ಪಾಲಾಕ್ ರಾಯಿತ
ಬಿಸಿಲ ಬೇಗೆಗೆ ಬಳಲಿಬೆಂಡಾದ ದೇಹಕ್ಕೆ ತುಸು ತಂಪನ್ನು ನೀಡುವುದು ಅವಶ್ಯಕ. ಅದು ರಾಯಿತವಾಗಿದ್ದಲ್ಲಿ ಅದರಷ್ಟು ಉತ್ತಮ ಬೇರೊಂದಿಲ್ಲ. ಪಾಲಾಕ್ ಸೊಪ್ಪಿನಲ್ಲ್ಲಿ ಐರನ್ ಹಾಗೂ ವಿಟಮಿನ್ಗಳು ಹೇರಳವಾಗಿರುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಕೂಡ ನೀಡಿ, ಬೇಸಿಗೆಯ ಉರಿಯನ್ನು ಶಮನಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು: ಪಾಲಾಕ್ ಅರ್ಧ ಕಪ್ (ಚಿಕ್ಕದಾಗಿ ಕತ್ತರಿಸಿದ್ದು), ದಪ್ಪ ತಾಜಾ ಮೊಸರು ಒಂದೂವರೆ ಕಪ್, ಹಸಿಮೆಣಸಿನಕಾಯಿ ಎರಡು, ಮೆಣಸಿನ ಪುಡಿ(ಪೆಪ್ಪರ್) ಕಾಲು ಚಮಚ, ಸ್ವಲ್ಪ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ದಂಟಿನಿಂದ ಸೊಪ್ಪನ್ನು ಬೇರ್ಪಡಿಸಿ ಬಿಸಿನೀರಿಗೆ ಹಾಕಿ. ಒಂದೆರಡು ನಿಮಿಷಗಳ ನಂತರ ನೀರಿನಿಂದ ತೆಗೆದು ಎಲೆಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಒಂದು ಬೌಲ್ನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಸಕ್ಕರೆ, ಹಸಿಮೆಣಸಿನಕಾಯಿ(ಸಣ್ಣಗೆ ಹೆಚ್ಚಿದ್ದು), ಕಾಳುಮೆಣಸಿನಪುಡಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಪಾಲಾಕ್ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ರಾಯಿತ ತಯಾರಾದಂತೆ. ಈ ರಾಯಿತವನ್ನು ಫ್ರಿಜ್ನಲ್ಲಿಟ್ಟು ಸ್ವಲ್ಪ ತಣ್ಣಗೆ ಮಾಡಿ ನಂತರ ಸರ್ವ್ ಮಾಡಿ. ಆರೋಗ್ಯಯುತವಾದಿ ಪಾಲಾಕ್ ರಾಯಿತವನ್ನು ಪುಲಾವ್, ರೈಸ್ಬಾತ್ ಅಥವಾ ಪರೋಟಾ ಜತೆಯಲ್ಲೂ ಸವಿಯಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.