ ಅವಳೇನು ಗರ್ಲ್ಫ್ರೆಂಡಾ?
ಆಕೆಯ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದಿರುವುದು. ನಿಮ್ಮ ಹೆಲ್ತ್ ಆಕೆ ಕಾಪಾಡಿದ್ದು ಮರೆತುಹೊಯ್ತಾ?
ಇನ್ನೊಬ್ಬಾಕೆಯ ಮೇಲೆ ಕಣ್ಣು ಹಾಕುವುದು. ಇದಂತೂ ಭಾರಿ ಡೇಂಜರಸ್.