ಹಾರ್ಟ್ ಅಟ್ಯಾಕ್ ಪ್ರಥಮ ಚಿಕಿತ್ಸೆ
ನಿಮ್ಮ ಜೊತೆಗಿರುವವರು ಇದ್ದಕ್ಕಿದ್ದಂತೆ ಎದೆನೋವಿನಿಂದ ಬಳಲಿದರೆ ಮೊದಲು ಅವರನ್ನು ರಿಲ್ಯಾಕ್ಸ್ ಆಗುವಂತೆ ಕೂರಿಸಿ ಬಟ್ಟೆಯನ್ನು ಸಡಿಲಗೊಳಿಸಿ. ಮಲಗಿಸಲು ಹೋಗಬೇಡಿ. ಹೃದಯ ಸಂಬಂಧಿ ರೋಗಗಳಿಗೆ ಅವರು ಯಾವುದಾದರೂ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆಯೇ ವಿಚಾರಿಸಿ ಹೌದಾದಲ್ಲಿ ಮಾತ್ರೆ ನೀಡಿ. (ಆ್ಯಸ್ಪರಿನ್ ಮಾತ್ರೆ ಚೀಪಲು ಕೊಡಿ, ಸಾಧ್ಯವಾಗದಿದ್ದರೆ ಪುಡಿ ಮಾಡಿ ನಾಲಿಗೆ ಅಡಿ ಇಡಿ) ನೀರು ಕುಡಿಸಲು ಹೋಗಬೇಡಿ. ಸಾಧ್ಯವಾದರೆ ಕೆಮ್ಮಲು ಹೇಳಿ. ನಂತರ 108ಗೆ ಕರೆ ಮಾಡಿ ಇಲ್ಲವೇ ನೋವು ನಿಂತಿದ್ದಲ್ಲಿ ನೀವೇ ಆಸ್ಪತ್ರೆಗೆ ಕರೆದೊಯ್ಯಿರಿ.