ಉಗುಳುಬಂಡಿ
ನಮ್ಮಲ್ಲಿ ಹಲವರಿಗೆ ಹೆಜ್ಜೆಗೊಮ್ಮೆ ಉಗುಳುವ ಚಟ. ಬೇರೆ ದೇಶಗಳಲ್ಲಿ ಬಲು ಅಪರೂಪವಾಗಿ ಕಾಣಸಿಗುವ ಈದೃಶ್ಯ ನಮ್ಮಲ್ಲಿ ಮಾತ್ರ ಅದೇಕೋ ನಿರಂತರ. ಮಾರ್ಕ್ಸ್ನಲ್ಲಿ ಹುಡುಗಿಯರಿಗಿಂತಾ ಹಿಂದೆ ಬಿದ್ದಿದ್ದರೂ ಈ ವಿಷಯದಲ್ಲಿ ಮಾತ್ರ ಗಂಡಸರದೇ ಮೇಲುಗೈ.
- ಉಗುಳುಭಟರೇ, ನಿಮ್ಮ ಆರ್ಭಟ ಹಲವರಲ್ಲಿ ಅಸಹ್ಯ ಹುಟ್ಟಿಸಿ ಅವರು ನಿಮಗೇ ಉಗುಳಿಕೊಂಡು ಹೋಗುವಂತಾದೀತು, ಹುಷಾರ್!
- ಬೊಗಳಿ ಬೊಗಳಿ ರಾಗ, ಉಗುಳಿ ಉಗುಳಿ ರೋಗ ಎನ್ನುವ ಮಾತನ್ನು ಕೇಳಿದ್ದೀರಿ ತಾನೇ? ಉಗುಳುವ ಚಟ ನಿಮ್ಮ ಅಂದಚೆಂದಕ್ಕೆ ವಿಕಾರದ ರೇಖೆಯೊಂದನ್ನು ಎಳೆದುಬಿಡುತ್ತದೆ.
- ವಾಹನಗಳಲ್ಲಿ ಹೋಗುವಾಗ ಪಕ್ಕದಲ್ಲಿ ಹೋಗುವವರು, ಹಿಂದೆ ಬರುತ್ತಿರುವವರಿಗೆ ನೀವು 'ಉಗುಳುಗಾಮಿ'ಗಳಾಗಿ ಭಯ ಹುಟ್ಟಿಸುವ ಪರಿಪಾಠ ಬಿಟ್ಟುಬಿಡಿ.
- ಒಮ್ಮೆ ಕಲ್ಪಿಸಿಕೊಳ್ಳಿ, ನಿಮ್ಮಂತೆಯೇ ನೀವು ನೋಡುವ ಸುಂದರ ಹುಡುಗಿಯರೆಲ್ಲರೂ 'ತುಪ್ಪಬೇಕೇ ತುಪ್ಪ?' ಎನ್ನುತ್ತಾ ದಾರಿಯುದ್ದಕ್ಕೂ ತುಪ್ಪುತ್ತಾ ಹೋದರೆ ಎಷ್ಟು ಕೆಟ್ಟದಾಗಿರುತ್ತಲ್ಲವೇ?
- ಭೂಮಿಯನ್ನು ತಾಯಿಯೆಂದು ಪೂಜಿಸುವ ನಾಡಲ್ಲಿ ಭೂಮಿಗೆ ಉಗುಳುವುದು ತಾಯಿಯನ್ನು ಅವಮಾನಿಸಿದಂತಾಗುವುದಿಲ್ಲವೇ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.