ಸರ್ಕಾರವೇ ಭತ್ತ ಬೆಳೆದರೂ ಒಂದು ರೂ.ಗೆ ಅಕ್ಕಿ ಕೊಡಲು ಸಾಧ್ಯವೇ?
ಸರ್ಕಾರವೇ ಭತ್ತ ಬೆಳೆದರೂ ಒಂದು ರೂ.ಗೆ ಅಕ್ಕಿ ಕೊಡಲು ಸಾಧ್ಯವೇ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ನ್ಯಾಯಾಲಯದಲ್ಲಿ ಹುಚ್ಚರ ಮೇಲೇಕೆ ಕೇಸ್
ಹಾಕುವುದಿಲ್ಲ?
- ಕೇಸ್ ಮುಗಿಯುವ ಹೊತ್ತಿಗಾಗಲೇ ಹಲವರು ಹುಚ್ಚರಾಗಿರ್ತಾರಲ್ಲ!
ವಿ. ಹೇಮಂತಕುಮಾರ್, ಬೆಂಗಳೂರು.
= ಸಿನಿಮಾ ಡ್ಯಾನ್ಸ್ಗೂ ಭರತನಾಟ್ಯಕ್ಕೂ
ವ್ಯತ್ಯಾಸವೇನು?
- ಸಿನಿಮಾ ಡ್ಯಾನ್ಸ್ ಗುರುವಿಲ್ಲದ ವಿದ್ಯೆ,
ಭರತನಾಟ್ಯಕ್ಕೆ ಗುರು ಬೇಕೇ ಬೇಕು!
ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ.
ಬಿಗ್ಬಾಸ್ನಲ್ಲಿ ದರ್ಶನ್ ಏಕೆ ಇಲ್ಲ?
- ಅವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ!
ಜೆ.ಆರ್. ಆದಿನಾರಾಯಣಮುನಿ,
ಶ್ರೀಕೋಡಿಹಳ್ಳಿಮಠ
ಶ್ರೀಕೃಷ್ಣ ತನ್ನ ಬಡ ಸ್ನೇಹಿತನನ್ನೇಕೆ ಶ್ರೀಮಂತನನ್ನಾಗಿ ಮಾಡಲಿಲ್ಲ?
- ಅವನಲ್ಲೂ ಒಬ್ಬ ರಾಜಕಾರಣಿಯ ಗುಣ ಇತ್ತಲ್ಲ!
ಪಿ.ಜಿ. ರಾಘವೇಂದ್ರ, ಮೈಸೂರು.
= ಕೆ.ಜೆ.ಪಿ. ಬಂದ್ರೆ ಒಂದು ರೂ.ಗೆ ತೆಂಗಿನಕಾಯಿ ಕೊಡ್ತಾರಾ?
- ತಿಪಟೂರು ಜಿಲ್ಲೆಯಲ್ಲಿ ಮೆಜಾರಿಟಿ ಬಂದ್ರೆ ಕೊಡಬಹುದು!
ಬಿ. ಶ್ರೀನಾಥ, ಶಾರದಾದೇವಿನಗರ, ಮೈಸೂರು.
ಯಡಿಯೂರಪ್ಪ ಮುಂದಿನ ಸಿ.ಎಂ. ಆಗ್ತಾರಾ ಇಲ್ಲ ಕೆಎಂ (ಕಿಂಗ್ ಮೇಕರ್) ಆಗ್ತಾರಾ?
- ಮನೇಲಿ ಕಿಂಗ್ ವೇಷ ಹಾಕ್ಕೊಂಡು
ಕೂರಬಹುದು!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಕೈಗೆ ಬಂದ ತುತ್ತು ತಕ್ಷಣ ಬಾಯಿಗೆ ಬರುವಂತೆ ಮಾಡುವುದು ಹೇಗೆ?
- ತಟ್ಟೆ ಕೈಗೆ ಬಂದ ತಕ್ಷಣ ತಟ್ಟೆಗೇ ಬಾಯಿ
ಹಾಕುವುದು!
-ಘಾಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.