ಬ್ಯಾಂಕ್ ಲೋನ್
ಕೋಲ್ಯ ಕಾರ್ ಲೋನ್ ತೆಗೆದ್ಕೊಂಡಿದ್ದ. ಕೆಲವು ತಿಂಗಳ ನಂತರ ಕಂತುಗಳ ಸಾಲ ಕಟ್ಟೋದಿಕ್ಕಾಗ್ಲಿಲ್ಲ. ಬ್ಯಾಂಕ್ನೋರು ಬಂದು ಕಾರನ್ನು ಎತ್ತಾಕ್ಕೊಂಡ್ ಹೋದ್ರು. ಕೋಲ್ಯ ಅಚ್ಚರಿಯಲ್ಲಿ ತಲೆಮೇಲೆ ಕೈ ಹೊತ್ಕೊಂಡ್ ಕೂತ.
ಕೋಲ್ಯಿಣಿ: ಯಾಕ್ರೀ ಅಷ್ಟೊಂದ್ ಬೇಜಾರ್ ಮಾಡ್ಕೊಂಡಿದ್ದೀರಿ. ಈ ಕಾರ್ ಅಲ್ಲದಿದ್ರೆ ಇನ್ನೊಂದು ಕಾರು, ಅಷ್ಟೇ.
ಕೋಲ್ಯ: ಥೋ, ನನ್ಗೆ ಕಾರ್ ಹೋದ ಬಗ್ಗೆ ಚಿಂತೆ ಇಲ್ಲ.
ಕೋಲ್ಯಿಣಿ: ಮತ್ತೇಕೆ ಇಷ್ಟೊಂದು ಅಪ್ಸೆಟ್ ಆಗಿದ್ದೀರಿ?
ಕೋಲ್ಯ: ಏನಿಲ್ಲಾ, ನಾನು ಮ್ಯಾರೇಜ್ ಲೋನ್ ಅನ್ನೂ ಆರು ತಿಂಗಳಿಂದ ಕಟ್ಟಿರ್ಲಿಲ್ಲ. <
---
ಒಂದೇಟು
ಕ್ಷೌರಿಕರಿಗೆ 'ಶಾರ್ಟ್ ಕಟ್' ಗೊತ್ತಿದ್ರೂ ಅವರು 'ಡ್ರೈವರ್' ಆಗಲ್ಲ.
ಎಲ್ಲ ಮುಗಿದ ಮೇಲೆ ಹುಡುಗ 'ಒಳ್ಳೆ ಚಾನ್ಸು ಸಿಕ್ತು' ಅಂದ್ರೆ, ಹುಡುಗಿ 'ಛೇ! ತಪ್ಪಾಗಿ ಹೋಯ್ತು' ಅಂತಾಳೆ.
'ಫಿಗರ್'ಗಳ ಜತೆ ಇದ್ರೂ ಕೆಲವು ಅಕೌಂಟೆಂಟ್ಗಳಿಗೆ ಲವ್ ಮಾಡೋದಿಕ್ಕೆ ಪುರುಸೊತ್ತಿರೋದಿಲ್ಲ.
ಒಬ್ಬ ಟೀಚರ್ರಿಂದ ಎಲ್ಲ ಸಬ್ಜೆಕ್ಟ್ಗಳ ಪಾಠ ಮಾಡೋದಿಕ್ಕೆ ಹೇಗೆ ಆಗೋದಿಲ್ವೋ, ಒಬ್ಬ ಸ್ಟೂಡೆಂಟ್ನಿಂದ ಎಲ್ಲ ವಿಷಯಗಳನ್ನೂ ಓದೋದಿಕ್ಕಾಗಲ್ಲ.
ಕುಡಿತದಿಂದ ಶೇ.10 ಅಪಘಾತಗಳಾಗುತ್ತಿವೆ. ಮಿಕ್ಕ ಶೇ.90 ಅಪಘಾತಗಳು ಕುಡಿಯದೇ ಇರುವ ಸಾಚಾಗಳಿಂದಾಗುತ್ತವೆ.
ಹೆಂಡ್ತಿಯನ್ನು ಮೊಸಳೆಯ ಕೊಳದೊಳಗೆ ಬಿಟ್ಟರೆ ಪ್ರಾಣಿ ದಯಾ ಸಂಘದವರು ಪ್ರತಿಭಟನೆ ಮಾಡ್ತಾರೆ.
ನಿನ್ನೆಯಷ್ಟೇ ನನ್ನೆಲ್ಲ ಸಮಸ್ಯೆ ಕ್ಲಿಯರ್ ಆಯ್ತು ಅಂದ್ಕೊಂಡಿದ್ದೆ. ಇವತ್ತು ನೀನು ಬಂದೆ.
ಗಂಡಸು ಅಂದ್ರೆ ನಾನೇ. ಅವಳಿಗೆ ಡೈವೋರ್ಸ್ ಕೊಟ್ಟೆ. ಮನೆಬಿಟ್ಟು ಹೊರ ನಡೆದೆ! <
---
ಟೀಚರ್: ಯಾವ ಜೀವಿ ಆಕಾಶದಲ್ಲಿ ಹಾರಿದ್ರೂ, ಮರಿ ಹಾಕಲು ಭೂಮಿಗೇ ಇಳಿಯುತ್ತೆ?
ಮರಿಕೋಲ್ಯ: ಗಗನಸಖಿ.
