ಕ್ಯಾನ್ಸರ್ ತಡೆವ ಕ್ಯಾರೆಟ್ ಜ್ಯೂಸ್
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ. ಅದರಲ್ಲೂ ರಾತ್ರಿ ದೃಷ್ಟಿ ದೋಷಕ್ಕೆ ಅಧಿಕ ಪ್ರಮಾಣದ ವಿಟಮಿನ್ ಎ ಹೊಂದಿರುವ ಕ್ಯಾರೆಟ್ ಉತ್ತಮ ಮದ್ದು. ಕ್ಯಾರೆಟ್ನಲ್ಲಿರುವ ಕೆರೋಟಿನಾಯ್ಡ್ಗಳು ಕ್ಯಾನ್ಸರ್ ತಡೆಯುವುದಲ್ಲದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತವೆ. ಬಾಣಂತಿಯರು ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಅವರಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ವಿಟಮಿನ್ ಎ ಕೊರತೆಯಿಂದ ಒಣಗುವ ಕೂದಲು, ಚರ್ಮ, ಉಗುರುಗಳ ಹೊಳಪು ಉಳಿಸಲು ಕ್ಯಾರೆಟ್ ಜ್ಯೂಸ್ ಸಹಕಾರಿ.