ಮನೆ ಕೆಲಸದವರಿಂದ ಕಳ್ಳತನ ಆಗುವ ಸಂದರ್ಭಗಳು
- ಮನೆಯಲ್ಲಿ ಮನೆಕೆಲಸದವರನ್ನು ಒಬ್ಬರನ್ನೇ ಬಿಟ್ಟು ಹೊರಗೆ ಹೋದಾಗ.
- ಹಣ ಅಥವಾ ಆಭರಣವನ್ನು ಸುರಕ್ಷಿತವಾಗಿ ಇಡದೆ, ಕಪಾಟಿನಲ್ಲಿ ಇಟ್ಟು ಬೀಗ ಹಾಕದೆ ಹೋದಾಗ.
- ಹಣ ಅಥವಾ ಆಭರಣಗಳನ್ನು ಮನೆಕೆಲಸದವರ ಮುಂದೆ ಪ್ರದರ್ಶನ ಮಾಡುವುದು, ಅವರುಗಳಿಗೆ ಗೊತ್ತಾಗುವ ಹಾಗೆ ಕಪಾಟಿನಲ್ಲಿ ಇಟ್ಟು ಬೀಗ ಹಾಕುವುದು, ಬೀಗವನ್ನು ಅವರಿಗೆ ತಿಳಿದಿರುವ ಜಾಗದಲ್ಲಿ ಇಡುವುದು ಮಾಡಿದಾಗ.
- ಕಾರುಗಳಲ್ಲಿ ಹಣವನ್ನಿಟ್ಟು ಚಾಲಕ ಒಬ್ಬನನ್ನೇ ಬಿಟ್ಟು ಹೊರಗೆ ಹೋದಾಗ.
- ಪೂರ್ವಾಪರ ತಿಳಿಯದ ಅಪರಿಚಿತರನ್ನು ಕೆಲಸಕ್ಕೆ ನೇಮಿಸಿಕೊಂಡಾಗ.
- ದುಶ್ಚಟಗಳಿಗೆ ದಾಸನಾಗಿರುವವವನ್ನು ಕೆಲಸಕ್ಕೆ ನೇಮಿಸಿಕೊಂಡಾಗ ಕಳ್ಳತನವಾಗುವ ಸಾಧ್ಯತೆ ಹೆಚ್ಚು.
- ಮನೆಯಲ್ಲಿ ಕೆಲಸದವರನ್ನು ಒಬ್ಬರನ್ನೇ ಬಿಟ್ಟು ಹೊರಗೆ ಹೋಗದೆ ಯಾರಾದರೂ ಅವರ ಜತೆ ಇರುವುದು, ಅಥವಾ ಅವರು ಹೋದ ನಂತರ, ಇಲ್ಲವೇ ಅವರನ್ನು ಕಳಿಸಿ ಭದ್ರವಾಗಿ ಬೀಗ ಹಾಕಿಕೊಂಡು ಹೋಗುವುದು.
- ಹಣ ಅಥವಾ ಬೆಲೆಬಾಳುವ ಆಭರಣ ಅಥವಾ ವಸ್ತುಗಳನ್ನು ಮನೆ ಕೆಲಸದವರ ಮುಂದೆ ಪ್ರದರ್ಶಿಸದೆ ಭದ್ರವಾಗಿ ಕಪಾಟಿನಲ್ಲಿ ಇಡುವುದು, ಕಪಾಟಿನ ಬೀಗವನ್ನೂ ಸಹ ಮನೆಯ ಸದಸ್ಯರಿಗೆ ಬಿಟ್ಟು ಬೇರೆಯವರಿಗೆ ತಿಳಿಯದೆ ಸುರಕ್ಷಿತ ಸ್ಥಳದಲ್ಲಿ ಇಡುವುದು ಒಳಿತು.
- ಮನೆ ಕೆಲಸದವರ ಚಲನವಲನಗಳ ಮೇಲೆ ಹಾಗೂ ಅವರ ಖರ್ಚುವೆಚ್ಚಗಳ ಮೇಲೆ ನಿಗಾ ಇಡಿ.
- ಶಾಂತ ತಮ್ಮಯ್ಯ