ಕೋಲ್ಯ: ನಾನು ನಿನ್ಗೆ ಸದಾ ಬಯ್ತಾ ಇರ್ತೀನಿ. ಆದ್ರೂ, ನಿನ್ಗೆ ಕೋಪ ಬರಲ್ಲಲ್ಲ! ಸಿಟ್ಟನ್ನು ಅದ್ಹೇಗೆ ನಿಯಂತ್ರಿಸಿಕೊಳ್ತೀಯಾ?
ಮರಿಕೋಲ್ಯ: ತುಂಬಾ ಸಿಂಪಲ್ ಪಪ್ಪಾ, ನೀನು ಬಯ್ದಾಗೆಲ್ಲ ನಿನ್ನ ಟೂಥ್ಬ್ರಶ್ನಿಂದ ಟಾಯ್ಲೆಟ್ ಕ್ಲೀನ್ ಮಾಡ್ತೀನಷ್ಟೇ.
ಕೋಲ್ಯಿಣಿ: ರೀ ರೀ ಏಳ್ರೀ... ಅಡುಗೆಮನೆಗೊಬ್ಬ ಕಳ್ಳ ನುಗ್ಗಿ, ನಾನು ಮಾಡಿದ ಕೇಕ್ ತಿನ್ತಿದ್ದಾನೆ.
ಕೋಲ್ಯ: ಆ್ಯಂಬುಲೆನ್ಸ್ಗೆ ಫೋನ್ ಮಾಡೋದ್ ಬಿಟ್ಟು ನನ್ನನ್ನೇಕೆ ಎಬ್ಬಿಸ್ತಿದ್ದೀಯಾ?
ಫಂಟಾ: ನಿದ್ರೆಯಲ್ಲೂ ಪತ್ತೇದಾರಿಕೆ ನಡೆಸುವವಳನ್ನು ನೀನು ನೋಡಿದ್ಯಾ?
ಕೋಲ್ಯ: ಹೌದು, ನಾನವಳನ್ನು ಮದ್ವೆ ಆಗಿದ್ದೀನಿ.
---
ಕೋಲ್ಯ: ಕಟಿಂಗಿಗೆ ಎಷ್ಟು?
ಕ್ಷೌರಿಕ: 40 ರುಪಾಯಿ.
ಕೋಲ್ಯ: ಶೇವಿಂಗಿಗೆ?
ಕ್ಷೌರಿಕ: 20 ರುಪಾಯಿ.
ಕೋಲ್ಯ: ಹಾಗಾದ್ರೆ ನನ್ನ ತಲೆಗೆ ಶೇವಿಂಗ್ ಮಾಡಿ.
ಕೋಲ್ಯ ಒಂದು ತಿಂಗಳ ವಿದೇಶಿ ಪ್ರಯಾಣದ ನಂತರ ಮನೆಗೆ ವಾಪಸ್ಸಾದ.
ಕೋಲ್ಯ: ನಾನು ಫಾರಿನ್ನರ್ ಥರ ಕಾಣ್ತಿದ್ದೀನಾ?
ಕೋಲ್ಯಿಣಿ: ಇಲ್ಲಾ. ಯಾಕೆ?
ಕೋಲ್ಯ: ಮತ್ತೆ ಲಂಡನ್ನೊಬ್ಳು ಲೇಡಿ ನನ್ನ 'ಆರ್ ಯು ಎ ಫಾರಿನ್ನರ್?' ಅಂತ ಕೇಳಿದ್ಲಲ್ಲಾ..!
ಸಂದರ್ಶಕ: 100 ಲೆಟರ್ಸ್ ಇರುವ ಒಂದು ಪದ ಹೇಳಿ?
ಕೋಲ್ಯ: ಪೋಸ್ಟ್ಬಾಕ್ಸ್!
---
ಕೋಲ್ಯಿಣಿ: ಡಾಕ್ಟರ್, ನೀವು ಕೊಟ್ಟ ಮೆಡಿಸಿನ್ ವರ್ಕೌಟ್ ಆಗ್ತಿಲ್ಲ. ನನ್ನ ಗಂಡ ಇನ್ನೂ ನಿದ್ರೇಲಿ ಮಾತಾಡ್ತಾರೆ.
ಡಾಕ್ಟರ್: ಹೌದಾ, ಹಾಗಾದ್ರೆ ಮಾತು ನಿಲ್ಲೋಕೆ ಮತ್ತೊಂದು ಮೆಡಿಸನ್ ಬರ್ಕೊಡ್ತೀನಿ.
ಕೋಲ್ಯಿಣಿ: ಬೇಡ ಡಾಕ್ಟರ್, ಆ ಮಾತನ್ನೂ ಇನ್ನೂ ಜೋರಾಗಿ ಆಡ್ಲಿಕ್ಕೆ ಮಾತ್ರೆ ಕೊಡಿ.
---
ತಗೋರಿ
ನಾನು ಅವತ್ತೂ ಪೊಲೀಸರಿಗೆ ಬೇಕಾಗಿದ್ದೆ. ಅವರ ಕೈಗೆ ಸಿಗದೆ ಅಡಗಿ ಕೂತಿದ್ದೆ. ಇವತ್ತಿಗೂ ನಾನು ಅವರ ಕಣ್ಣಿಗೆ ಬಿದ್ದಿಲ್ಲ. ಇದು ನನ್ನ ಸಾಮರ್ಥ್ಯ.
- ಬ್ರ್ಯಾಂಕಿ ನೂಡಲ್, ಅಡಿಲೈಡ್ನ ಸಮಾಧಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.